More

    2 ಗಂಟೆಗಳಲ್ಲಿ 12 ಕಿ.ಮೀ. ಓಡಿ ಕೊಲೆಗಾರನ ಪತ್ತೆಗೆ ಸಹಕರಿಸಿದ ಪೊಲೀಸ್​ ನಾಯಿ

    ಬೆಂಗಳೂರು: ಪೊಲೀಸ್​ ಶ್ವಾನಪಡೆಯಲ್ಲಿ ಇರುವ ಡಾಬರ್​ಮನ್​ ಪಿಂಚರ್​ ನಾಯಿಗಳು ಸಾಮಾನ್ಯವಾಗಿ ಅಪರಾಧ ನಡೆದಿರುವ ಪ್ರದೇಶದಿಂದ 3ರಿಂದ 5 ಕಿ.ಮೀ ಅಂತರದವರೆಗೆ ಹೋಗುತ್ತವೆ. ಆದರೆ, ದಾವಣಗೆರೆ ಪೊಲೀಸ್​ ಶ್ವಾನಪಡೆಯಲ್ಲಿ ಇರುವ ತುಂಗಾ ಎಂಬ ಡಾಬರ್​ಮನ್​ ಪಿಂಚರ್​ ನಾಯಿ 2 ಗಂಟೆಗಳಲ್ಲಿ 12 ಕಿ.ಮೀ. ಓಡಿ, ಕೊಲೆಗಾರನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

    ಚೇತನ್​ ಎಂಬಾತ ಬಂಧಿತ. ಈತ ತನ್ನ ಸ್ನೇಹಿತ ಚಂದ್ರಾನಾಯ್ಕ್​ ಮತ್ತಿತರರ ಜತೆಗೂಡಿ ಧಾರವಾಡ ಜಿಲ್ಲೆಯ ಮನೆಯೊಂದರಲ್ಲಿ ಕಳವು ಮಾಡಿದ್ದರು. ಒಂದು ಸರ್ವಿಸ್​ ರಿವಾಲ್ವರ್​ ಅಲ್ಲದೆ, ಅಪಾರ ಪ್ರಮಾಣದ ಚಿನ್ನಾಭರಣವನ್ನು ಕದ್ದಿದ್ದರು. ಚಿನ್ನಾಭರಣವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡಿದ್ದರು. ಆದರೆ, ಚಂದ್ರಾನಾಯ್ಕ್​ ತನಗೆ ಹೆಚ್ಚಿನ ಪಾಲು ನೀಡುವಂತೆ ಒತ್ತಾಯಿಸಿದ್ದಲ್ಲದೆ, ಬೆದರಿಕೆಯನ್ನೂ ಹಾಕಿದ್ದ.

    ಈ ಹಿನ್ನೆಲೆಯಲ್ಲಿ ಚಂದ್ರಾನಾಯ್ಕನನ್ನು ತೊಟ್ಟಿಲು ಹಳ್ಳದ ಬಳಿಗೆ ಕರೆಯಿಸಿಕೊಂಡು ಚೇತನ್​, ಕದ್ದಿದ್ದ ಸರ್ವಿಸ್​ ರಿವಾಲ್ವರ್​ನಲ್ಲಿ ಶೂಟ್​ ಮಾಡಿ, ಚಂದ್ರಾನಾಯ್ಕ್​ನನ್ನು ಕೊಂದು ಪರಾರಿಯಾಗಿದ್ದ.

    ಇದನ್ನೂ ಓದಿ: 8-10ನೇ ತರಗತಿಗೆ ‘ಚಂದನ’ನಲ್ಲಿ ಬೋಧನೆ- ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…

    ವಿಷಯ ತಿಳಿದ ಪೊಲೀಸರು ಶುಕ್ರವಾರ ರಾತ್ರಿ 9.30ಕ್ಕೆ ಘಟನಾ ಸ್ಥಳಕ್ಕೆ ತುಂಗಾಳೊಂದಿಗೆ ಬಂದು ತಲುಪಿದ್ದರು. ಆ ಸ್ಥಳದಲ್ಲಿದ್ದ ವಾಸನೆ ಗ್ರಹಿಸಿದ ತುಂಗಾ ತಕ್ಷಣವೇ ಓಡಲಾರಂಭಿಸಿದ್ದಳು. ಬಳಿಕ ಕಾಶಿಪುರ ತಾಂಡಾದಲ್ಲಿನ ವೈನ್​ಶಾಪ್​ಗೆ ಹೋದ ಆಕೆ, ಅಲ್ಲಿಂದ ಹೋಟೆಲ್​ಗೆ ಹೋಯಿತು. ಅಲ್ಲಿಂದ ಹೊರಟ ತುಂಗಾ ಸ್ವಲ್ಪ ದೂರದಲ್ಲಿದ್ದ ಮನೆಯ ಬಳಿ ನಿಂತು ಬೊಗಳಲಾರಂಭಿಸಿತು.

    ರಾತ್ರಿ 12.30ರಲ್ಲಿ ಆ ಮನೆಯ ಮುಂದೆ ನಿಂತ ತುಂಬಾ ಜೋರಾಗಿ ಬೊಗಳಲು ಆರಂಭಿಸಿದಳು. ಆ ಮನೆಯು ಚೇತನ್​ನ ಸಂಬಂಧಿಕರದ್ದಾಗಿತ್ತು. ಆತ ಆ ಮನೆಯಲ್ಲಿದ್ದು ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆ ಮತ್ತು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡ ಎಂದು ಚನ್ನಗಿರಿ ಡಿವೈಎಸ್​ಪಿ ಪ್ರಶಾಂತ್​ ಮುನ್ನೊಳ್ಳಿ ತಿಳಿಸಿದ್ದಾರೆ.

    ಯಾವುದೇ ಅಪರಾಧ ಪತ್ತೆ ಮಾಡಲು ಪೊಲೀಸ್​ ನಾಯಿಗಳು ಗರಿಷ್ಠ 8 ಕಿ.ಮೀ.ವರೆಗೆ ಹೋಗುತ್ತವೆ. ಆದರೆ ತುಂಗಾ 12 ಕಿ.ಮೀ. ದೂರದವರೆಗೆ ಹೋಗಿ ಬಂದಿದ್ದಾಳೆ. ನನ್ನ ಸೇವಾವಧಿಯಲ್ಲಿ ಇಂಥ ಸಾಮರ್ಥ್ಯದ ಪೊಲೀಸ್​ ನಾಯಿಯನ್ನು ನೋಡುತ್ತಿರುವುದು ಇದೇ ಮೊದಲು ಎಂದು ತುಂಗಾಳ ಹ್ಯಾಂಡ್ಲರ್​ ಪ್ರಕಾಶ್​ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಎಸ್​ಪಿ ತುಂಗಾ ಹಾಗೂ ಅದರ ಹ್ಯಾಂಡ್ಲರ್​ ಪ್ರಕಾಶ್​ ಅವರನ್ನು ಅಭಿನಂದಿಸಿದರು.

    ಪವನ್​ ಕಲ್ಯಾಣ್​ ಅಭಿಮಾನಿಗಳ ವಿರುದ್ಧ ದೂರು ನೀಡಿದ ಟಾಲಿವುಡ್ ಕಾಮಿಡಿಯನ್​ ಅಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts