More

    ಜೆಡಿಎಸ್‍ಗೆ ವಿಪಕ್ಷಗಳ ಸಭೆಗೆ ಆಹ್ವಾನ ಯಾಕಿಲ್ಲ?’ ಕೆ.ಸಿ. ವೇಣುಗೋಪಾಲ್ ಕೊಟ್ಟ ಕಾರಣ ಇದು…

    ಬೆಂಗಳೂರು: ಇದೀಗ ಸದ್ಯದ ಮಟ್ಟಿಗೆ ಜೆಡಿಎಸ್‍ ಯುಪಿಎ ಬಣದಲ್ಲಿರುತ್ತೋ ಅಥವಾ ಎನ್‍ಡಿಎ ಬಣಕ್ಕೆ ಸೇರಲಿದೆಯೋ ಎನ್ನುವುದು ಅಧಿಕೃತವಾಗಿ ತಿಳಿಯದೇ ಇದ್ದು ಮಾಜಿ ಸಿಎಂ ಕುಮಾರಸ್ವಾಮಿ ಕಾದು ನೋಡಬೇಕು ಎನ್ನುತ್ತಿದ್ದಾರೆ. ಈ ನಡುವೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್‍ರನ್ನು ಜೆಡಿಎಸ್‍ಗೆ ವಿಪಕ್ಷಗಳ ಸಭೆಯಲ್ಲಿ ಯಾಕೆ ಆಹ್ವಾನ ಇರಲಿಲ್ಲ ಎಂದು ಪ್ರಶ್ನಿಸಿದಾಗ ವಿಭಿನ್ನವಾಗಿ ಉತ್ತರಿಸಿದ್ದಾರೆ.

    ಇದನ್ನೂಓದಿ: ವಿಪಕ್ಷಗಳ ಸಮರಾಭ್ಯಾಸ; ರಾಜಧಾನಿಯಲ್ಲಿ ಇಂದು, ನಾಳೆ ಎರಡನೇ ಸಭೆ

    ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ. ವೇಣುಗೋಪಾಲ್, “ಇಲ್ಲಿ ಕಾಂಗ್ರೆಸ್ ಒಂದೇ ನಿರ್ಧಾರ ಕೈಗೊಳ್ಳೋದಿಲ್ಲ. ಎಲ್ಲಾ 26 ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ನಿರ್ಧಾರ ಕೈಗೊಳ್ಳಲಿವೆ. ಸೋನಿಯಾ ಗಾಂಧಿಯೂ ಈ ಸಭೆಯಲ್ಲಿ ಭಾಗಿ ಆಗಲಿದ್ದು ಈ ಸಭೆಯ ಶಕ್ತಿ ಹೆಚ್ಚಾಗಲಿದೆ.

    ಯುಪಿಎ ಹೊರತಾಗಿಯೂ ಇತರ ರಾಜಕೀಯ ಪಕ್ಷಗಳು ಭಾಗಿಯಾಗ್ತವೆ. ಯುಪಿಎ ನೇತೃತ್ವವೋ ಅಥವೇ ಬೇರೆ ಅಲಯನ್ಸೋ ಎನ್ನುವುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ” ಎಂದಿದ್ದಾರೆ.

    ಇದನ್ನೂಓದಿ: ಪ್ರ​ಧಾನಿ ಮೋದಿಗೆ ಕೆಂಪುಹಾಸಿನ ಸ್ವಾಗತ: ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಜತೆ ದ್ವಿಪಕ್ಷೀಯ ಸಭೆ; ರಫೇಲ್​, ಸಬ್​ಮರೀನ್​ ಒಪ್ಪಂದಕ್ಕೆ ಇಂದು ಅಂಕಿತ

    ಈ ಸಂದರ್ಭ ಜೆಡಿಎಸ್‍ಗೆ ಆಹ್ವಾನ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,” ಯಾರು ಬಿಜೆಪಿ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದ್ದಾರೆ ಅವರು ಬರ್ತಾರೆ. ಆಹ್ವಾನ ಕೊಡುವ ಅಗತ್ಯವೇ ಇಲ್ಲ. ಅವರೇ ಭಾಗಿಯಾಗ್ತಾರೆ. ಅದಲ್ಲದೇ ಕಳೆದ ಬಾರಿ ಜೆಡಿಎಸ್‍ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ” ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts