More

    ಈ​ ಕೆಲಸದ ಸಹವಾಸವೇ ಬೇಡ ಅಂತ ಕಣ್ಮರೆಯಾದ ಪೊಲೀಸ್​ ಅಧಿಕಾರಿ! ಸಹೋದ್ಯೋಗಿಗಳು ಕೊಟ್ಟ ಕಾರಣ ಹೀಗಿದೆ…

    ಕೊಟ್ಟಾಯಂ: ಪೊಲೀಸ್​ ಕೆಲಸ ಸುಲಭದ ಕೆಲಸವಲ್ಲ. ಸಾರ್ವಜನಿಕ ಸೇವೆ ಆಗಿರುವುದರಿಂದ ಎಷ್ಟು ಗೌರವವನ್ನು ಸಂಪಾದಿಸುತ್ತೇವೆಯೋ ಅಷ್ಟೇ ಒತ್ತಡಗಳನ್ನು ಈ ಕೆಲಸದಲ್ಲಿ ಎದುರಿಸಬೇಕಾಗುತ್ತದೆ. ಆದರೆ, ಕೆಲವೊಮ್ಮೆ ಮೇಲಾಧಿಕಾರಿಗಳ ದರ್ಪ ಕೆಳಹಂತದ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಇದರಿಂದ ಬೇಸತ್ತು ಕೆಲವರು ಸಾವಿನ ಹಾದಿಯನ್ನೂ ಹಿಡಿದಿದ್ದಾರೆ. ಕೆಲವರು ಸಮಸ್ಯೆಯನ್ನು ಎದುರಿಸಿದರೆ, ಇನ್ನು ಕೆಲವರು ಇದರ ಸಹವಾಸವೇ ಬೇಡ ಅಂತ ನಾಪತ್ತೆಯಾಗಿಬಿಡುತ್ತಾರೆ. ಇಂಥದ್ದೇ ಘಟನೆ ಕೇರಳದಲ್ಲಿ ನಡೆದಿದೆ.

    ಕೆಲಸದ ಒತ್ತಡವನ್ನು ತಡೆಯಲಾರದೆ ಈ ಕೆಲಸವೇ ಬೇಡ ಅಂತ ಕೇರಳದ ಪೊಲೀಸ್​ ಅಧಿಕಾರಿಯೊಬ್ಬರು ಯಾರಿಗೂ ತಿಳಿಸಿದೇ ನಾಪತ್ತೆಯಾಗಿರುವ ಘಟನೆ ರಾಜ್ಯದಲ್ಲಿ ಭಾರೀ ಸುದ್ದಿಯಾಗಿದೆ. ಕಣ್ಮರೆಯಾದ ಪೊಲೀಸ್​ ಅಧಿಕಾರಿಯನ್ನು ಕೊಟ್ಟಾಯಂ ಪೂರ್ವ ಪೊಲೀಸ್​ ಠಾಣೆಯ ಸಿವಿಲ್​ ಪೊಲೀಸ್​ ಅಧಿಕಾರಿ ಬಶೀರ್​ ಎಂದು ಗುರುತಿಸಲಾಗಿದೆ. ಅವರ ಫೋನ್​ ಮತ್ತು ಸಂಬಂಧಿತ ವಸ್ತುಗಳು ಪೊಲೀಸ್​ ಕ್ವಾಟ್ರಸ್​ನಲ್ಲಿ ಪತ್ತೆಯಾಗಿವೆ.

    ಇದನ್ನೂ ಓದಿ: ದೆಹಲಿಯಲ್ಲಿ ನಡೆದ ಕನ್ನಡ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಿಗೇ ಅವಮಾನ: ಬೇಸರಗೊಂಡು ಹೊರ ಬಂದ ಜೋಶಿ

    ಅತಿಯಾದ ಕೆಲಸದ ಹೊರೆ ಮತ್ತು ಕೆಲಸದ ಒತ್ತಡದಿಂದ ಬಶೀರ್ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ. ಮೇಲಾಧಿಕಾರಿಗಳ ನಿರಂತರ ಒತ್ತಡಿಂದ ಕುಗ್ಗಿ ಹೋಗಿದ್ದ ಬಶೀರ್​, ಈ ಕೆಲಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಶನಿವಾರ ಸಂಜೆ ಇದ್ದಕ್ಕಿದ್ದಂತೆ ದಿಢೀರ್​ ನಾಪತ್ತೆಯಾಗಿರುವ ಬಶೀರ್​, ತಮ್ಮ ಮನೆಯವರನ್ನು ಸಂಪರ್ಕ ಮಾಡಿದ್ದಾರೆ ಎಂಬ ಸುದ್ದಿ ತಿಳಿದುಬಂದಿದೆ.

    ನಾಪತ್ತೆ ಪ್ರಕರಣ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಬಶೀರ್​ ಕುಟುಂಬವನ್ನು ಸಂಪರ್ಕಿಸಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ತಮಿಳುನಾಡಿನ ಎರ್ವಾಡಿ ಚರ್ಚ್​ನಲ್ಲಿ ಇರುವುದಾಗಿ ಮತ್ತು ಇನ್ನು ಎರಡು ದಿನಗಳಲ್ಲಿ ವಾಪಸ್​ ಬರುವುದಾಗಿ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರಿಂದ ಶೋಧ ಕಾರ್ಯ ಸದ್ಯಕ್ಕೆ ಮುಂದುವರಿದಿದೆ. (ಏಜೆನ್ಸೀಸ್​)

    ಟೊಮ್ಯಾಟೋ ತಮನ್ನಾ: ಶುಭಾಶಯ ತಿಳಿಸಿದ ಗೆಳತಿಯ ಕಾಲೆಳೆದ ವಿಜಯ್ ವರ್ಮಾ

    ಗಡಿ ಬಿಕ್ಕಟ್ಟು ಪರಿಹಾರಕ್ಕೆ 3 ಮಾರ್ಗೋಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts