More

    ಕೋಮುಸೌಹಾರ್ದ ಕೆಡಿಸುವ ಟ್ವೀಟ್ಸ್​ : ಟ್ವಿಟರ್​ ಇಂಡಿಯ ಎಂಡಿಗೆ ಪೊಲೀಸ್ ನೋಟೀಸ್

    ನವದೆಹಲಿ : ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಡಿಯೋ ಶೇರ್​ ಮಾಡಿದ ಟ್ವೀಟ್​ಗಳ ಬಗ್ಗೆ ಟ್ವಿಟರ್​ ಕಂಪೆನಿ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಾದ ಬೆನ್ನಲ್ಲೇ, ಭಾರತದ ಟ್ವಿಟರ್​ ಮುಖ್ಯಸ್ಥರಿಗೆ, ಉತ್ತರ ಪ್ರದೇಶ ಪೊಲೀಸರು ನೋಟೀಸು ಜಾರಿ ಮಾಡಿದ್ದಾರೆ. ನಿನ್ನೆ (ಜೂನ್ 17) ಕಳುಹಿಸಿರುವ ಈ ನೋಟೀಸ್​ನಲ್ಲಿ, ಟ್ವಿಟರ್​ ಇಂಡಿಯ ಎಂಡಿ ಮನೀಶ್ ಮಾಹೇಶ್ವರಿ ಅವರಿಗೆ 7 ದಿನಗಳೊಳಗೆ ಪೊಲೀಸ್​ ಠಾಣೆಗೆ ಹಾಜರಾಗಿ, ಹೇಳಿಕೆ ನೀಡುವಂತೆ ಸೂಚಿಸಲಾಗಿದೆ.

    “ಕೆಲವು ಜನರು ತಮ್ಮ ಟ್ವಿಟರ್​ ಹ್ಯಾಂಡಲ್​ಅನ್ನು ಬಳಸಿಕೊಂಡು ಸಮಾಜದಲ್ಲಿ ವೈಷಮ್ಯ ಮೂಡಿಸುವ ಮತ್ತು ವಿವಿಧ ಸಮುದಾಯಗಳ ನಡುವಿನ ಸೌಹಾರ್ದತೆ ಕೆಡಿಸುವಂತಹ ಸಂದೇಶಗಳನ್ನು ಕಳುಹಿಸಿದ್ದಾರೆ. ಅದನ್ನು ತಡೆಯಲು ಟ್ವಿಟರ್​ ಕಂಪೆನಿ ಯಾವುದೇ ಕ್ರಮ ಕೈಗೊಳ್ಳದೆ, ಸಮಾಜವಿರೋಧಿ ಸಂದೇಶಗಳು ವೈರಲ್ ಆಗಲು ಅವಕಾಶ ನೀಡಿದೆ. ಈ ಬಗ್ಗೆ ದಾಖಲಾಗಿರುವ ಪ್ರಕರಣದ ವಿಚಾರಣೆಗಾಗಿ, ನಿಮ್ಮ ಹೇಳಿಕೆ ಅಗತ್ಯವಾಗಿರುತ್ತದೆ” ಎಂದು ಘಾಜಿಯಾಬಾದ್​ನ ಲೋನಿ ಬಾರ್ಡರ್​ ಠಾಣೆಯ ಪೊಲೀಸರು ನೋಟೀಸಿನಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಮೈಸೂರಿನ ಹಂಗಾಮಿ ಮೇಯರ್ ಅನ್ವರ್​ಗೆ ಅದೃಷ್ಟದ ಮೇಲೋಂದು ಅದೃಷ್ಟ!

    ಜೂನ್​ 5 ರಂದು ಸೂಫಿ ಅಬ್ದುಲ್ ಸಮದ್​ ಎಂಬ ವ್ಯಕ್ತಿಯ ಮೇಲೆ ಘಾಜಿಯಾಬಾದ್​ನಲ್ಲಿ ಆರು ಜನರು ಹಲ್ಲೆ ಮಾಡಿದ ವಿಡಿಯೋ ಟ್ವಿಟರ್​ನಲ್ಲಿ ಪೋಸ್ಟ್​ ಆಗಿತ್ತು. ಈ ಬಗ್ಗೆ ಟ್ವೀಟ್​, ರೀಟ್ವೀಟ್​ಗಳು ನಡೆದ ಹಿನ್ನೆಲೆಯಲ್ಲಿ ಟ್ವಿಟರ್​ ವಿರುದ್ಧ ಈಗಾಗಲೇ ಎಫ್​.ಐ.ಆರ್​. ದಾಖಲಾಗಿದೆ. ಈ ಕೇಸ್​ನಲ್ಲಿ ಮೂವರು ಪತ್ರಕರ್ತರು ಮತ್ತು ಮೂವರು ಕಾಂಗ್ರೆಸ್ ನಾಯಕರನ್ನು ಕೂಡ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. (ಏಜೆನ್ಸೀಸ್)

    ಜೂನ್ 30ರೊಳಗೆ ಲಸಿಕೆ ಪಡೆದವರಿಗೆಲ್ಲಾ ಉಚಿತ ಮೊಬೈಲ್ ರೀಚಾರ್ಜ್!

    ಕರೊನಾ ಕ್ವಾರಂಟೈನ್ ಉಲ್ಲಂಘಿಸಿದ ಭಾರತೀಯನಿಗೆ ಬಹ್ರೈನ್​ನಲ್ಲಿ 3 ವರ್ಷ ಜೈಲು ಶಿಕ್ಷೆ! ಸಹಾಯಕ್ಕೆ ಮೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts