More

    ಅಕಸ್ಮಾತ್​ ಹಾರಿದ ಗುಂಡು; ಪೇದೆ ಸ್ಥಳದಲ್ಲೇ ಸಾವು!

    ಹೈದರಾಬಾದ್​: ಸರ್ವಿಸ್​ ರೈಫಲ್​ನಿಂದ ಅಕಸ್ಮಾತ್​ ಆಗಿ ಹಾರಿದ ಗುಂಡು ಪೊಲೀಸ್​ ಕಾನ್​ಸ್ಟೆಬಲ್​ ಒಬ್ಬರನ್ನು ಬಲಿ ಪಡೆದುಕೊಂಡಿದೆ. ಅಚಾನಕ್​ ಆಗಿ ಚಿಮ್ಮಿದ ಗುಂಡಿನಿಂದಾಗಿ ಕರ್ತವ್ಯದಲ್ಲಿದ್ದ 31 ವರ್ಷದ ಪೇದೆ ಮೃತಪಟ್ಟಿದ್ದಾರೆ.

    ಹೈದರಾಬಾದ್​ನ ರಾಣಿಗುಂಜ್ ಪ್ರದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ ಇದ್ದ ಕಟ್ಟಡದಲ್ಲಿ ಭದ್ರತೆಗಾಗಿ ಈ ಪೊಲೀಸ್​ ನಿಯೋಜನೆಗೊಂಡಿದ್ದು, ಬೆಳಗ್ಗೆ ಏಳು ಗಂಟೆ ಸುಮಾರಿಗೆ ಈ ಅವಘಡ ನಡೆದಿದೆ.

    ಸ್ಪೆಷಲ್ ಪ್ರೊಟೆಕ್ಷನ್​ ಫೋರ್ಸ್​​ನಲ್ಲಿದ್ದ ಇವರು, ಸೆಲ್ಫ್​ ಲೋಡಿಂಗ್ ರೈಫಲ್​ (ಎಸ್​ಎಲ್​ಆರ್​) ಹೊಂದಿದ್ದು, ಅದರಿಂದ ಚಿಮ್ಮಿದ ಗುಂಡು ಇವರ ಕೆನ್ನೆಯ ಮೂಲಕ ಹಾದುಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲೇ ಭದ್ರತೆಗೆ ನಿಯೋಜನೆ ಆಗಿದ್ದ ಇತರ ಮೂವರು ಪೊಲೀಸರು ಗುಂಡಿನ ಶಬ್ದ ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದರು. ಅಷ್ಟರಲ್ಲಿ ಪೊಲೀಸ್ ಮೃತಪಟ್ಟಿದ್ದು, ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts