More

    ರಾಜಕೀಯ ಪಕ್ಷಗಳಿಗೆ ರೈತರ ಕಾಳಜಿ ಇಲ್ಲ

    ನರಗುಂದ: ರೈತರ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ. ಈ ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳು ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ ಟೀಕಿಸಿದರು.

    ಪಟ್ಟಣದಲ್ಲಿ ಜು. 21ರಂದು ಹಮ್ಮಿಕೊಂಡಿರುವ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಪಟ್ಟಣದ ಮಹದಾಯಿ ಹೋರಾಟ ವೇದಿಕೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಸಂಘಟನೆಗಳ ಹಕ್ಕೊತ್ತಾಯದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ, ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆ, ಹುತಾತ್ಮ ರೈತರ ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಕೃಷಿ ಇಲಾಖೆ ಮುಂದಿರುವ ನರಗುಂದದ ನೀರಾವರಿ ಇಲಾಖೆಯ 5 ಗುಂಟೆ ಜಾಗದಲ್ಲಿ 2024ರ ಒಳಗಾಗಿ ಸ್ಮಾರಕ ಭವನ ನಿರ್ಮಿಸಿ ಲೋಕಾರ್ಪಣೆ ಮಾಡಬೇಕು ಎಂದು ಎಲ್ಲ ಸಂಘಟನೆಗಳ ಪರವಾಗಿ ಹಕ್ಕೊತ್ತಾಯ ಮಂಡಣೆ ಮಾಡಿದರು.
    ಶಿವಾನಂದ ಮಾಯಣ್ಣವರ ಮಾತನಾಡಿ, ಜು.21 ರಂದು ನಡೆಯುವ ರೈತ ಹುತಾತ್ಮ ದಿನಾಚರಣೆಯಂದು ಜಿಲ್ಲಾಧಿಕಾರಿಗಳು ನರಗುಂದಕ್ಕೆ ಆಗಮಿಸಿ ರೈತರ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಬೇಕೆಂದು ಒತ್ತಾಯಿಸಿದರು.

    ರೈತ ಸಂಘದ ತಾಲೂಕು ಅಧ್ಯಕ್ಷ ವಿಠಲ ಜಾಧವ ಮಾತನಾಡಿದರು. ಈರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ. ಪರಶುರಾಮ ಜಂಬಗಿ, ವಾಸು ಚವ್ಹಾಣ, ಚನ್ನು ನಂದಿ, ರವಿ ಚಿಂತಾಲ, ರಿಯಾಜ್ ಪಠಾಣ, ಈರಣ್ಣ ಮ್ಯಾಗೇರಿ, ಹನುಮಂತ ಸರನಾಯ್ಕರ್, ಬಸವಂತ ಪವಾರ, ವಾಸುರಡ್ಡಿ ಹೆಬ್ಬಾಳ, ಜಗದೀಶ ಚಿಕ್ಕೂರಮಠ, ಶಿದ್ಲಿಂಗಯ್ಯ ಮಠದ, ಯಶವಂತ ನಡುವಿನಮನಿ, ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts