More

    ಮಧ್ಯೆ ಮಾತಾಡಬೇಡ ಎಂದಿದ್ದಕ್ಕೆ ಮಹಿಳಾ ಎಎಸ್​ಐ ಮೇಲೆ ಹಲ್ಲೆ ಮಾಡಿದ ಕಾನ್​ಸ್ಟೆಬಲ್​​!

    ಗುರುಗ್ರಾಮ: ಮಧ್ಯೆ ಮಾತನಾಡಿ ಅಡ್ಡಿಪಡಿಸಬೇಡ ಎಂದಿದ್ದಕ್ಕೆ ಪೊಲೀಸ್​ ಕಾನ್​ಸ್ಟೆಬಲ್​​ ಓರ್ವ ತನಗಿಂತ ಹಿರಿಯ ಅಧಿಕಾರಿಯಾಗಿರುವ ಮಹಿಳಾ ಪೊಲೀಸ್​ ಸಬ್​​ ಇನ್ಸ್​ಪೆಕ್ಟರ್​ ಮೇಲೆ ಹಲ್ಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸ್​ ಮೂಲಗಳು ಶುಕ್ರವಾರ ತಿಳಿಸಿವೆ.

    ಗುರುಗ್ರಾಮದ ಸೆಕ್ಟರ್​ 37 ಪೊಲೀಸ್​ ಠಾಣೆಯ ಎಎಸ್​ಐ ಪೂನಂ ಮತ್ತು ಕಾನ್​ಸ್ಟೆಬಲ್​ ಪ್ರವೇಶ್​ ನಡುವೆ ಬುಧವಾರ ರಾತ್ರಿ ಗಲಾಟೆ ನಡೆದಿದೆ. ಅತ್ಯಾಚಾರ ಪ್ರಕರಣದ ದೂರುದಾರರ ಜತೆ ಮಾತನಾಡುವಾಗ ಮಧ್ಯ ಮಾತನಾಡಬೇಡ ಎಂದಿದ್ದಕ್ಕೆ ಎಎಸ್​ಐ ಮೇಲೆ ಕಾನ್​ಸ್ಟೇಬಲ್​ ಹಲ್ಲೆ ಮಾಡಿದ್ದಾರೆ.

    ಇದನ್ನೂ ಓದಿ: ಪಿಎಫ್ಐ, ಎಸ್ ಡಿಪಿಐ ಜತೆ ಕಾಂಗ್ರೆಸ್ ಆಂತರಿಕ ಒಪ್ಪಂದವೇನು?: ಬಿಜೆಪಿ ರಾಷ್ಟ್ರೀಯ ವಕ್ತಾರ

    ಕೊಲೆ ಬೆದರಿಕೆ
    ಇಬ್ಬರ ನಡುವಿನ ಜಗಳ ಉಲ್ಬಣಗೊಂಡು, ಕಾನ್‌ಸ್ಟೆಬಲ್ ಪ್ರವೇಶ್​, ಎಎಸ್‌ಐಗೆ ಪೂನಂಗೆ ಕೊಲೆ ಬೆದರಿಕೆ ಸಹ ಹಾಕಿದರು. ಆದರೆ ಸ್ಥಳದಲ್ಲಿದ್ದ ಇತರ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿದಾಗ, ಎಸಿಪಿ ಶ್ರೇಣಿಯ ಅಧಿಕಾರಿ ಪೊಲೀಸ್ ಠಾಣೆಗೆ ಆಗಮಿಸಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದರು.

    ಎಸ್​ಎಚ್​ಒ ವರ್ಗಾವಣೆ
    ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸೆಕ್ಟರ್ 37 ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಗಿದ್ದ ಇನ್‌ಸ್ಪೆಕ್ಟರ್ ಸುನೀತಾ ಅವರನ್ನು ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದೆ ಮತ್ತು ಇನ್‌ಸ್ಪೆಕ್ಟರ್ ಅಮನ್ ಬೇನಿವಾಲ್ ಅವರನ್ನು ಎಸ್‌ಎಚ್‌ಒ ಆಗಿ ನೇಮಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: 500 ದಿನ ಒಬ್ಬರೇ ಗುಹೆ ಒಳಗೆ ಇದ್ದ ಪರ್ವತಾರೋಹಿ! ಹೊರಗೆ ಬರುತ್ತಲೇ ಹೇಳಿದ್ದೇನು?

    ದೂರು ದಾಖಲು
    ಗುರುವಾರ ಕಾನ್​ಸ್ಟೆಬಲ್​ ಪ್ರವೇಶ್ ವಿರುದ್ಧ ಎಎಸ್‌ಐ ಪೂನಂ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಸೆಕ್ಟರ್ 10 ಎ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಗಾಯ ಉಂಟುಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

    ಹೆಚ್ಚಿನ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸೂಕ್ತ ಸಮಯಕ್ಕೆ ಆಗಮಿಸಿ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ

    ಡಿಎಂಕೆ ಪ್ರಶ್ನೆಗೆ 4.5 ಲಕ್ಷ ರೂ. ಮೌಲ್ಯದ ಕೈಗಡಿಯಾರದ ಬಿಲ್ ಬಿಡುಗಡೆ ಮಾಡಿದ ಅಣ್ಣಾಮಲೈ; ಎದ್ದವು ಇನ್ನಷ್ಟು ಪ್ರಶ್ನೆಗಳು!

    ಶಿಗ್ಗಾಂವಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts