More

    ಮಾಸ್ಕ್ ಧರಿಸದ್ದಕ್ಕೆ 200 ರೂ. ದಂಡ ತೆತ್ತ ಪೊಲೀಸ್ ಪೇದೆ

    ದಾವಣಗೆರೆ: ಕಾನೂನು ಪಾಲಿಸಬೇಕಾದವರೇ ನಿಯಮ ಉಲ್ಲಂಘಿಸಿದ ಪ್ರಕರಣವಿದು. ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದ್ದ ಪೊಲೀಸ್ ಪೇದೆಯೊಬ್ಬ ಸ್ವತಃ ಮಾಸ್ಕ್ ಧರಿಸದೇ ಸಂಚರಿಸಿ ದಂಡ ಪಾವತಿಸಿದ್ದಾನೆ.

    ಮಾಸ್ಕ್ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಗುರುವಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಹಾನಗರ ಪಾಲಿಕೆ ಬಳಿ ಇದಕ್ಕೆ ಚಾಲನೆ ನೀಡಲಾಯಿತು. ಹಳೇ ಬಸ್ ನಿಲ್ದಾಣದ ಬಳಿ ಬಂದಾಗ, ಪೊಲೀಸ್ ಪೇದೆಯೊಬ್ಬ ಮಾಸ್ಕ್ ಧರಿಸದೇ ಬೈಕಿನಲ್ಲಿ ಬಂದ. ಇದನ್ನು ಗಮನಿಸಿದ ಡಿಸಿ ಮಹಾಂತೇಶ ಬೀಳಗಿ ಮತ್ತು ಎಸ್ಪಿ ಹನುಮಂತರಾಯ ಆತನ ವಾಹನವನ್ನು ತಡೆದರು. ಮಾಸ್ಕ್ ಏಕೆ ಧರಿಸಿಲ್ಲ ಎಂದು ಪ್ರಶ್ನಿಸಿ 200 ರೂ. ದಂಡ ಪಾವತಿಸುವಂತೆ ಹೇಳಿದರು. ಆತ ಸಮಜಾಯಿಷಿ ನೀಡಲು ಹೋದರೂ ಒಪ್ಪದ ಪೇದೆಗೆ ಖಡಕ್ ಎಚ್ಚರಿಕೆ ನೀಡಿದ ಎಸ್ಪಿ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದರು. ಒಂದು ಹಂತದಲ್ಲಿ ಪೇದೆ ಪರವಾಗಿ ಎಸ್ಪಿಯವರೇ ದಂಡದ ಹಣ ನೀಡಲು ಮುಂದಾದರು. ಕೊನೆಗೂ ಪೇದೆ ದಂಡ ಪಾವತಿಸಬೇಕಾಯಿತು.

    ಈ ಮಹಿಳಾ ಪೊಲೀಸ್​​ಗೆ ಹ್ಯಾಟ್ಸಾಫ್ ಅಂದದ್ದು ಯಾಕೆ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts