More

    ಸೂಕ್ತ ಸಮಯಕ್ಕೆ ಆಗಮಿಸಿ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ

    ಅನಂತಪುರ: ಕೌಟುಂಬಿಕ ಕಲಹದಿಂದ ಬೇಸತ್ತು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿವಾಹಿತ ಮಹಿಳೆಯನ್ನು ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬರು ರಕ್ಷಣೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂನಲ್ಲಿ ನಡೆದಿದೆ.

    ಶಿರಿಷಾ ರಕ್ಷಣೆಗೆ ಒಳಗಾದ ಮಹಿಳೆ. ಶಿರಿಷಾ ಮತ್ತು ಪವನ್​ ಕಲ್ಯಾಣ್​ ದಂಪತಿ ಅನಂತಪುರದ ಪತ್ತೂರು ಅಂಚೆ ಕಚೇರಿ ಬಳಿ ನೆಲೆಸಿದ್ದಾರೆ. ಕೆಲವು ದಿನಗಳಿಂದ ದಂಪತಿ ನಡುವೆ ಹಲವು ವಿಚಾರಗಳಿಗೆ ವೈಮಸ್ಸು ಉಂಟಾಗಿತ್ತು. ಬುಧವಾರ ಬೆಳಗ್ಗೆ ಶಿರಿಷಾ, ಗಂಡ ಪವನ್ ಕಲ್ಯಾಣ್​ ಜತೆ ಜಗಳ ಆಡಿದ್ದಳು.

    ಇದನ್ನೂ ಓದಿ: ಅರಸಿಕೆರೆಯಿಂದ ಬಿಎಸ್​ವೈ ಸಂಬಂಧಿ ಸಂತೋಷ್​, ವರುಣಾದಿಂದ ಭಾರತಿ ಶಂಕರ್​ಗೆ ಜೆಡಿಎಸ್ ಟಿಕೆಟ್ ಘೋಷಣೆ

    ಗಂಡನ ಜತೆ ಮುನಿಸಿಕೊಂಡು ಬುಕ್ಕರಾಯಸಮುದ್ರದ ಮುಸಲಮ್ಮ ಕೆರೆಗೆ ಹಾರಲು ಕರೆಯ ದಂಡೆಯ ಮೇಲೆ ಬಂದಿದ್ದಳು. ಆಕೆಯನ್ನು ನೋಡಿ ಅನುಮಾನಗೊಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಅವರನ್ನು ನೋಡಿ ಶಿರಿಷಾ, ಕರೆಗೆ ಹಾರಿದಳು.

    ಇದಾದ ಬಳಿಕ ಪೊಲೀಸರು ಕೆರೆಗೆ ಹಾರಿ ಶಿರಿಷಾಗಳನ್ನು ರಕ್ಷಿಸಿ, ತಕ್ಷಣ ಪೊಲೀಸ್​ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಕುಟುಂಬದ ಸದಸ್ಯರನ್ನು ಕರೆಸಿ ಬುದ್ಧಿವಾದ ಹೇಳಿದ್ದು, ಶಿರಿಷಾಗೆ ಆಪ್ತ ಸಮಾಲೋಚನೆ ಕೊಡಿಸುವಂತೆ ಸಲಹೆ ನೀಡಿ ಕಳುಹಿಸಿಕೊಟ್ಟಿದ್ದಾರೆ. ಮಾಹಿತಿ ತಿಳಿದು ಸಕಾಲಕ್ಕೆ ಬಂದ ಪೊಲೀಸರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್)

    ಅಂಬೇಡ್ಕರ್ ಕನಸಿನ ಸಮಾನತೆ ಸಮಾಜ ಕಟ್ಟಲು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕರೆ

    500 ದಿನ ಒಬ್ಬರೇ ಗುಹೆ ಒಳಗೆ ಇದ್ದ ಪರ್ವತಾರೋಹಿ! ಹೊರಗೆ ಬರುತ್ತಲೇ ಹೇಳಿದ್ದೇನು?

    ಫ್ಯಾನ್ಸಿ ನಂಬರ್ 1111​ಗಾಗಿ 5 ಲಕ್ಷ ರೂ. ವ್ಯಯಿಸಿದ ನಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts