More

    ಪೊಲೀಸ್ ಭದ್ರತೆಯಲ್ಲಿ ರವಾನೆ

    ಲಿಂಗಸುಗೂರು: ವಿಧಾನಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಅಗತ್ಯ ಸಾಮಗ್ರಿಗಳೊಂದಿಗೆ ಮಂಗಳವಾರ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.

    ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಿಬ್ಬಂದಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗಳಿಗೆ ತೆರಳಿದರು. ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ಮತ ಖಾತ್ರಿ ದೃಢೀಕರಣ ಯಂತ್ರ (ವಿವಿ ಪ್ಯಾಟ್), ಆರೋಗ್ಯ ಕಿಟ್ ಸೇರಿ ಇತರ ಸಲಕರಣೆ ಪರಿಶೀಲಿಸಿಕೊಂಡ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು. ಸಿಬ್ಬಂದಿಗಾಗಿ 40 ಸರ್ಕಾರಿ ಬಸ್, 7 ಶಾಲಾ ವಾಹನಗಳು, 24 ಕ್ರೂಸರ್ ವ್ಯವಸ್ಥೆ ಮಾಡಲಾಗಿತ್ತು. ಈ ವಾಹನಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

    ಕ್ಷೇತ್ರದಲ್ಲಿ 1,21,426 ಪುರುಷರು, 1,25,750 ಮಹಿಳೆಯರು ಹಾಗೂ 9 ಇತರ ಸೇರಿ ಒಟ್ಟು 2,49,885 ಮತದಾರರಿದ್ದಾರೆ. 278 ಮತಗಟ್ಟೆಗಳಿದ್ದು, 6 ಸೂಕ್ಷ್ಮ ಮತ್ತು 4 ಅತಿಸೂಕ್ಷ್ಮ ಆಗಿವೆ. 1390 ಸಿಬ್ಬಂದಿ ನಿಯೋಜಿಸಲಾಗಿದೆ. 42 ತಂಡಗಳನ್ನು ಕಾಯ್ದಿರಿಸಲಾಗಿದೆ.

    2 ಡಿವೈಎಸ್‌ಪಿ, 4 ಸಿಪಿಐ, 15 ಪಿಎಸ್‌ಐ ಮತ್ತು ಎಎಸ್‌ಐಗಳು, 390 ಸಿವಿಲ್ ಪಿಸಿ ಹಾಗೂ ಹೋಮ್‌ಗಾರ್ಡ್, 280 ಸಿಆರ್‌ಪಿಎಫ್, 50 ಕೆಎಸ್‌ಆರ್‌ಪಿ ಮತ್ತು ಡಿಆರ್‌ಪಿ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts