More

    ಶ್ರೀನಗರದಲ್ಲಿ ಪೊಲೀಸ್​ ಇನ್ಸ್‌ಪೆಕ್ಟರ್ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ

    ಶ್ರೀನಗರ: ಇಲ್ಲಿನ ಈದ್ಗಾ ಪ್ರದೇಶದಲ್ಲಿ ಭಾನುವಾರ ಪೊಲೀಸ್ ಅಧಿಕಾರಿಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಗಾಯಗೊಂಡಿದ್ದ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ದಾಳಿಕೋರರನ್ನು ಪತ್ತೆಹಚ್ಚಲು ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಸರಣಿ ಸ್ಫೋಟ; ಓರ್ವ ಸಾವು, 20 ಮಂದಿ ಸ್ಥಿತಿ ಗಂಭೀರ
    ಪೊಲೀಸ್​ ಇನ್‌ಸ್ಪೆಕ್ಟರ್ ಮಸ್ರೂರ್ ಅಹ್ಮದ್ ಅವರು ಡೌನ್‌ಟೌನ್ ಪ್ರದೇಶದ ಈದ್ಗಾ ಮೈದಾನದಲ್ಲಿ ಸ್ಥಳೀಯ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಾಳಿಗೆ ಪಿಸ್ತೂಲ್ ಬಳಸಲಾಗಿದೆ. ಉದ್ದೇಶಿತ ದಾಳಿಯ ಬಳಿಕ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು “X”(ಎಕ್ಸ್​) ನಲ್ಲಿ ಪೋಸ್ಟ್‌ ಪೋಸ್ಟ್​ ಹಾಕಿದ್ದಾರೆ.

    ಬುಧವಾರ ಶ್ರೀನಗರದ 15 ಕಾರ್ಪ್ಸ್‌ನ ಪ್ರಧಾನ ಕಚೇರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಉನ್ನತ ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳ ಸಭೆ ನಡೆದಿತ್ತು. ಕಾಶ್ಮೀರದಲ್ಲಿ ವಿದೇಶಿ ಭಯೋತ್ಪಾದಕರ ಪಾತ್ರದ ಕುರಿತು ಸಭೆಯಲ್ಲಿ ಚರ್ಚೆಗೆ ಬಂದಿತ್ತು.

    ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಹತರಾದ 46 ಭಯೋತ್ಪಾದಕರ ಪೈಕಿ 37 ಮಂದಿ ಪಾಕಿಸ್ತಾನಿಗಳು ಮತ್ತು ಒಂಬತ್ತು ಮಂದಿ ಮಾತ್ರ ಸ್ಥಳೀಯರು ಎಂದು ಅಧಿಕೃತ ಅಂಕಿ ಅಂಶಗಳು ಬಹಿರಂಗಪಡಿಸಿವೆ. ಕೇಂದ್ರಾಡಳಿತ ಪ್ರದೇಶದಲ್ಲಿ 33 ವರ್ಷಗಳ ಭಯೋತ್ಪಾದನೆಯಲ್ಲಿ ವಿದೇಶಿ ಭಯೋತ್ಪಾದಕರ ಸಂಖ್ಯೆ ಸ್ಥಳೀಯ ಭಯೋತ್ಪಾದಕರಿಗಿಂತ ನಾಲ್ಕು ಪಟ್ಟು ಹೆಚ್ಚಿರುವುದು ಇದೇ ಮೊದಲು. ಗೃಹ ಸಚಿವಾಲಯದ ಪ್ರಕಾರ, ಪ್ರಸ್ತುತ ಕಣಿವೆಯಲ್ಲಿ ಸುಮಾರು 130 ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ, ಅದರಲ್ಲಿ ಅರ್ಧದಷ್ಟು ವಿದೇಶಿ ಭಯೋತ್ಪಾದಕರು.

    ಕೇರಳದಲ್ಲಿ ಸರಣಿ ಸ್ಫೋಟ: ದೆಹಲಿ, ಮುಂಬೈನಲ್ಲಿ ಹೈ ಅಲರ್ಟ್- ಮೃತರ ಸಂಖ್ಯೆ 2ಕ್ಕೆ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts