More

    ಮುಂಬರುವ ಗುಜರಾತ್​ ಚುನಾವಣೆ ಮೇಲೆ ಕಣ್ಣು: ಗಾಂಧಿನಗರದಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್​ ಶೋ

    ಗಾಂಧಿನಗರ​: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೆ ಮುಂಬರುವ ಗುಜರಾತ್​ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ತವರು ರಾಜ್ಯ ಗುಜರಾತ್​ಗೆ ಭೇಟಿ ನೀಡಿದ್ದು ಭರ್ಜರಿ ರೋಡ್​ ಶೋ ಕೈಗೊಂಡಿದ್ದಾರೆ.

    ಪ್ರಧಾನಿ ಮೋದಿ ಅವರನ್ನು ಗುಜರಾತ್​ನಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಗುಜರಾತ್​ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಸಂಜೆ ಗುಜರಾತ್​ ಪಂಚಾಯತ್​ ಸಮ್ಮೇಳನವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.

    ಇಂದು ಗಾಂಧಿನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ಥಳೀಯ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು. ಅಲಂಕೃತಗೊಂಡಿರುವ ತೆರೆದ ಜೀಪ್​ನಲ್ಲಿ ಸಾವಿರಾರು ಬೆಂಬಲಿಗರ ನಡುವೆ ಪ್ರಧಾನಿ ಮೋದಿ ಭರ್ಜರಿ ರೋಡ್​ ಶೋ ನಡೆಸಿದರು. ಗಾಂಧಿನಗರದ ವಿಮಾನ ನಿಲ್ದಾಣದಿಂದ ಆರಂಭವಾದ ರೋಡ್​ ಶೋ ಗಾಂಧಿನಗರದ ಬಿಜೆಪಿ ಮುಖ್ಯ ಕಚೇರಿಯವರೆಗೂ ಸುಮಾರು 10 ಕಿ.ಮಿ.ವರೆಗೂ ಸಾಗಿದೆ.

    ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಅವರು ವಾಹನದಲ್ಲಿ ಪ್ರಧಾನಿ ಮೋದಿಯವರಿಗೆ ಸಾಥ್​ ನೀಡಿದರು.

    ಗುಜರಾತ್​ ಭೇಟಿಯ ಬಗ್ಗೆ ನಿನ್ನೆಯೇ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ ನಾನಿಂದು ಗುಜರಾತ್​ಗೆ ತೆರಳುತ್ತಿದ್ದೇನೆ. ಸಂಜೆ ನಾಲ್ಕು ಗಂಟೆಗೆ ಪಂಚಾಯತ್​ ಮಹಾಸಮ್ಮೇಳವನ್ನು ಉದ್ದೇಶಿಸಿ ಮಾತನಾಡಲಿದ್ದೇನೆ ಎಂದು ಹೇಳಿದ್ದಾರೆ.

    ನಾಳೆ ಪ್ರಧಾನಮಂತ್ರಿ ಅವರು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (ಆರ್‌ಆರ್‌ಯು) ಕಟ್ಟಡವನ್ನು ಬೆಳಗ್ಗೆ 11 ಗಂಟೆಗೆ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಆರ್​ಆರ್​ಯುನ ಮೊದಲ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ. ಮಾರ್ಚ್ 12 ರಂದು ಸಂಜೆ 6:30 ರ ಸುಮಾರಿಗೆ ಅವರು 11 ನೇ ಖೇಲ್ ಮಹಾಕುಂಭವನ್ನು ಉದ್ಘಾಟಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಅವರ ಕಚೇರಿಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

    ಉತ್ತರ ಪ್ರದೇಶದಲ್ಲಿ ಒಟ್ಟು ವಿಧಾನಾಸಭಾ ಸ್ಥಾನಗಳಲ್ಲಿ 255 ರಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಭರ್ಜರಿ ಗೆಲವು ದಾಖಲಿಸಿದೆ. ಉಳಿದಂತೆ ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲೂ ಬಿಜೆಪಿ ಕಮಾಲ್​ ಮಾಡಿದ್ದು, ಮುಂಬರುವ ಗುಜರಾತ್​ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ. (ಏಜೆನ್ಸೀಸ್​)

    ಬೇಲೂರಿನಲ್ಲಿ ಬೆಳ್ಳಂಬೆಳಗ್ಗೆ ಒಂಟಿ ಸಲಗ ದಾಳಿ: ಇಬ್ಬರು ಕೂಲಿ ಕಾರ್ಮಿಕರ ಸಾವು

    ನವಜಾತ ಶಿಶುವಿನಿಂದ ಪುಷ್ಪ ಚಿತ್ರದ ತಗ್ಗೆದೆಲೆ ಸ್ಟೈಲ್​ ಕಾಪಿ: ಸಿಕ್ಕಾಪಟ್ಟೆ ವೈರಲ್​ ಆಯ್ತು​ ವಿಡಿಯೋ!

    ಕೃಷಿ-ತೋಟಗಾರಿಕೆ ವಿವಿಗಳಲ್ಲಿ ಸ್ನಾತಕ ಪದವಿ ಸೀಟು ಭರ್ತಿಗೆ ಕೌನ್ಸೆಲಿಂಗ್​: ಅರ್ಜಿ ಸಲ್ಲಿಕೆಗೆ ಇಂದು ಕೊನೇ ದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts