More

    ಪೊಲೀಸರ ಅತಿಥಿಯಾದ ಚಾಲಾಕಿ ಖದೀಮರಿಂದ ಒಂದೂವರೆ ಕೆಜಿ ಚಿನ್ನ, 15 ಕೆಜಿ ಬೆಳ್ಳಿ ವಶ

    ಬಳ್ಳಾರಿ: ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿ ಹೊಸಪೇಟೆ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ಮೂವರನ್ನು ಬಂಧಿಸಿದ್ದು, ಅವರಿಂದ 1.680 ಕೆಜಿ ಚಿನ್ನ ಮತ್ತು 15.33 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

    ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆ ಗಂಗಾಪುರ ತಾಲೂಕಿನ ಪಕೋರ ಗ್ರಾಮದ ಬಚ್ಚನ್ ಹಾಗೂ ವಜರ್ ನಿವಾಸಿ ವಿವೇಕ್ ಬಂಧಿತರು. ಕಳ್ಳರ ಪತ್ತೆಗೆ ಹೊಸಪೇಟೆ ಡಿವೈಎಸ್ಪಿ ರಘುಕುಮಾರ್ ನೇತೃತ್ವದಲ್ಲಿ ಪಿಐ ನಾರಾಯಣ.ವಿ.ಸಿದ್ದೇಶ್ವರ ಮತ್ತು ಪಿಎಸ್‌ಐ ಜಡಿಯಪ್ಪ, ಸಿಬ್ಬಂದಿ ಕೆ.ಎಂ.ಉಮಾಶಂಕರ್, ಎಂ.ಸಾಬಯ್ಯ, ಜಾವೀದ್ ಅಶ್ರಫ್, ಶ್ರೀಕಾಂತ್ ಬಾಬು, ಸುರೇಶ್, ಜೆ.ಕೊಟ್ರೇಶ್, ಕಾಳ್ಯನಾಯಕ್, ತಿಮ್ಮಪ್ಪ, ಗಾಳೆಪ್ಪ, ಕೊಟ್ರೇಶ್ ಒಳಗೊಂಡ ತಂಡ ರಚಿಸಲಾಗಿತ್ತು. ಮಾ.17ರಂದು ಖಚಿತ ಮಾಹಿತಿ ಮೇರೆಗೆ ಕಳ್ಳರಿಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕಳೆದ ಐದು ವರ್ಷದಿಂದ ಕಳ್ಳತನ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 50 ಗ್ರಾಂ ಚಿನ್ನ ವಶಪಡಿಸಿಕೊಂಡು ನ್ಯಾಯಾಲಯದ ಅನುಮತಿ ಪಡೆದು ಮಹಾರಾಷ್ಟ್ರದ ಪಕೋರಕ್ಕೆ ತೆರಳಿ 1.167 ಕೆಜಿ ಚಿನ್ನ ಮತ್ತು 12.380 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ.

    ಪ್ರತ್ಯೇಕ ಪ್ರಕರಣದಲ್ಲಿ ಪೆನ್ನಪ್ಪ ಎಂಬಾತನನ್ನು ಮಾ.23ರಂದು ಬಂಧಿಸಿರುವ ಹೊಸಪೇಟೆ ಪೊಲೀಸರು, 391 ಗ್ರಾಂ ಚಿನ್ನ ಮತ್ತು 2.650 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ. 9 ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯು ಈ ಹಿಂದೆ ಕಳ್ಳತನ ಮಾಡಿ, ಜೈಲಿಗೆ ಹೋಗಿ ಬಂದಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts