More

    ಬಿಜೆಪಿಯಿಂದ ದ್ವೇಷದ ರಾಜಕಾರಣ

    ಚಿತ್ರದುರ್ಗ: ರಾಹುಲ್ ಗಾಂಧಿ ಅವರ ಸಂಸದ ಸ್ಥಾನ ಅನರ್ಹಗೊಳಿಸಿರುವ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
    ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿದ ಕಾರ್ಯತಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ದೇಶದೊಳಗೆ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನ್ಯಾಯಾಲಯ ತೀರ್ಪು ನೀಡಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದರೂ ತಾರತುರಿಯಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ರಾಹುಲ್ ಅವರು ಸತ್ಯವನ್ನೇ ಹೇಳಿದ್ದು, ಅದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಪ್ರಕರಣ ದಾಖಲಿಸಿ ಶಿಕ್ಷೆ ವಿಧಿಸುವಂತೆ ಮಾಡಿದೆ. ಇದು ಸೇಡಿನ ರಾಜಕೀಯದ ಪರಮಾವಧಿ. ಇದೊಂದು ಅಸಾಂವಿಧಾನಿಕ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಉತ್ತಮ ಸಂಸದೀಯ ಪಟು ರಾಹುಲ್ ಗಾಂಧಿ ಅವರ ಧ್ವನಿ ಅಡಗಿಸುವ ಪ್ರಯತ್ನ ಇದಾಗಿದೆ. ಭಾರತ್ ಜೋಡೋ ಯಾತ್ರೆ ಮೂಲಕ ಜನರ ಕಷ್ಟ ಆಲಿಸಿದ್ದಾರೆ. ಜನಮನ್ನಣೆ ಸಹಿಸದ ಬಿಜೆಪಿ ಕುತಂತ್ರದಿಂದ ಲೋಕಸಭೆಯಿಂದಲೇ ಹೊರಹಾಕಿದೆ. ಇದಕ್ಕೆ ಕಾಂಗ್ರೆಸ್ಸಿಗರು ಹೆದರುವುದಿಲ್ಲ ಎಂದರು.

    ಕೂಡಲೇ ಅನರ್ಹಗೊಳಿಸಿರುವ ಆದೇಶ ಹಿಂಪಡೆಯಬೇಕು. ರಾಜನೀತಿಗೆ ಆನುಗುಣವಾಗಿ ರಾಜಕೀಯ ಮಾಡಬೇಕು. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಬಾರದು. ಇಲ್ಲದಿದ್ದರೆ ಹೋರಾಟ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

    ಪಕ್ಷದ ಜಿಲ್ಲಾಧ್ಯಕ್ಷ ತಾಜ್‌ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾನಂದಿನಿ ಗೌಡ, ವಿವಿಧ ಸೆಲ್ಗ್‌ಳ ಅಧ್ಯಕ್ಷರಾದ ಅಶೋಕ್‌ನಾಯ್ಡು, ಜಯಣ್ಣ, ಎಚ್.ಅಂಜನಪ್ಪ, ಎನ್.ಡಿ.ಕುಮಾರ್, ಅಬ್ದುಲ್ಲಾ, ಮೊಹಿದ್ದೀನ್ ಚೋಟು, ಮುಖಂಡರಾದ ಮುದಸೀರ್ ನವಾಜ್, ನಜ್ಮತಾಜ್, ಡಿ.ಎನ್.ಮೈಲಾರಪ್ಪ, ಜಿ.ಮಧುಗೌಡ, ಸೈಯದ್ ಅಲ್ಲಾಭಕ್ಷಿ, ಪ್ರಕಾಶ್, ಬಿ.ಟಿ.ಜಗದೀಶ್, ಪ್ರಕಾಶ್ ರಾಮನಾಯ್ಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts