More

    ಪೊಲೀಸರಿಂದ ಕೊಲೆ ಪ್ರಕರಣ ಮುಚ್ಚಿಹಾಕುವ ತಂತ್ರ

    ಹೊಸಪೇಟೆ: ಹರಪನಹಳ್ಳಿ ತಾಲೂಕಿನ ಮಾಚೇನಹಳ್ಳಿ ತಾಂಡ ಬಳಿ ಸಂಭವಿಸಿರುವ ಕೊಲೆ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಘಟನೆಯನ್ನು ಪೊಲೀಸರು ಅಪಘಾತವನ್ನಾಗಿ ಬಿಂಬಿಸುತ್ತಿದ್ದಾರೆ ಎಂದು ಮುಸ್ಲಿಂ ಸಂಘದ ಅಧ್ಯಕ್ಷ ಎಲ್.ಎಸ್.ಬಷೀರ್ ಅಹಮ್ಮದ್ ಗಂಭೀರವಾಗಿ ಆರೋಪಿಸಿದರು.

    ಫೈಯಾಜ್ ಗೆ ಎರಡು ಬಾರಿ ಬೆದರಿಕೆ ಕರೆ

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಸಂಡೂರು ತಾಲೂಕಿನ ದೋಣಿಮಲೈಯ ಫೈಯಾಜ್(27) ಅವರು ಅದೇ ಸಮುದಾಯದ ಕೂಡ್ಲಿಗಿ ಪಟ್ಟಣದ ನಿವಾಸಿ ಯುವತಿಯನ್ನು ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ಸಹಿಸದ ಯುವತಿ ಪೋಷಕರು ಕೂಡ್ಲಿಗಿಯ ಸಿದ್ಧಾರ್ಥ ರೈ ಎಂಬುವವರ ಮೂಲಕ ಫೈಯಾಜ್‌ಗೆ ಒಂದೆರೆಡು ಬಾರಿ ಬೆದರಿಕೆ ಹಾಕಿಸಿದ್ದಾರೆ. ಅದರ ಬೆನ್ನಲ್ಲೇ, ಜೂ.16ರಂದು ಯುವತಿ ಮೂಲಕ ಫೈಯಾಜ್‌ನನ್ನು ಮಾಚೇನಹಳ್ಳಿ ತಾಂಡ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆಯಿಸಿಕೊಂಡು ಹತ್ಯೆ ಮಾಡಿದ್ದಾರೆ ಎಂದು ದೂರಿದರು.

    ಬೇಲಿಯೇ ಎದ್ದು ಹೊಲ ಮೇಯ್ದಂತಿದೆ

    ಮೃತನ ತಂದೆ ಮಹಮ್ಮದ್ ಇದ್ರೀಸ್ ಮಾತನಾಡಿ, ನೊಂದವರಿಗೆ ನ್ಯಾಯ, ರಕ್ಷಣೆ ನೀಡಬೇಕಾದ ಪೊಲೀಸರು ಆರೋಪಿಗಳ ಪರ ವಕಾಲತ್ತುವಹಿಸುತ್ತಿದ್ದಾರೆ. ಇದರಿಂದಾಗಿ ವಿಜಯನಗರ ಪೊಲೀಸರ ನಡೆ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ ಎಂದು ಟೀಕಿಸಿದರು.
    ಸುದ್ದಿಗೋಷ್ಠಿಯಲ್ಲಿ ಫಯಾಜ್ ತಾಯಿ ಖೈರುನ್ನಿಸಾ, ಮುಸ್ಲಿಂ ಸಂಘದ ಪ್ರಮುಖರಾದ ಮಹಮ್ಮದ್ ಯುಸೂಫ್ ಖಾನ್, ಇಲಿಯಾಸ್ ಖಾನ್, ಯೂನುಸ್ ಖಾನ್, ಅಬ್ದುಲ್ ರೆಹಮಾನ, ಅಬ್ದುಲ್ ಶುಕೂರ್, ಯಾಕೂಬ್ ಖಾನ್, ಮಹಮ್ಮದ್ ಇಬ್ರಾಹಿಂ ಮತ್ತಿತರರು ಇದ್ದರು.

    ಇದನ್ನೂ ಓದಿ: ಜೆಡಿಎಸ್‍ಗೆ ವಿಪಕ್ಷಗಳ ಸಭೆಗೆ ಆಹ್ವಾನ ಯಾಕಿಲ್ಲ?’ ಕೆ.ಸಿ. ವೇಣುಗೋಪಾಲ್ ಕೊಟ್ಟ ಕಾರಣ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts