More

    ನಿಯಮಗಳನ್ನು ಗಾಳಿಗೆ ತೂರಿ ಕರ್ತವ್ಯದಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿಯಿಂದ ಭರ್ಜರಿ ಎಣ್ಣೆ ಪಾರ್ಟಿ!

    ಹೈದರಬಾದ್​: ಕರ್ತವ್ಯನಿರತ ಇಬ್ಬರು ಪೊಲೀಸ್​ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಬ್ಬರು ಸಹ ಗಸ್ತು ವಾಹನದ ಸಿಬ್ಬಂದಿ ಎಂದು ತಿಳಿದುಬಂದಿದೆ. ವಾಹನವನ್ನು ಪಕ್ಕದಲ್ಲಿ ಪಾರ್ಕ್​ ಮಾಡಿ ಮನೆಯ ಮುಂದಿನ ಸಣ್ಣದಾಗ ಗೋಡೆಯ ಮೇಲೆ ಕುಳಿತು ಇಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಇಬ್ಬರು ಕೂಡ ಹೈದರಾಬಾದ್​ನ ಪಂಜಗುಟ್ಟ ಠಾಣಾ ಪೊಲೀಸರು ಎಂದು ಹೇಳಲಾಗಿದೆ. ಪಂಜಗುಟ್ಟ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ಕೆಲಸದ ನಡುವೆ ವಾಹನವನ್ನು ರಸ್ತೆ ಪಕ್ಕದಲ್ಲೇ ನಿಲ್ಲಿಸಿ, ನಿಯಮಗಳನ್ನು ಗಾಳಿಗೆ ತೂರಿ ಸಮವಸ್ತ್ರದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ.

    ಪಾರ್ಟಿ ಮಾಡಿದ ಸ್ಥಳದಲ್ಲಿ ವಾಕಿಟಾಕಿ ಸಹ ಇದೆ. ನಾನ್​ವೆಜ್​ ಊಟದೊಂದಿಗೆ ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನಿಯಮಗಳನ್ನು ಪಾಲಿಸದಿರುವವರ ಮೇಲೆ ಹದ್ದಿನ ಕಣ್ಣಿಡಬೇಕಾದ ಪೊಲೀಸರೇ ನಿಯಮಗಳನ್ನು ಗಾಳಿಗೆ ತೂರಿದ್ದು, ಬೇಲಿಯೇ ಎದ್ದು ಹೊಲ ಮೇಯ್ದದಂತಿದೆ.

    ಈ ಘಟನೆ ಹೈದರಾಬಾದ್​ನ ಎರ್ರಾಮಂಜಿಲ್​ ಗ್ಯಾಲ್ಲೆರಿಯಾ ಮಾಲ್​ ಬಳಿ ನಡೆದಿದೆ. ವಿಡಿಯೋ ವೈರಲ್​ ಆಗಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ಇದು ಬಂದಿದ್ದು, ಇಬ್ಬರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ನೆಟ್ಟಿಗರು ಸಹ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರ ಇಂಥಹ ವರ್ತನೆ, ಅವರ ಮೇಲಿನ ನಂಬಿಕೆ ಹುಸಿಯನ್ನಾಗಿಸುತ್ತದೆ ಎಂಬುದನ್ನು ಮರೆಯಬಾರದು. (ಏಜೆನ್ಸೀಸ್​)

    ರಾಜ್ಯದ ರೈಲು ಯೋಜನೆಗೆ ದಾಖಲೆ ಅನುದಾನ ಹಂಚಿಕೆ

    ಆದಿಲ್​ಗೆ ಅಕ್ರಮ ಸಂಬಂಧವಿದೆ: ಮದ್ವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ರಾಖಿ ಸಾವಂತ್​ ಗಂಭೀರ ಆರೋಪ

    ಸ್ಪೀಕರ್ ಕಾಗೇರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಭಯ: ಬಿಜೆಪಿ ಪಾಳಯದಲ್ಲಿ ಹಲವು ಕಲಿಗಳು; ಕಾಂಗ್ರೆಸ್​ನಲ್ಲಿ ಸಮರ್ಥ ಅಭ್ಯರ್ಥಿ ಯಾರೆಂಬ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts