More

    ವಿಷಪೂರಿತ ಸೊಪ್ಪು ತಿಂದು 17 ಕುರಿ ಸಾವು

    ಲಕ್ಕೂರು: ಮಾಲೂರು ತಾಲೂಕಿನ ಬಾಳಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಇಗ್ಗಲೂರಿನಲ್ಲಿ ವಿಷಪೂರಿತ ಸೊಪ್ಪು ತಿಂದು 17 ಕುರಿಗಳು ಮಂಗಳವಾರ ಬೆಳಗ್ಗೆ ಮೃತಪಟ್ಟಿವೆ.

    ಗ್ರಾಮದ ರೈತ ಎಸ್.ನಾಗರಾಜ್ ಎಂಬುವವರು 40 ಕುರಿಗಳನ್ನು ಸಾಕಿದ್ದಾರೆ. ಮೂರು ದಿನಗಳಿಂದ ಜಡಿಮಳೆ ಸುರಿಯುತ್ತಿರುವುದರಿಂದ ಮೇಯಿಸಲಾಗದೆ ಹೊಲದಲ್ಲಿರುವ ಮೇವು ತಂದು ಹಾಕಿದ್ದರು. ಮೇವಿನಲ್ಲಿ ವಿಷಪೂರಿತ ಸೊಪ್ಪು ಸೇರಿದ್ದು, ಅದನ್ನು ತಿಂದಿರುವ ಕುರಿಗಳು ಮೃತಪಟ್ಟಿವೆ. ಮಾಲೂರು ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

    ಹಲವು ವರ್ಷಗಳಿಂದ ಕುರಿ ಮೇಯಿಸುತ್ತಿದ್ದು ಇದುವರೆಗೆ ಒಂದು ಕುರಿಯೂ ಮೃತಪಟ್ಟಿರಲಿಲ್ಲ. ಸಣ್ಣ ತಪ್ಪಿನಿಂದ 17 ಕುರಿಗಳು ಸಾವನ್ನಪ್ಪಿದ್ದು, ಉಳಿದ 23 ಕುರಿಗಳನ್ನು ಉಳಿಸಲು ಪಶು ವೈದ್ಯರು ಪ್ರಯತ್ನಿಸುತ್ತಿದ್ದಾರೆ.
    ಎಸ್.ನಾಗರಾಜ್, ರೈತ, ಚಿಕ್ಕಇಗ್ಗಲೂರು

    ಕಾಡಿನಲ್ಲಿ ಬೆಳೆಯುವ ನಂಜು ಕಾರಕ ಸೊಪ್ಪನ್ನು ಹೆಚ್ಚಾಗಿ ಸೇವಿಸಿರುವುದರಿಂದ ಆಮ್ಲೀಯತೆ ಹೆಚ್ಚಾಗಿ ಕುರಿಗಳ ಶ್ವಾಸಕೋಶ ಊದಿಕೊಂಡು ಸಾವನ್ನಪ್ಪುತ್ತವೆ. ಪಶುಗಳಿಗೆ ಆಹಾರ ನೀಡುವಾಗ ಎಚ್ಚರಿಕೆಯಿಂದ ಇರಬೇಕು.
    ಡಾ.ನಾರಾಯಣಸ್ವಾಮಿ, ಪಶುವೈದ್ಯ, ಮಾಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts