More

    ಬಾಡುವ ಕಮಲಕ್ಕಿಂತ ಕಾಣುವ ಹಸ್ತಕ್ಕೆ ಮತ ಹಾಕಿ

    ವಿಜಯವಾಣಿ ಸುದ್ದಿಜಾಲ ಆನೇಕಲ್
    ಬಾಡುವ ಕಮಲಕ್ಕಿಂತ ಸದಾ ಕಾಣುವ ಹಸ್ತಕ್ಕೆ ಮತ ಹಾಕಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
    ಜಿಗಣಿ ಕೈಗಾರಿಕಾ ಪ್ರದೇಶದದ ರಿಚಾ ಗ್ಲೋಬಲ್ ಗಾರ್ಮೆಂಟ್ಸ್, ಡಿಎಲ್ಎಫ್ ಅಪಾರ್ಟ್ಮೆಂಟ್, ಹೆನ್ನಾಗರ ಸಮೀಪದ ವಕೀಲ್ ಬಡಾವಣೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ನಾವು ನರೇಂದ್ರ ಮೋದಿ ಅವರಂತೆ ಸುಳ್ಳು ಭರವಸೆಗಳನ್ನು ಜನರಿಗೆ ನೀಡುವುದಿಲ್ಲ. ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಜನರು ಹಾಗೂ ಕಾರ್ಮಿಕರ ಭಾವನೆಗಳನ್ನು ನೀಗಿಸುವ ಸಲುವಾಗಿ ಡಿ.ಕೆ.ಸುರೇಶ್ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
    ನಾನು ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸಲು ಇಲ್ಲಿಗೆ ಬಂದಿಲ್ಲ, ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ 136 ಜನ ಶಾಸಕರ ಸುಭದ್ರ ಸರ್ಕಾರ ರಾಜ್ಯದಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕೆಂದು ಈ ನಿಟ್ಟಿನಲ್ಲಿ ಭದ್ರಬುನಾದಿ ಇರುವ ಕಾಂಗ್ರೆಸ್‌ಗೆ ಮತ ಹಾಕಿದಾಗ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದರು. ಅಚ್ಚೆದಿನ್ ತರ್ತೇವೆ ಎಂದು ಸುಳ್ಳು ಹೇಳಿದ ಮೋದಿ ಅವರ ಮರಳು ಮಾತಿಗೆ ಮೋಡಿಯಾಗದೆ ಜನ ಅಭಿವೃದ್ಧಿ ಮಾಡುವವರ ಪರವಾಗಿರಿ ಎಂದರು.
    ಬಮುಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಬಾಬು ರೆಡ್ಡಿ, ಡಿ.ಕೆ.ವಿನೋದ್, ಗ್ರಾಪಂ ಅಧ್ಯಕ್ಷ ಮಹೇಶ್, ಕಿರಣ್ ಕುಮಾರ್ ಹೆನ್ನಾಗರ, ಆನಂದ್ ಗೌಡ, ಶ್ರೀಧರ್, ಪ್ರಸನ್ನ ಕುಮಾರ್, ಆರ್.ಕೆ.ಕೇಶವ ರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts