More

    ಫೋಟೋ ಶೇರ್​ ಮಾಡುವುದಾಗಿ ಬೆದರಿಸಿ ಅತ್ಯಾಚಾರ; ಪೋಕ್ಸೊ ಪ್ರಕರಣ ದಾಖಲು

    ಹುಬ್ಬಳ್ಳಿ: ಪ್ರೀತಿಯ ನಾಟಕವಾಡಿ ನಗರದ ಅಪ್ರಾಪ್ತ ಯುವತಿಯೊಬ್ಬಳನ್ನು ಲಾಡ್ಜ್​ಗೆ ಕರೆದೊಯ್ದು ಅತ್ಯಾಚಾರ ನಡೆಸಿರುವ ಕುರಿತು ಕಾರವಾರದ ಶ್ರೀನಿಧಿ ಅಲಿಯಾಸ್​ ಓಂಕಾರ ಕೊಲ್ವೇಕರ ಎಂಬಾತನ ವಿರುದ್ಧ ಗೋಕುಲ ರೋಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    17 ವರ್ಷದ ಅಪ್ರಾಪ್ತ ಯುವತಿ ಜತೆ ಶ್ರೀನಿಧಿ ಪ್ರೀತಿಯ ನಾಟಕವಾಡಿ ಸಲುಗೆ ಬೆಳೆಸಿಕೊಂಡಿದ್ದ. ಪುಸಲಾಯಿಸಿ ಆಕೆ ಜತೆಗೆ ಆಲಿಂಗನದ ಫೋಟೋ ತೆಗೆದುಕೊಂಡಿದ್ದ. ಈ ಫೋಟೋ ತೋರಿಸಿ ಆಕೆಗೆ ಬೆದರಿಸಿ 2021ರ ನವೆಂಬರ್​ನಿಂದ 2022ರ ಫೆಬ್ರವರಿ ನಡುವೆ ಅಕ್ಷಯ ಪಾರ್ಕ್​ ಬಳಿಯ ಲಾಡ್ಜ್​ವೊಂದಕ್ಕೆ ಐದಾರು ಸಲ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಹಗ್​ ಮಾಡಿದ ಫೋಟೋ ಎಲ್ಲರಿಗೂ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾನೆ. ಅಲ್ಲದೇ ಆಕೆಯ ಪಾಲಕರಿಗೂ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಯುವತಿಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts