More

    ಕತ್ತೆಯನ್ನೂ ಬಿಡಲಿಲ್ಲ ಪಾಕ್ ಪೊಲೀಸರು!!!

    ಕರಾಚಿ: ಕತ್ತೆಯನ್ನು ಅರೆಸ್ಟ್ ಮಾಡಿದ ಪಾಕ್ ಪೊಲೀಸರು ಆನ್​ಲೈನ್​ನಲ್ಲಿ ಸಾಕಷ್ಟು ನಗೆಪಾಟಲಿಗೀಡಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗೆ ಗುರಿಯಾಗಿದ್ದಾರೆ. ಇಷ್ಟಕ್ಕೂ ಕತ್ತೆ ಮೇಲಿದ್ದ ಆರೋಪ ಏನುಗೊತ್ತೆ? ಗ್ಯಾಂಬ್ಲಿಂಗ್​ ರೇಸ್​ನಲ್ಲಿ ಪಾಲ್ಗೊಂಡದ್ದು!!!

    ಎಫ್​ಐಆರ್​ನಲ್ಲಿ ಆರೋಪಿಗಳ ಜತೆಗೆ ಕತ್ತೆಯ ಹೆಸರೂ ಉಲ್ಲೇಖವಾಗಿದೆ. ಹೀಗಾಗಿ ಕತ್ತೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸದ್ಯ ಕತ್ತೆಯನ್ನು ಠಾಣೆಯ ಹೊರಗೆ ಕಟ್ಟಿಹಾಕಿದ್ದೇವೆ.
    ಸ್ಟೇಷನ್ ಹೌಸ್ ಆಫೀಸರ್, ಬಿ ಡಿವಿಷನ್ ರಹೀಂ ಯಾರ್ ಖಾನ್ ಪೊಲೀಸ್ ಠಾಣೆ.

    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಸಿಟಿಯಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದ ವಿಲಕ್ಷಣ ಘಟನೆ ಇದು. ಕತ್ತೆ ರೇಸ್​ ಆಯೋಜಿಸುವ ಮೂಲಕ ಜೂಜಾಡುತ್ತಿದ್ದಾರೆ ಎಂಬ ದೂರನ್ನು ಜೂಜು ತಡೆ ಕಾಯ್ದೆ ಪ್ರಕಾರ ದಾಖಲಿಸಿಕೊಂಡು ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಎಫ್​ಐಆರ್​ನಲ್ಲಿ ಕತ್ತೆಯ ಉಲ್ಲೇಖವೂ ಇದ್ದ ಕಾರಣ ಪೊಲೀಸರು ಎಂಟು ಆರೋಪಿಗಳ ಜತೆಗೆ ಕತ್ತೆಯನ್ನೂ ಬಂಧಿಸಿದ್ದರು. ಜೂಜು ನಡೆಯುತ್ತಿತ್ತು ಎನ್ನಲಾದ ಸ್ಥಳದಿಂದ 1.2 ಲಕ್ಷ ಪಾಕಿಸ್ತಾನಿ ರೂಪಾಯಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನು ಜೂಜಿಗಾಗಿ ಬಳಸಲಾಗುತ್ತಿತ್ತು ಎಂದು ಉಲ್ಲೇಖಿಸಿದ್ದಾಗಿ ಸಾಮಾ ಟಿವಿ ವರದಿ ಮಾಡಿದೆ.

    ಇದನ್ನೂ ಓದಿ:  ರಾಮಮಂದಿರ ನಿರ್ಮಾಣಕ್ಕೆ ನಾಳೆ ಚಾಲನೆ- ಪೂರ್ಣಗೊಳ್ಳಲು 2 ವರ್ಷ ಬೇಕಾದೀತು: ಟ್ರಸ್ಟಿ ಸ್ವಾಮಿ ವಾಸುದೇವಾನಂದ ಸರಸ್ವತಿ

    ಹಾಗೆ ಬಂಧಿಸಿದ ಕತ್ತೆಯನ್ನು ಪೊಲೀಸರು ಠಾಣೆಯ ಹೊರಗೆ ಕಟ್ಟಿ ಹಾಕಿದ್ದಾರೆ. ಪೊಲೀಸ್ ಠಾಣೆಯ ಎದುರು ಕತ್ತೆ ಇರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಿಗೆ ಈ ಬಗ್ಗೆ ಪೊಲೀಸ್ ಠಾಣೆಯ ಎಸ್​ಎಚ್​ಒ ಬಹಳ ಅಮಾಯಕನಂತೆ ಪ್ರತಿಕ್ರಿಯಿಸಿ ನಗೆಪಾಟಲಿಗೀಡಾಗಿದ್ದಾರೆ.

    13 ಬಾಲ್ಯ ವಿವಾಹ ಲಾಕ್​ಡೌನ್ ಅವಧಿಯಲ್ಲೂ ನಡೆಯುವುದರಲ್ಲಿತ್ತು!  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts