More

    ಪಕ್ಕಾ ಪ್ಲಾನ್​ ಮಾಡಿ ಕೊಲೆ ಮಾಡಿದ್ದ ಕಿರಾತಕರು ಕಡೆಗೂ ಅಂದರ್​..!

    ಬೆಂಗಳೂರು: ಹಣದ ವಿಷಯಕ್ಕೆ ಯುವಕನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿ ಬಳಿಕ ಶವವನ್ನು ಜರ‍್ಮಾಡಿ ಘಾಟ್‌ನಲ್ಲಿ ಎಸೆದಿದ್ದ ನಿಗೂಢ ಕೊಲೆ ಪ್ರಕರಣವನ್ನು ಬೇದಿಸಿರುವ ಕೇಂದ್ರ ವಿಭಾಗ ಕಬ್ಬನ್‌ಪರ‍್ಕ್ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಚಿಕ್ಕಬಳ್ಳಾಪುರ ಮೂಲದವರಾದ ಎ.ವಿ.ಶರತ್ ಕುಮಾರ್, ಕೆ.ಧನುಷ್, ವೆಂಕಟಾಚಲಪತಿ, ಆರ್.ಶ್ರೀಧರ್ ಮತ್ತು ಯಲಹಂಕದ ಎಂ.ಪಿ ಮಂಜುನಾಥ್ ಬಂಧಿತರು. ಕೋಣನಕುಂಟೆ ನಿವಾಸಿ ಎಚ್.ಶರತ್ ಕೊಲೆಯಾದವನು. ಕೊಲೆ ನಡೆದು 9 ತಿಂಗಳು ನಂತರ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಭೀಕರವಾಗಿ ಕೊಲೆಯಾದ ಶರತ್ ರ‍್ಕಾರದ ವತಿಯಿಂದ ಸಬ್ಸಿಡಿ ದರದಲ್ಲಿ ಕಾರುಗಳನ್ನು ಕೊಡಿಸುವುದಾಗಿ ಚಿಕ್ಕಬಳ್ಳಾಪುರ ಮತ್ತು ಯಲಹಂಕ ವಾಸಿಗಳಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡು ಬಳಿಕ ಕಾರನ್ನು ಕೊಡಿಸದೇ ವಂಚಿಸಿರುತ್ತಾನೆ. ಈ ಹಣವನ್ನು ವಸೂಲಿ ಮಾಡಿ ಕೊಡುವಂತೆ 2022ರ ಮರ‍್ಚ್ ತಿಂಗಳಿನಲ್ಲಿ ಚಿಕ್ಕಬಳ್ಳಾಪುರ ರ‍್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಚಲಪತಿ ಅಗಲಗರ‍್ಕಿ ಅಲಿಯಾಸ್ ವೆಂಕಟಾಚಲಪತಿ ಅವರಿಗೆ ಜನರು ಕೇಳಿದ್ದರು. ಆ ಹಣವನ್ನು ವಸೂಲಿ ಮಾಡುವಂತೆ ತಮ್ಮ ಮಗನಾದ ಶರತ್‌ಕುಮಾರನಿಗೆ ಸೂಚಿಸಿದ್ದು, ನಂತರ ಶರತ್‌ಕುಮಾರ್ ತನ್ನ ಸ್ನೇಹಿತರ ಮತ್ತು ಸಾಲಕೊಟ್ಟ ಇತರರನ್ನು ಸೇರಿಸಿಕೊಂಡು ಸಂಚು ರೂಪಿಸಿ ಶರತ್‌ನನ್ನು ಬನಶಂಕರಿ ಬಳಿಯಿಂದ ಅಪಹರಣ ಮಾಡಿಕೊಂಡು ಹೋಗಿ ಗೌರಿಬಿದನೂರಿನಲ್ಲಿರುವ ತನ್ನ ತೋಟದ ಮನೆಯಲ್ಲಿ ಹಾಗೂ ಮತ್ತೊಬ್ಬ ಆರೋಪಿ ಸಂಕೇತ್ ವಾಟದಹೊಸಹಳ್ಳಿಯಲ್ಲಿರುವ ಮಾವಿನ ತೋಟದ ಮನೆಯಲ್ಲಿ 6-7 ದಿನ ಅಕ್ರಮ ಬಂಧನದಲ್ಲಿರಿಸಿ ಅರೆಬೆತ್ತಲೆಗೊಳಿಸಿ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಬಳಿಕ ದೊಣ್ಣೆಯಿಂದ ಮತ್ತು ಹಗ್ಗದಿಂದ ಮೈ ಕೈಗೆ ಹೊಡೆದು ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ಹತ್ಯೆ ಮಾಡಿದ್ದರು. ಮೃತನ ಸಾವಿನ ಸುದ್ದಿ ಯಾರಿಗೂ ತಿಳಿಯಬಾರದೆಂದು ಉದ್ದೇಶಪರ‍್ವಕವಾಗಿ ಎಲ್ಲಾ ಸಾಕ್ಷ್ಯಗಳನ್ನು ನಾಶಗೊಳಿಸಿ ಮೃತನ ಶವವನ್ನು ಕಾರಿನಲ್ಲಿ ಸಾಗಿಸಿ ಚಿಕ್ಕಮಗಳೂರು ಜಿಲ್ಲೆಯ ಚರ‍್ಮಾಡಿ ಘಾಟ್‌ನಲ್ಲಿ ಎಸೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿಗೂಢವಾಗಿತ್ತು ನಾಪತ್ತೆ ಪ್ರಕರಣ:
    ಈ ಪ್ರಕರಣ ಎಷ್ಟರಮಟ್ಟಿಗೆ ನಿಗೂಢವಾಗಿತ್ತೆಂದರೆ ಕೊಲೆಯಾಗಿ 9 ತಿಂಗಳು ಕಳೆದರೂ ಯಾರಿಗೂ ಗೊತ್ತಿರಲಿಲ್ಲ. ಆದರೆ ಕೊಲೆಯಾದ ಶರತ್ ವಿಷಯದಲ್ಲಿ ಯಾರಿಗೂ ಅನುಮಾನ ಬರದಂತೆ ಖತರ‍್ನಾಕ್ ಪ್ಲಾನ್ ಮಾಡಿದ್ದರು ಆರೋಪಿಗಳು. ಮೃತನ ಮೊಬೈಲ್‌ನಿಂದ ಪಾಲಕರ ಮೊಬೈಲ್‌ಗೆ ಸಂದೇಶ ಕಳುಹಿಸಿ ಪೊಲೀಸರ ದಾರಿ ತಪ್ಪಿಸಿದ್ದ. ಕೊಲೆಯಾದವನ ಮೊಬೈಲಿನಿಂದ ಪಾಲಕರಿಗೆ ‘‘ನಾನು ದುಡಿಯಲು ಹೋಗುತ್ತಿದ್ದೇನೆ. ನನ್ನ ಹುಡುಕಬೇಡಿ’’ ಎಂದು ನಿಖರ ಸಂದೇಶ ಬಂದಿತ್ತು. ಮೃತ ಶರತ್‌ನ ಮೊಬೈಲಿಂದ ಮೆಸೇಜ್ ಹಾಕಿ, ಆ ಮೊಬೈಲ್ ಅನ್ನು ಲಾರಿಯೊಂದರ ಮೇಲೆ ಎಸೆದಿತ್ತು ಹಂತಕರ ಪಡೆ. ಆ ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರ ರಾಜ್ಯಕ್ಕೆ ಹೊರಟುಹೋಗಿತ್ತು. ಕಾಲಾಂತರದಲ್ಲಿ ಮೊಬೈಲ್ ಸ್ವಿಚ್ ಆಫ್​ ಆದ ಮೇಲೆ ಅದರ ಸಂಪರ್ಕ ಸಿಕ್ಕಿಲ್ಲ. ತನ್ನ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆ ಎಂದೇ ನಂಬಿದ್ದರು. ಈ ರೀತಿ ಖತರ್ನಾಕ್ ಐಡಿಯಾ ಮೂಲಕ ನಾಪತ್ತೆ ಕೇಸ್ ಅನ್ನು ಕ್ಲೋಸ್ ಮಾಡುವಂತೆ ಮಾಡಿದರು ಹಂತಕರ ಗ್ಯಾಂಗ್.

    ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
    ಕೇಂದ್ರ ವಿಭಾಗದ ಎಸಿಪಿ ಅವರಿಗೆ ಒಂದು ಪತ್ರ ಮತ್ತು ಅದರೊಂದಿಗೆ ಪೆನ್‌ಡ್ರೈವ್ ಸಹ ಅನಾಮಧೇಯ ವ್ಯಕ್ತಿಯಿಂದ ಬರುತ್ತದೆ. ಪೆನ್‌ಡ್ರೈವ್ ತೆರೆದು ನೋಡಿದ್ದಾಗ ಅದರಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ದೃಶ್ಯ ಪೊಲೀಸರಿಗೆ ಲಭ್ಯವಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಲ್ಲೆ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದಾಗುತ್ತಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಮೂಲದವರಾದ ಎ.ವಿ.ಶರತ್ ಕುಮಾರ್ ಮತ್ತು ತಂಡದವರನ್ನು ಬಂಧಿಸಿ ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾಗ ಆರೋಪಿಗಳು ಶರತ್‌ನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ‘ಮೃತ ಶರತ್ ಎಸ್.ಸಿ ಜನಾಂಗಕ್ಕೆ ಸೇರಿದವನಾಗಿದ್ದು, ಈ ಸಂಬಂಧ ಎಸ್‌ಸಿ.ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಲಾಗಿದೆ. ಈ ಕೃತ್ಯದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆ ಮತ್ತು ಶವದ ಪತ್ತೆ ಕರ‍್ಯ ಮುಂದುವರಿದಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಆರ್.ಶ್ರೀನಿವಾಸ್‌ಗೌಡ, ಹೇಳಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts