More

    ಉಡುಪಿಗೆ ಸುಸಜ್ಜಿತ ಪಶು ಆಸ್ಪತ್ರೆ

    ಅವಿನ್ ಶೆಟ್ಟಿ, ಉಡುಪಿ

    ಹಲವು ವರ್ಷಗಳ ಬೇಡಿಕೆ ಬಳಿಕ ಜಿಲ್ಲೆಯಲ್ಲಿ ಸುಸಜ್ಜಿತ ಪಶು ಆಸ್ಪತ್ರೆ ನಿರ್ಮಾಣಗೊಂಡಿದೆ.
    ನಗರದ ಬೈಲೂರು ಮಹಿಷ ಮರ್ದಿನಿ ದೇವಳ ಸಮೀಪ 2.10 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಪಶು ಆಸ್ಪತ್ರೆ(ಪಾಲಿ ಕ್ಲಿನಿಕ್) ನಿರ್ಮಿಸಲಾಗಿದೆ. ಬೈಲೂರಿನಲ್ಲಿ ಪಶುಪಾಲನಾ ಇಲಾಖೆ ಕಚೇರಿ ಸಮೀಪ ಸಣ್ಣದಾಗಿ ಪಾಲಿ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದ್ದು, ಹಳೆಯ ಕಟ್ಟಡ, ಜಾಗದ ಕೊರತೆ ಸಮಸ್ಯೆಗೆ ಪರಿಹಾರವಾಗಿ ಸುಸಜ್ಜಿತ ಪಾಲಿ ಕ್ಲಿನಿಕ್‌ಗೆ ಬೃಹತ್ ಕಟ್ಟಡ ನಿರ್ಮಿಸಲಾಗಿದೆ.

    ಕರ್ನಾಟಕ ಗೃಹ ಮಂಡಳಿ ಕಟ್ಟಡ ನಿರ್ಮಿಸಿದ್ದು, 2019ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು. 8.462 ಚದರ ಅಡಿಯಲ್ಲಿ 11 ಕೊಠಡಿಗಳಿರುವ ಕಟ್ಟಡವಿದು. ಆಸ್ಪತ್ರೆಯಲ್ಲಿ ದೊಡ್ಡ ಪ್ರಾಣಿಗಳ ಇನ್‌ಪೇಶೆಂಟ್ ವಾರ್ಡ್, ಒಪಿಡಿ ಸೇವೆ, ಸಣ್ಣ ಪ್ರಾಣಿಗಳ ಇನ್‌ಪೇಶೆಂಟ್ ವಾರ್ಡ್, ಒಪಿಡಿ ಕೊಠಡಿಗಳಿವೆ. ಡಯಾಗ್ನಸ್ಟಿಕ್ ಲ್ಯಾಬ್, ಎಕ್ಸ್‌ರೇ, ಅಲ್ಟ್ರಾ ಸ್ಕಾೃನಿಂಗ್, ಶಸ್ತ್ರಚಿಕಿತ್ಸೆ ಕೊಠಡಿ, ಸರ್ಜನ್ ಕೊಠಡಿ, ಮುಖ್ಯ ವೈದ್ಯರ ಕೊಠಡಿ, ಪೋಸ್ಟ್ ಮಾರ್ಟಮ್, ಐಸೊಲೇಷನ್ ಕೊಠಡಿ, ಫಾರ್ಮಸಿ ವಿಭಾಗಗಳಿವೆ.

    5.48 ಲಕ್ಷ ರೂ. ಮೌಲ್ಯದ ಸ್ಕಾೃನಿಂಗ್ ಯಂತ್ರ: ಪಾಲಿ ಕ್ಲಿನಿಕ್ ಅತ್ಯಾಧುನಿಕ ಪರಿಕರಗಳನ್ನು ಹೊಂದಲಿದ್ದು, 5.48 ಲಕ್ಷ ರೂ. ಮೌಲ್ಯದ ಅಲ್ಟ್ರಾ ಸ್ಕಾೃನಿಂಗ್ ಯಂತ್ರ ಬಂದಿದೆ. ಪ್ರಾಣಿಗಳ ಆರೋಗ್ಯದಲ್ಲಿ ದೇಹದ ಒಳಗಿನ ನ್ಯೂನತೆ, ಅಂಗವೈಕಲ್ಯ, ಗರ್ಭಾವಸ್ಥೆಯಲ್ಲಿ ಮರಿಗಳ ಆರೋಗ್ಯ ಸ್ಥಿತಿಗತಿ ತಿಳಿಯಬಹುದು. ಎಕ್ಸ್‌ರೇ, ರಕ್ತ ಮಾದರಿ ಪರೀಕ್ಷೆ, ಕ್ಲಿನಿಕಲ್ ಲ್ಯಾಬ್‌ಗಳನ್ನು ಈ ಪಾಲಿಕ್ಲಿನಿಕ್ ಹೊಂದಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಹರೀಶ್ ಸಾಂವಕರ್ ತಿಳಿಸಿದರು.

    ಸಿಬ್ಬಂದಿ, ವೈದ್ಯರ ಕೊರತೆ: ಜಿಲ್ಲೆಯ ಪಶುಪಾಲನಾ ಇಲಾಖೆಯಲ್ಲಿ ಸಿಬ್ಬಂದಿ, ವೈದ್ಯರ ಕೊರತೆ ಗಂಭೀರವಾಗಿದೆ. ಪ್ರಸ್ತುತ 357 ಹುದ್ದೆಯಲ್ಲಿ 92 ಮಾತ್ರ ಭರ್ತಿಯಾಗಿದೆ. ಪಶು ವೈದ್ಯಾಧಿಕಾರಿ, ಸಹಾಯಕ ಆಡಳಿತಾಧಿಕಾರಿ, ಜಾನುವಾರು ಅಧಿಕಾರಿ, ಪಶುವೈದ್ಯಕೀಯ ಪರೀಕ್ಷಕ, ಸಹಾಯಕರು, ಡಿ ದರ್ಜೆ ನೌಕರರು ಸೇರಿದಂತೆ 265 ಹುದ್ದೆಗಳು ಖಾಲಿ ಇದ್ದು, ಇಲಾಖೆ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ.

    ಬೈಲೂರಿನಲ್ಲಿ ಪಾಲಿ ಕ್ಲಿನಿಕ್ ಕಟ್ಟಡ 2.10 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಗೃಹ ನಿಗಮದಿಂದ ಟೆಂಡರ್ ಆಗಿ ನಿರ್ಮಾಣಗೊಂಡು, ಕಾಮಗಾರಿ ಪೂರ್ಣಗೊಂಡಿದೆ. ವ್ಯವಸ್ಥಿತವಾಗಿ ಕಟ್ಟಡ ನಿರ್ಮಿಸಲಾಗಿದೆ. ನೀರು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
    – ಹರೀಶ್, ಜೂನಿಯರ್ ಇಂಜಿನಿಯರ್, ಕರ್ನಾಟಕ ಗೃಹ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts