More

    ಅಧ್ಯಕ್ಷ ಸ್ಥಾನಕೇರಲು ರಾಜಕೀಯ ಪಕ್ಷಗಳ ಕಸರತ್ತು

    ಕೋಲಾರ: ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂ ಮತ್ತು ಜನತಾ ಬಜಾರ್​ (ಟಿಎಪಿಸಿಎಂಎಸ್​) ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕೇರಲು ರಾಜಕೀಯ ಪಕ್ಷಗಳು ಮುಂದಾಗಿವೆ.

    ಅಧ್ಯಕ್ಷ ಸ್ಥಾನದ ಚುನಾವಣೆಯು ಜ.18ಕ್ಕೆ ನಿಗದಿಯಾಗಿದ್ದು, 8 ಮಂದಿ ನಿರ್ದೇಶಕರು ಪ್ರವಾಸಕ್ಕೆ ತೆರಳಿದ್ದಾರೆ. 40 ವರ್ಷಗಳಿಂದ ಚುನಾವಣೆಯಿಲ್ಲದೆ ಅವಿರೋಧ ಆಯ್ಕೆ ನಡೆಯುತ್ತಿತ್ತು. ಈ ಬಾರಿ ಚುನಾವಣೆ ನಡೆದಿದ್ದು ಜನಾದೇಶದ ಮೇರೆಗೆ ಬಹುಮತ ಪಡೆದುಕೊಂಡಿರುವ 8 ಮೈತ್ರಿ ಸದಸ್ಯರು ಒಗ್ಗಟು ಪ್ರದರ್ಶಿಸಿದ್ದು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.

    ಸಂದ 14 ಸ್ಥಾನಗಳ ಪೈಕಿ 7 ಮಂದಿ ಕಾಂಗ್ರೆಸ್​ ಬೆಂಬಲಿತ ಹಾಗೂ 8 ಬಿಜೆಪಿ& ಜೆಡಿಎಸ್​ ಬೆಂಬಲಿತರು ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್​ ಮತ್ತು ಮೈತ್ರಿ ಮಿತ್ರರಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. 8 ಮಂದಿ ನಿರ್ದೇಶಕರ ಕೋರಂ ಬೇಕಾಗಿದೆ. ಜೆಡಿಎಸ್​&ಬಿಜೆಪಿ ಮೈತ್ರಿ ನಿರ್ದೇಶಕರು ಸಂಖ್ಯಾಬಲ ಹೊಂದಿದ್ದಾರೆ. ಒಂದು ಸ್ಥಾನದ ಕೊರತೆಯಿರುವ ಕಾಂಗ್ರೆಸ್​ನವರು ಇತರ ನಿರ್ದೇಶಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.

    ಕಾಂಗ್ರೆಸ್​ನಿಂದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ನಾಗನಾಳ ಸೋಮಣ್ಣ, ಜೆಡಿಎಸ್​&ಬಿಜೆಪಿ ಮೈತ್ರಿಯಿಂದ ವಿ.ರಾಮು ಪ್ರಬಲ ಅಕಾಂಗಳಾಗಿದ್ದಾರೆ. ತೀವ್ರ ಪ್ರತಿಷ್ಠೆಯಿಂದ ನಿರ್ದೇಶಕರ ಚುನಾವಣೆ ನಡೆದಿದ್ದು ಅದೇ ರೀತಿ ಅಧ್ಯಕ್ಷ ಸ್ಥಾನ ತಮ್ಮದಾಗಿಸಿಕೊಳ್ಳಲು ತೀವ್ರ ಕಸರತ್ತುಗಳು ನಡೆಯುತ್ತಿವೆ. ಟಿಎಪಿಸಿಎಂಎಸ್​ ಅಧ್ಯಕ್ಷರಾಗಲು ಬೆಂಬಲಿಗರು ಮಾಜಿ ಸಚಿವ ಕೆ.ಶ್ರೀನಿವಾಸಗೌಡರನ್ನು ಒತ್ತಾಯ ಮಾಡಿದ್ದಾರೆ. ಆದರೆ ಇದಕ್ಕೆ ಗೌಡರು ಇದುವರೆಗೂ ಯಾವುದೇ ರೀತಿ ಪ್ರತಿಕ್ರಿಯೆ ನೀಡಿದೆ. ಶ್ರೀನಿವಾಸಗೌಡರು ಅಧ್ಯಕ್ಷರಾದರೆ ಸಂವು ಅಭಿವೃದ್ಧಿಹೊಂದಲು ಸಾಧ್ಯವಾಗುತ್ತದೆ. ಅವರನ್ನು ಬಿಟ್ಟು ಬೇರೆಯಾದರು ಅಧ್ಯಕ್ಷರು ಆಗುವ ಹಾಗೆ ಇದ್ದರೆ ಅಭಿವೃದ್ಧಿಕುಂಠಿತಗೊಳ್ಳುತ್ತದೆ ಎಂದು ಆತಂಕ ಎದುರಾಗಿದೆ.

    ಟಿಎಪಿಸಿಎಂಎಸ್​ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳು, ಪಡಿತರ ದಾಸ್ತಾನುಗಳು ಇದ್ದು, ವಾಣಿಜ್ಯ ಮಳಿಗೆಗಳಿಂದ ಪ್ರತಿ ತಿಂಗಳು ಸಾವಿರಾರೂ ಬಾಡಿಗೆ ಬರುತ್ತದೆ. 10&15 ವರ್ಷಗಳ ಹಿಂದಿನ ಕಾಲಕ್ಕೆ ತಕ್ಕಂತೆ ಬಾಡಿಗೆಗೆ ನೀಡಿದ್ದು ನಿರೀಕ್ಷತಮಟ್ಟದಲ್ಲಿ ಬಾಡಿಗೆ ಬರುತ್ತಿಲ್ಲ. ಇನ್ನು ಕೆಲವರು ಉಪ ಬಾಡಿಗೆಗೆ ನೀಡಿದ್ದಾರೆ. ಇದನ್ನೆಲ್ಲ ಬದಲಾವಣೆಗೆ ತರಬೇಕಾದರೆ ಹೊಸಬರು ಅಧ್ಯಕ್ಷರಾಗಬೇಕಾಗಿದೆ. ಜೆಡಿಎಸ್​ನಿಂದ ವಿ.ರಾಮು ಅಧ್ಯಕ್ಷ ಸ್ಥಾನದ ಪ್ರಬಲ ಅಕಾಂಯಾಗಿದ್ದಾರೆ. ಮೈತ್ರಿಯಿಂದ 8 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು ಕಳೆದ ಶನಿವಾರ ರಾತ್ರಿ ಪ್ರವಾಸ ಹೊರಟ್ಟಿದ್ದಾರೆ.
    ಪ್ರವಾಸ ತೆರಳಿರುವವರ
    ನಿರ್ದೇಶಕರಾದ ವಿ.ರಾಮು, ವಿ.ಎನ್​.ರುನಾಥ್​, ಮುನಿಶಾಮಿ ರೆಡ್ಡಿ, ಎನ್​.ಮುನಿರಾಜು, ಎಲ್​.ರಾಜಣ್ಣ, ತಂಬಿಹಳ್ಳಿ ಮುನಿಯಪ್ಪ ಹಾಗೂ ಮಹಿಳಾ ನಿರ್ದೇಶಕರ ಪತಿಯರಾದ ಹಸಾಳ ಮಂಜುನಾಥ್​, ದಿಂಬ ನಾಗರಾಜ್​.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts