More

    ಒಂದೇ ತಂಡದಿಂದ ತಪಾಸಣೆ ಸೂಚನೆ

    ಪುತ್ತೂರು: ಒಂದೇ ರಸ್ತೆಯಲ್ಲಿ ನಾಲ್ಕಾರು ಕಡೆ ಪೊಲೀಸರು ವಾಹನ ನಿಲ್ಲಿಸಿ ತಪಾಸಣೆ ಮಾಡುತ್ತಿರುವ ಬಗ್ಗೆ ಜನರಿಂದ ದೂರು ಬಂದಿದೆ. ಹೀಗಾಗಿ ನಿರ್ದಿಷ್ಟ ರಸ್ತೆಯಲ್ಲಿ ಒಂದು ತಂಡ ಮಾತ್ರ ತಪಾಸಣೆ ಮಾಡುವಂತಹ ವ್ಯವಸ್ಥೆ ಜಾರಿಗೆ ತರಬೇಕು ಎಂದು ಶಾಸಕ ಸಂಜೀವ ಮಠಂದೂರು ಸಂಚಾರ ಠಾಣಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    ಸಂಚಾರ ಪೊಲೀಸರೊಂದಿಗೆ ಪುತ್ತೂರು ಪ್ರವಾಸಿ ಮಂದಿರದಲ್ಲಿ ಅ.೧೭ ರಂದು ಸಭೆ ನಡೆಸಿದ ಶಾಸಕರು ಈ ಬಗ್ಗೆ ನಿರ್ದೇಶನ ನೀಡಿದರು.
    ಪುತ್ತೂರು ನಗರದಲ್ಲಿ ಠಾಣೆಗಳ ಸಂಖ್ಯೆ ಹೆಚ್ಚಾಗಿದೆ. ಟ್ರಾಫಿಕ್, ನಗರ, ಮಹಿಳಾ ಠಾಣೆ, ಎಎಸ್ಪಿ ಕಚೇರಿಗಳಿವೆ. ಜತೆಗೆ ಹೆದ್ದಾರಿ ವೀಕ್ಷಣ ವಾಹನ ಪಡೆಯು ಗಸ್ತು ನಿರತವಾಗಿದೆ. ಕೆಲವು ಬಾರಿ ಒಂದೇ ರಸ್ತೆಗಳಲ್ಲಿ ನಾಲ್ಕಾರು ಕಡೆ ದಾಖಲೆ ತಪಾಸಣೆ ನಡೆಸುತ್ತಿರುವ ಕಾರಣ ಸವಾರರಿಗೂ ಸಮಸ್ಯೆ ಉಂಟಾಗುತ್ತಿದೆ. ಇದು ಪೊಲೀಸರಿಗೂ ಅನಗತ್ಯ ಕೆಲಸ. ಹೀಗಾಗಿ ರೂಟ್ ನಿಯಮ ಜಾರಿ ಮಾಡಿ ಜವಾಬ್ದಾರಿ ಹಂಚುವಂತೆ ಶಾಸಕರು ಸೂಚಿಸಿದರು.

    ಸಂಚಾರ ಠಾಣೆಯ ಎಸ್.ಐ.ರಾಮನಾಯ್ಕ ಮಾತನಾಡಿ, ದಂಡ ವಿಧಿಸಲು ಗುರಿ ನಿಗದಿಪಡಿಸಲಾಗಿದೆ. ಹೀಗಾಗಿ ತಪಾಸಣೆ ಕಡ್ಡಾಯ. ಹೆದ್ದಾರಿ ವೀಕ್ಷಣಾ ವಾಹನಕ್ಕೆ, ಸಂಚಾರಿ ಠಾಣೆಗೆ ಪ್ರತ್ಯೇಕ ಟಾರ್ಗೆಟ್ ಇರುವ ಕಾರಣ ಕೆಲವೊಮ್ಮೆ ಒಂದೇ ರಸ್ತೆಯಲ್ಲಿ ಬೇರೆ ಬೇರೆ ದಿಕ್ಕಿನಲ್ಲಿ ತಪಾಸಣೆ ನಡೆಸಲಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts