More

    ಹಿಂಸಾಚಾರ ಸಂಭವಿಸಿದ ಜಿಲ್ಲೆಗೆ ರಾಜಕಾರಣಿಗಳ ಪ್ರವೇಶ ನಿಷೇಧಿಸಿದ ಚುನಾವಣಾ ಆಯೋಗ

    ಕಲ್ಕತ್ತ: ಪಶ್ಚಿಮ ಬಂಗಾಳ ಚುನಾವಣೆಯ ಮತದಾನದ ವೇಳೆ ಹಿಂಸಾಚಾರ ಸಂಭವಿಸಿದ ಕೂಚ್ ಬೆಹರ್ ಜಿಲ್ಲೆಗೆ ಮೂರು ದಿನ ಯಾವುದೇ ರಾಜಕಾರಣಿಗಳ ಪ್ರವೇಶವನ್ನು ಚುನಾವಣಾ ಆಯೋಗ ನಿಷೇಧಿಸಿ ಆದೇಶ ಹೊರಡಿಸಿದೆ.

    ಇಂದು ನಾಲ್ಕನೇ ಹಂತದ ಮತದಾನದ ಅಂಗವಾಗಿ ಕೂಚ್ ಬೆಹರ್ ಜಿಲ್ಲೆಯ ಸೀತಾಲಕುಚಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂಸಾಚಾರ ಉಂಟು ಮಾಡಲು ಯತ್ನಿಸಿದವರ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಐವರು ನಾಗರಿಕರು ಮೃತಪಟ್ಟಿದ್ದರು.

    ಘಟನೆ ನಡೆದ ಸೀತಾಲಕುಚಿಗೆ ಭಾನುವಾರ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘೋಷಣೆ ಮಾಡಿದ್ದ ಬೆನ್ನಲ್ಲೇ ಚುನಾವಣಾ ಆಯೋಗ ಸೀತಾಲಕುಚಿ ಸೇರಿದಂತೆ ಕೂಚ್ ಬೆಹರ್ ಜಿಲ್ಲೆಗೆ ರಾಜಕಾರಣಿಗಳ ಪ್ರವೇಶವನ್ನು ಮೂರು ದಿನಗಳವರೆಗೆ ನಿಷೇಧಿಸಿದೆ. ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡಲು ಯತ್ನಿಸಿದವರ ಮೇಲೆ ಅನಿವಾರ್ಯವಾಗಿ ನಿಯೋಜಿತ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಚುನಾವಣಾ ಆಯೋಗ ಘಟನೆ ಬಗ್ಗೆ ಸ್ಪಷ್ಟನೆ ನೀಡಿದೆ.

    ಇದನ್ನೂ ಓದಿ:ಪ್ರೀತಿ ಬಲೆಗೆ ಬಿದ್ದ ರೂಪದರ್ಶಿ ಮೇಲೆ 16 ಬಾರಿ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಪ್ರಿಯಕರನ ಮತ್ತೊಂದು ಮುಖ

    ಅಮಿತ್ ಶಾ ಮೇಲೆ ದಿದಿ ಆರೋಪ: ಸೀತಾಲಕುಚಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಚುನಾವಣಾ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಮತಗಟ್ಟೆಯೊಂದರಲ್ಲಿ ಹಿಂಸಾಚಾರಕ್ಕೆ ಯತ್ನಿಸಿದವರ ಮೇಲೆ ಭದ್ರತೆಯಲ್ಲಿದ್ದ ಸಿಐಎಸ್​ಎಫ್​ ಯೋಧರು ಹಾರಿಸಿದ ಗುಂಡಿನಿಂದ ಐವರು ಮತದಾರರು ಮೃತಪಟ್ಟಿದ್ದಾರೆ. ಇದಕ್ಕೆ ಅಮಿತ್ ಶಾ ಅವರೇ ಕಾರಣ ಎಂದು ದೀದಿ ಶನಿವಾರ ಹೇಳಿದ್ದಾರೆ.

    ತೆಲಂಗಾಣದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ ವೈಎಸ್ ಶರ್ಮಿಳಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts