More

    ಪೊಳಲಿ ದೇವಸ್ಥಾನದಲ್ಲಿ 29 ದಿನಗಳ ಜಾತ್ರೋತ್ಸವ

    ಗುರುಪುರ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಧ್ವಜಾರೋಹಣದೊಂದಿಗೆ ಒಂದು ತಿಂಗಳ ಜಾತ್ರೆ ಆರಂಭಗೊಂಡಿತು.
    ಸೋಮವಾರ ಬೆಳಗ್ಗೆ ದೀಪದ ಬಲಿ(ಕಂಚಿಲ ಬಲಿ) ನಡೆದು ಮಕ್ಕಳ ಕಂಚಿಲು ಸೇವೆ ಮತ್ತು ರಥೋತ್ಸವ ನೆರವೇರಿತು. ಬಳಿಕ ದೇವಸ್ಥಾನದಲ್ಲಿ ನೆರೆದಿದ್ದ ಸಾವಿರ ಸೀಮೆಯ ಭಕ್ತರ ಸಮಕ್ಷಮದಲ್ಲಿ ಅರಸು ದೈವದ ಆಯುಧ ಹಿಡಿದ ಪಂಬದ ವೇಷಧಾರಿಯು ನರ್ತನ ಮಾಡಿ ಸೇರಿಗಾರನಿಗೆ ಹಿಂಗಾರದ ಹಾಳೆ ನೀಡಿದ ಮೇಲೆ ಈ ವರ್ಷ 29 ದಿನಗಳ ಜಾತ್ರೆ ಎಂದು ಪ್ರಕಟಗೊಳ್ಳುತ್ತದೆ.ಪೊಳಲಿ ದೇವಸ್ಥಾನದಲ್ಲಿ 29 ದಿನಗಳ ಜಾತ್ರೋತ್ಸವ

    ದೇವಸ್ಥಾನ ಆಡಳಿತ ಮೊಕ್ತೇಸರರು, ಉಳಿಪಾಡಿ ಗುತ್ತಿನವರು, ಅಮ್ಮುಂಜೆ ಗುತ್ತಿನವರು, ಆನುವಂಶಿಕ ಮೊಕ್ತೇಸರರು, ಕ್ಷೇತ್ರದ ಪ್ರಧಾನ ಅರ್ಚಕ, ಅರ್ಚಕ ವೃಂದ, ತಂತ್ರಿಗಳು, ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸಾವಿರ ಸೀಮೆಯ ಭಕ್ತರು ಉಪಸ್ಥಿತರಿದ್ದರು.

    ಜಾತ್ರೆ ಹೀಗಿರುತ್ತದೆ:
    ಪೊಳಲಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಒಟ್ಟು 29 ದಿನ ನಡೆಯಲಿದೆ. ಜಾತ್ರೆಯ ಪ್ರತಿ ಐದು ದಿನಕ್ಕೊಂದು ಬಾರಿ ದಂಡಮಾಲೆ(ಹೂವಿನ ಹಾರ) ವಿಶೇಷ ಪೂಜೆ ನಡೆಯಲಿದೆ. ಜಾತ್ರೆಯ ಕೊನೆಗೆ ಏ.6ರಂದು ಪ್ರಥಮ ಚೆಂಡು, 7ಕ್ಕೆ ಎರಡನೇ ಚೆಂಡು, 8ಕ್ಕೆ ಮೂರನೇ ಚೆಂಡು, 9ಕ್ಕೆ ನಾಲ್ಕನೇ ಚೆಂಡು, 10ಕ್ಕೆ ಕೊನೆಯ ಚೆಂಡು ನಡೆಯಲಿದೆ. 11ರಂದು ಮಹಾ ರಥೋತ್ಸವ, 12ಕ್ಕೆ ಅವಭೃತ ಸ್ನಾನ(ಗುಂಡದ ಬಾಗಿಲು ಮುಚ್ಚುವಿಕೆ), 13ಕ್ಕೆ ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts