More

    ಊಟವಿಲ್ಲದೆ ನಿತ್ರಾಣಗೊಂಡಿದ್ದ ಯುವಕನಿಗೆ ಕೈತುತ್ತಿಟ್ಟು, ಮಾನವೀಯತೆ ಮೆರೆದ ಪೊಲೀಸರು

    ಅರಕಲಗೂಡು: ಪೊಲೀಸರು ಎಂದ ತಕ್ಷಣವೇ ಹಲವರಲ್ಲಿ ಹಲವು ಅಭಿಪ್ರಾಯಗಳು ಮೂಡುತ್ತವೆ. ಪೊಲೀಸ್ ಅಧಿಕಾರಿಗಳು ತುಂಬ ಕಟ್ಟುನಿಟ್ಟು, ಕರುಣೆ ತೋರುವುದಿಲ್ಲ, ಒರಟು ಮನಸ್ಥಿತಿ, ಮಾನವೀಯತೆಯೇ ಇರುವುದಿಲ್ಲಾ ಎಂದೆಲ್ಲಾ ಅಂದುಕೊಂಡಿರುತ್ತಾರೆ. ಆದರೆ, ಇಲ್ಲೊಂದು ಘಟನೆ ಅದನ್ನು ಸುಳ್ಳು ಮಾಡಿದ್ದು, ಪೊಲೀಸ್​ ಸಿಬ್ಬಂದಿಗಳ ಕೆಲಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

    ಇದನ್ನೂ ಓದಿ: ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಅಲ್ಪಕಾಲದಲ್ಲೇ ರಾಜಕೀಯ ಕ್ಷೇತ್ರದಲ್ಲಿ ಬೆಳೆದ ನಾಯಕ

    ಪೊಲೀಸರ ಈ ಜನ ಮೆಚ್ಚುವ ಕಾರ್ಯಕ್ಕೆ ಇದೀಗ ವ್ಯಾಪಕ ಪ್ರಶಂಸೆ ಹರಿದುಬರುತ್ತಿದೆ. ಅರಕಲಗೂಡು ಪೊಲೀಸ್ ಠಾಣೆಯ, ಹೆಡ್ ಕಾನ್ಸ್ಟೇಬಲ್ ಪ್ರಕಾಶ್ ಮತ್ತು ನಿಜಗುಣ ತಂಡದ ಕೆಲಸ ಎಂಥವರ ಮನವನ್ನು ಕಲಕುವಂತಿದೆ. ಕೊಳ್ಳೇಗಾಲದಿಂದ ಕೆಲಸ ಹರಸಿ ಬಂದಿದ್ದ ಯುವಕನೊಬ್ಬ ಸುಮಾರು ಎರಡು-ಮೂರು ದಿನಗಳಿಂದ ಆಹಾರವಿಲ್ಲದೆ, ನಿತ್ರಾಣಗೊಂಡು ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಎಂಬುದನ್ನು ಪೊಲೀಸರು ಗಮನಿಸಿದ್ದಾರೆ.

    ಕೂಡಲೇ ಸ್ಥಳಕ್ಕೆ ಬಂದ ಪ್ರಕಾಶ್ ಹಾಗೂ ಅವರ ತಂಡ, ಕುಸಿದುಬಿದ್ದಿದ್ದ ಯುವಕನನ್ನು ಕೈ ತೋಳಿನಿಂದ ಎತ್ತಿಕೊಂಡು
    ಪೊಲೀಸ್ ಠಾಣೆಯ ಹತ್ತಿರ ಕರೆದುಕೊಂಡು ಬಂದು ಸ್ನಾನ ಮಾಡಿಸಿ, ಆತ ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿಸಿ, ಹೊಸ ಬಟ್ಟೆಯನ್ನು ಕೊಡಿಸಿ, ತಾವೇ ಕೈತುತ್ತಿಟ್ಟು ಊಟ ಮಾಡಿಸಿದ್ದಾರೆ. ಸದ್ಯ ಈ ದೃಶ್ಯ ನೋಡುಗರ ಕರಳು ಹಿಂಡಿದ್ದು, ಪೊಲೀಸರ ಮಾನವೀಯತೆಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.

    ಇದನ್ನೂ ಓದಿ: ಸ್ಮಾಲ್-ಕ್ಯಾಪ್‌ಗಳ ಬೆಲೆಯಲ್ಲಿ ಅಪಾರ ಕುಸಿತ: ಹೂಡಿಕೆದಾರರಿಗೆ ಸೃಷ್ಟಿಯಾಗಿದೆಯೇ ದೊಡ್ಡ ಖರೀದಿ ಅವಕಾಶ?

    ಸ್ವತಃ ಪೊಲೀಸರೇ ಕೈಯಿಂದ ಆತನಿಗೆ ಊಟ ತಿನ್ನಿಸಿ, ನಂತರ ಅಗತ್ಯ ಚಿಕಿತ್ಸೆಗಾಗಿ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಪೋಲಿಸ್ ಜಿಪಿನಲ್ಲೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

    ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ

    ಬಿಸಿಯೂಟ ತುಂಬ ಅಗತ್ಯ, ದಯವಿಟ್ಟು ಅರ್ಧದಿನ ರಜೆ ಕೊಡ್ಬೇಡಿ: ಮನಕಲಕುವಂತಿದೆ ಈ ವಿದ್ಯಾರ್ಥಿ ಬರೆದ ಪತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts