More

    ರಾಜಕಾರಣಿಗಳು ಭಾರತೀಯ ಸಂವಿಧಾನದ ಪೀಠಿಕೆ ಅರಿಯಲಿ

    ಚನ್ನಮ್ಮನ ಕಿತ್ತೂರು: ಪಟ್ಟಣದ ಚನ್ನಮ್ಮಾಜಿ ವರ್ತುಳದ ಎದುರು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್)ನಿಂದ ಸೋಮವಾರ ಹಮ್ಮಿಕೊಂಡಿದ್ದ ಚಲಿಸು ಕರ್ನಾಟಕ ಕಿತ್ತೂರಿನಿಂದ ಬಳ್ಳಾರಿವರೆಗೆ ಸೈಕಲ್ ಜಾಥಾಕ್ಕೆ ಸಮಾಜ ಸೇವಕ ಎಸ್.ಆರ್.ಹಿರೇಮಠ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ಸಂವಿಧಾನದ ಪೀಠಿಕೆ ತಿಳಿದುಕೊಂಡು ರಾಜಕಾರಣಿಗಳು ಆಡಳಿತ ನಡೆಸಬೇಕು. ಬುದ್ಧ, ಬಸವ, ಅಂಬೇಡ್ಕರ್ ಸಮಾಜ ನಿರ್ಮಾಣಕ್ಕೆ ತಮ್ಮ ಜೀವ ಪಣಕ್ಕಿಟ್ಟರು. ಅದನ್ನು ತಿಳಿದುಕೊಳ್ಳಬೇಕು ಎಂದರು. ರಾಜಕಾರಣಿಗಳು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಇಂತಹ ರಾಜಕಾರಣಿಗಳ ಅವಶ್ಯಕತೆ ಇಲ್ಲ. ಈಗ ಜನಾಂದೋಲನ ಅನಿವಾರ್ಯವಾಗಿದೆ ಎಂದರು. ಕೆಆರ್‌ಎಸ್ ಅಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಸರ್ಕಾರ ತಮ್ಮ ಆಸ್ತಿ ಎಂಬಂತೆ ಬಿಂಬಿಸುತ್ತಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಬರಬೇಕು. ಜನಸಾಮಾನ್ಯರು ರಾಜಕೀಯ ಪ್ರವೇಶ ಮಾಡಬೇಕು. ಸುಭದ್ರ ಕರ್ನಾಟಕ ಉಜ್ವಲ ಭವಿಷ್ಯದೆಡೆಗೆ ಸಾಗಲಿ ಎಂಬ ಧ್ಯೇಯದೊಂದಿಗೆ ನಮ್ಮಪಕ್ಷ ಪ್ರಾರಂಭಿಸಿದ್ದೇವೆ ಎಂದರು. ಎಚ್.ಎಂ. ವೆಂಕಟೇಶ, ಎಚ್.ಎಸ್. ನಿಂಗೇಗೌಡ, ದಯಾನಂದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts