More

    ಮಾನವನ ದುರಾಸೆಯಿಂದಾಗಿ ಬಲವಂತವಾಗಿ ಸ್ವಜಾತಿ ಭಕ್ಷಕಗಳಾಗುತ್ತಿರುವ ಹಿಮಕರಡಿಗಳು!

    ಮಾಸ್ಕೋ: ಹವಾಮಾನ ಬದಲಾವಣೆ ಮತ್ತು ಮಾನವನ ದುರಾಸೆಗಳು ಹಿಮಕರಡಿಗಳನ್ನು ಬಲವಂತವಾಗಿ ಸ್ವಜಾತಿ ಭಕ್ಷಕ ಪ್ರಾಣಿಗಳಾಗಿಸುತ್ತಿವೆ ಎಂದು ರಷ್ಯಾದ ವಿಜ್ಞಾನಿಯೊಬ್ಬರು ಬಹಿರಂಗಪಡಿಸಿದ್ದಾರೆ.

    ಆರ್ಕ್ಟಿಕ್ ವಲಯದಲ್ಲಿ ಮಂಜುಗೆಡ್ಡೆ ಕರಗುತ್ತಿರುವುದು ಮತ್ತು ಪಳಯುಳಿಕೆ ಇಂಧನಗಳನ್ನು ಹೊರತೆಗೆಯುತ್ತಿರುವುದು ಹಿಮಕರಡಿಗಳ ಹವ್ಯಾಸವನ್ನೇ ಹಾಳುಗೆಡುವುತ್ತಿದೆ ಎಂದು ಎಚ್ಚರಿಸಿದ್ದಾರೆ. ಜಾಗತಿಕ ತಾಪಮಾನ ಏರಿಕೆ, ಕೈಗಾರಿಕೆಗಳ ನಿರ್ಮಾಣದಂತಹ ಕೆಲಸಗಳು ಬಲವಂತಾಗಿ ಹಿಮಕರಡಿಗಳನ್ನು ತನ್ನ ಸಾಂಪ್ರದಾಯಿಕ ಬೇಟೆಯಾಡುವ ಪ್ರದೇಶಗಳಿಂದ ಹೊರದೂಡಲ್ಪಡುತ್ತಿವೆ ಎಂದಿದ್ದಾರೆ.

    ಸ್ವಜಾತಿ ಭಕ್ಷಕ ಪ್ರಕರಣಗಳು ದಿನೇದಿನೆ ಏರುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆರ್ಕ್ಟಿಕ್ ವಲಯದಲ್ಲಿ ಮಾನವ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಹಿಮಕರಡಿಗಳ ಸ್ವಜಾತಿ ಭಕ್ಷಣೆ ಬಹುಕಾಲದಿಂದ ಇರುವ ಸಾಮಾನ್ಯ ಸಂಗತಿಯೇ. ಆದರೆ, ಈ ಹಿಂದೆ ಇಂತಹ ಪ್ರಕರಣಗಳು ತೀರಾ ಅಪರೂಪವಾಗಿದ್ದವು. ಆದರೆ, ಈಗ ಹೆಚ್ಚಾಗಿವೆ ಎನ್ನುತ್ತಾರೆ ಸಂಶೋಧಕರು.

    ಆಹಾರದ ಪೂರೈಕೆ ದುರ್ಬಲವಾಗಿರುವುದರಿಂದ ಹಿಮಕರಡಿಗಳು ಸ್ವಜಾತಿ ಭಕ್ಷಕಗಳಾಗಿ ಬದಲಾಗಿವೆ. ಬಹುಗಾತ್ರದ ಗಂಡು ಹಿಮಕರಡಿಗಳು ಹೆಣ್ಣು ಮತ್ತು ಮರಿ ಹಿಮಕರಡಿಗಳ ಮೇಲೆ ದಾಳಿ ಮಾಡಿ ಸುಲಭವಾಗಿ ಭಕ್ಷಿಸುತ್ತವೆ. ಇನ್ನು ತಾಯಿ ಹಿಮಕರಡಿಗಳು ಮರಿಗಳನ್ನೇ ಭಕ್ಷಣೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

    ಆಹಾರ ಪೂರೈಕೆ ಕಡಿಮೆಯಾಗುತ್ತಿರುವುದಕ್ಕೆ ಹವಾಮಾನ ಬದಲಾವಣೆಯೇ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ 25 ವರ್ಷಗಳಿಂದ ಆರ್ಕ್ಟಿಕ್ ವಲಯದಲ್ಲಿ ಹಿಮದ ಪ್ರಮಾಣ ಶೇ.40ಕ್ಕೆ ಇಳಿದಿದೆ. ಈ ಮೊದಲು ಸೀಲ್​ಗಳನ್ನು ಬೇಟೆಯಾಡಲು ಹಿಮಕರಡಿಗಳು ಸರೋವರದ ಮಂಜುಗೆಡ್ಡೆಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದವು. ಇದೀಗ ಹಿಮಗೆಡ್ಡೆಯ ಪ್ರಮಾಣ ಕಡಿಮೆಯಾಗಿರುವುದು ಹಿಮಕರಡಿಗಳು ಬಲವಂತಾವಾಗಿ ಸರೋವರದ ದಡದ ಮೇಲೆ ಬರುವಂತೆ ಮಾಡುತ್ತಿದೆ. ಆದರೆ, ಇಲ್ಲಿ ಬೇಟೆಯಾಡಲು ಸಾಧ್ಯವಿಲ್ಲ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts