ಪವನ್​ ಕಲ್ಯಾಣ್​ ಅಭಿಮಾನಿಗಳ ವಿರುದ್ಧ ದೂರು ನೀಡಿದ ಟಾಲಿವುಡ್ ಕಾಮಿಡಿಯನ್​ ಅಲಿ!

ಟಾಲಿವುಡ್ ನಟ ಅಲಿ ಮತ್ತು ಪವನ್​ ಕಲ್ಯಾಣ್​ ನಡುವಿನ ಸಂಬಂಧ ಹಳಸಿ ಒಂದು ವರ್ಷದ ಮೇಲಾಯಿತು. ಚುನಾವಣೆ ಪ್ರಚಾರದ ವೇಳೆ ಇಬ್ಬರು ಪರಸ್ಪರ ಮಾತಿನ ಮೂಲಕವೇ ಕಿತ್ತಾಡಿದ್ದರು. ಅದಾದ ಬಳಿಕ ಈ ಇಬ್ಬರು ಕಲಾವಿದರು ಮುಖಾಮುಖಿಯಾಗಿ ಮಾತನಾಡಿರಲಿಲ್ಲ. ಪವನ್​ ಕಲ್ಯಾಣ್ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಅಲಿ ವಿರುದ್ಧ ವಿರೋಧಿ ಪೋಸ್ಟ್​ಗಳನ್ನು ಅಪ್​ಲೋಡ್​ ಮಾಡುತ್ತಿದ್ದರು. ಇಷ್ಟು ದಿನ ಇದೆಲ್ಲವನ್ನು ಸಹಿಸಿಕೊಂಡು ಬಂದಿದ್ದ ಅಲಿಯ ಸಹನೆಯ ಕಟ್ಟೆಯೊಡೆದಿದೆ. ಇದೀಗ ನೇರವಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ದೀಪಿಕಾಗೆ ಯಾವುದರ ಮೇಲೆ … Continue reading ಪವನ್​ ಕಲ್ಯಾಣ್​ ಅಭಿಮಾನಿಗಳ ವಿರುದ್ಧ ದೂರು ನೀಡಿದ ಟಾಲಿವುಡ್ ಕಾಮಿಡಿಯನ್​ ಅಲಿ!