More

    ಪವನ್​ ಕಲ್ಯಾಣ್​ ಅಭಿಮಾನಿಗಳ ವಿರುದ್ಧ ದೂರು ನೀಡಿದ ಟಾಲಿವುಡ್ ಕಾಮಿಡಿಯನ್​ ಅಲಿ!

    ಟಾಲಿವುಡ್ ನಟ ಅಲಿ ಮತ್ತು ಪವನ್​ ಕಲ್ಯಾಣ್​ ನಡುವಿನ ಸಂಬಂಧ ಹಳಸಿ ಒಂದು ವರ್ಷದ ಮೇಲಾಯಿತು. ಚುನಾವಣೆ ಪ್ರಚಾರದ ವೇಳೆ ಇಬ್ಬರು ಪರಸ್ಪರ ಮಾತಿನ ಮೂಲಕವೇ ಕಿತ್ತಾಡಿದ್ದರು. ಅದಾದ ಬಳಿಕ ಈ ಇಬ್ಬರು ಕಲಾವಿದರು ಮುಖಾಮುಖಿಯಾಗಿ ಮಾತನಾಡಿರಲಿಲ್ಲ. ಪವನ್​ ಕಲ್ಯಾಣ್ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಅಲಿ ವಿರುದ್ಧ ವಿರೋಧಿ ಪೋಸ್ಟ್​ಗಳನ್ನು ಅಪ್​ಲೋಡ್​ ಮಾಡುತ್ತಿದ್ದರು. ಇಷ್ಟು ದಿನ ಇದೆಲ್ಲವನ್ನು ಸಹಿಸಿಕೊಂಡು ಬಂದಿದ್ದ ಅಲಿಯ ಸಹನೆಯ ಕಟ್ಟೆಯೊಡೆದಿದೆ. ಇದೀಗ ನೇರವಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

    ಇದನ್ನೂ ಓದಿ: ದೀಪಿಕಾಗೆ ಯಾವುದರ ಮೇಲೆ ಹೆಚ್ಚು ಪ್ರೀತಿ ಗೊತ್ತೆ?

    ಹೌದು, ಪವನ್​ ಕಲ್ಯಾಣ್​ ಅಭಿಮಾನಿಗಳು ಅಲಿ ಹೆಸರಿನ ನಕಲಿ ಸಾಮಾಜಿಕ ಜಾಲತಾಣಗಳ ಖಾತೆ ತೆರೆದು, ಅದರಲ್ಲಿ ಇಲ್ಲ ಸಲ್ಲದ ವಿಚಾರಗಳನ್ನು ಬರೆದು, ಅಲಿ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಲಿ ಹೆಸರಿನ ಜಾಲತಾಣ ಖಾತೆಯಲ್ಲಿ ಪವನ್​ ವಿರುದ್ಧದ ಪೋಸ್ಟ್​ಗಳನ್ನು ಹಾಕಲಾಗುತ್ತಿದೆ. ಇದೆಲ್ಲವನ್ನು ಗಮನಿಸಿದ ಅಲಿ, ಸೈಬರ್​ ಠಾಣೆಯಲ್ಲಿ ದೂರು ನೀಡಿ, ನಕಲಿ ಖಾತೆಗಳನ್ನು ನಿಷ್ಕ್ರೀಯಗೊಳಿಸುವಂತೆ ದೂರಿನಲ್ಲಿ ನಮೂದಿಸಿದ್ದಾರೆ.

    ಇತ್ತೀಚೆಗಷ್ಟೇ ಅಲಿ ಹೆಸರಿನ ಟ್ವಿಟರ್ ಖಾತೆ ತೆರೆದು ಅದರಲ್ಲಿ ಪವನ್​ ಕಲ್ಯಾಣ್​ ಅವರಿಗೆ ಕ್ಷಮಾಪಣೆ ಕೇಳುವ ಭಂಗಿಯಲ್ಲಿನ ಫೋಟೋ ವೈರಲ್ ಆಗಿತ್ತು. ಚೀಟರ್​ ಎಂದು ನಮೂದಿಸಿ, ಜನ ಸೇನಾ ಪಕ್ಷಕ್ಕೆ ಸೇರಿಕೊಳ್ಳಬೇಡ ಎಂದು ಬಗೆಬಗೆ ಟ್ವಿಟ್​ ಮೂಲಕ ಅಲಿ ಅವರನ್ನು ಟ್ರೋಲ್​ ಮಾಡಲಾಗಿತ್ತು. ಇದೆಲ್ಲವನ್ನು ಗಮನಿಸಿ ನಕಲಿ ಖಾತೆ ಸೃಷ್ಟಿಸಿ ಮಾನಹಾನಿ ಮಾಡುತ್ತಿರುವವರ ವಿರುದ್ಧ ದೂರು ನೀಡಿದ್ದಾರೆ.

    ಇದನ್ನೂ ಓದಿ: ನನ್ನ ಬಯೋಪಿಕ್​ಗೆ ನಾನೇ ಹೀರೋ; ಸೋನು ಸೂದ್​ ಘೋಷಣೆ

    ಅಂದಹಾಗೆ, ಅಲಿ ಮತ್ತು ಪವನ್​ ಕಲ್ಯಾಣ್ ಈ ಮೊದಲು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರು ಆತ್ಮೀಯರು. ಆದರೆ, ಕಳೆದ ವರ್ಷದ ಚುನಾವಣಾ ಪ್ರಚಾರದ ವೇಳೆ ಇಬ್ಬರ ನಡುವೆ ಮುನಿಸು ಸೃಷ್ಟಿಯಾಗಿತ್ತು. (ಏಜೆನ್ಸೀಸ್​)

    ಬಹುಭಾಷೆಯಲ್ಲಿ ಮೂಡಿ ಬರಲಿದೆ ಭಜರಂಗಿ 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts