More

    ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯಾಗಾರ: ಗೃಹರಕ್ಷಕ ದಳ ಸಿಬ್ಬಂದಿ ಆಯೋಜನೆ ಪ್ರಥಮ ಚಿಕಿತ್ಸೆ ಕುರಿತು ತರಬೇತಿ

    ರಾಮನಗರ: ಜಿಲ್ಲಾ ಗೃಹ ರಕ್ಷಕ ದಳ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯಲ್ಲಿ ಗೃಹರಕ್ಷಕ ದಳದ ಶಿಬಿರಾರ್ಥಿಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ ಕುರಿತು ಮಂಗಳವಾರ ಅರಿವು ಮೂಡಿಸುವ ಕಾರ್ಯಾಗಾರ ಆಯೋಜಿಸಲಾಗಿತ್ತು.

    ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡಿ, ಪ್ರಕೃತಿ ವಿಕೋಪದಲ್ಲಿ 6 ಪ್ರಕಾರಗಳಿದ್ದು ಅದರಲ್ಲಿ ನೆಲ ಪ್ರಕೃತಿ ವಿಕೋಪದಿಂದ ಹಿಮಕುಸಿತ, ಭೂಕಂಪ, ಭೂಕುಸಿತ, ಜ್ವಾಲಾಮುಖಿ, ನೀರಿನ ವಿಕೋಪದಿಂದ ಪ್ರವಾಹ, ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವಿಕೋಪದಿಂದ ಹಿಮ, ಸುಂಟರಗಾಗಳಿ, ಮಂಜುಗಡ್ಡೆ ಮಳೆ, ಚಂಡವಾರುತ, ಬೆಂಕಿ ವಿಕೋಪದಿಂದ ಕಾಡ್ಗಿಚ್ಚು, ಬಾಹ್ಯ ವಿಕೋಪದಿಂದ ಉಲ್ಕಾಪಾತ, ಸೌರಜ್ವಾಲೆ ಸಂಭವಿಸಲಿದ್ದು, ಗೃಹರಕ್ಷಕ ದಳ ಶಿಬಿರಾರ್ಥಿಗಳಿಗೆ ಸಂಪೂರ್ಣ ಹಿತಿ ನೀಡಿ ಅಂತಹ ಸಂದರ್ಭಗಳು ಎದುರಾದಾಗ ಧೈರ್ಯದಿಂದ ಸಮರ್ಪಕವಾಗಿ ಸೇವೆ ಮಾಡುವಂತೆ ಸಲಹೆ ನೀಡಿದರು.

    ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಸಂಬಂಧಿ ಕ್ರಮಗಳಾದ ತಾತ್ಕಾಲಿಕ ಆರೋಗ್ಯ ಕೇಂದ್ರ, ಸಂಚಾರಿ ಕೇಂದ್ರ, ರೋಗಿಗಳ ವರ್ಗೀಕರಣ, ಆಕ್ಸಿಜನ್ ಪೂರೈಕೆ, ತಾತ್ಕಾಲಿಕ ರಕ್ತ ನಿಧಿ ಕೇಂದ್ರ, ಆಹಾರ ಮತ್ತು ಔಷಧ ಪೂರೈಕೆ ಹಾಗೂ ಅಪಘಾತ, ಬೆಂಕಿ ಅವಗಡ, ಹಾವು ಕಡಿತ ಮತ್ತು ತುರ್ತು ಸಂದರ್ಭಗಳಲ್ಲಿ ನಿರ್ವಹಿಸ ಬೇಕಾದ ಪ್ರಥಮ ಚಿಕಿತ್ಸಾ ವಿಧಾನಗಳ ಕುರಿತು ಜಿಲ್ಲಾ ಸಂಯೋಜಕ ಡಾ. ಮಧು ಎಸ್.ಮಠ್ ಶಿಬಿರಾರ್ಥಿಗಳಿಗೆ ವಾಹಿತಿ ನೀಡಿದರು.

    ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿನಯ್ ಕುವಾರ್, ಸಂಯೋಜಕ ಚಂದ್ರಶೇಖರ್, ಜಿಲ್ಲಾ ಗೃಹರಕ್ಷಕ ದಳದ ಕವಾಂಡೆಂಟ್ ನಿರಂಜನ್, ಬೋಧಕರಾದ ಗಾಯಕ್ವಾಡ್, ವಿಜಯಕುಮಾರ್, ಸಿಬ್ಬಂದಿಗಳಾದ ಕುಮಾರ್, ಅಭಿಲಾಷ್, ಶಿವಲಿಂಗಯ್ಯ, ರಾಧಾಲಕ್ಷ್ಮೀ ಹಾಗೂ ಶಿಭಿರಾರ್ಥಿಗಳು ಹಾಜರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts