More

    ಕೃಷಿ-ತೋಟಗಾರಿಕೆ ವಿವಿಗಳಲ್ಲಿ ಸ್ನಾತಕ ಪದವಿ ಸೀಟು ಭರ್ತಿಗೆ ಕೌನ್ಸೆಲಿಂಗ್​: ಅರ್ಜಿ ಸಲ್ಲಿಕೆಗೆ ಇಂದು ಕೊನೇ ದಿನ

    ಬೆಂಗಳೂರು: ರಾಜ್ಯದ ವಿವಿಧ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಗಳಲ್ಲಿ ವಿವಿಧ ಸ್ನಾತಕ ಪದವಿಗಳಿಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್​) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೆ-ಸಿಇಟಿ ಕೋಟಾದಡಿ ಭರ್ತಿಯಾಗದೆ ಉಳಿದಿರುವ ಸೀಟುಗಳನ್ನು ಪ್ರವರ್ಗವಾರು ಹಂಚಿಕೆ ಮಾಡಲು ಮಾ.16 ರಿಂದ 19ರವರೆಗೆ ಜಿಕೆವಿಕೆ ಆವರಣದಲ್ಲಿ ಮುಕ್ತ ಕೌನ್ಸೆಲಿಂಗ್​ ಆಯೋಜಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಇಂದು(ಮಾ.11) ಕೊನೇ ದಿನ.

    2021-22ನೇ ಸಾಲಿನ ಪ್ರಥಮ ವರ್ಷದ ಕೃಷಿ ಸ್ನಾತಕ ಪದವಿಗಳಿಗೆ ರಾಜ್ಯದ ಎಲ್ಲ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಐಸಿಎಆರ್​ ಪರೀಕ್ಷೆ ಮತ್ತು ಕೆಇಎ ನಡೆಸುವ ಕೆ-ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಆಯ್ಕೆಯಾದ ಕೆಲ ವಿದ್ಯಾರ್ಥಿಗಳು ದಾಖಲಾಗದ ಹಿನ್ನೆಲೆಯಲ್ಲಿ ಸೀಟುಗಳು ಖಾಲಿ ಉಳಿದಿವೆ. ಈ ಸೀಟುಗಳನ್ನು ಹಂಚಿಕೆ ಮಾಡಲು ಕೌನ್ಸೆಲಿಂಗ್​ ಆಯೋಜಿಸಿದ್ದು, ಪರೀಕ್ಷೆ ಬರೆದ ಕರ್ನಾಟಕ ಅಭ್ಯರ್ಥಿಗಳು ಭಾಗವಹಿಸಬಹುದು.

    ಆಸಕ್ತರು ಮಾಹಿತಿಗೆ ಎಲ್ಲ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ಅಧಿಕೃತ ಜಾಲತಾಣ: www.uasbangalore.edu.in, www.uasd.edu.in, www.uasraichur.edu.in, www.uhsbagalkot.edu.in, www.uahs.edu.in ಗೆ ಭೇಟಿ ನೀಡಿ ಅರ್ಜಿ ಡೌನ್​ಲೋಡ್​ ಮಾಡಿಕೊಂಡು ಮಾ.11ರೊಳಗೆ ಕುಲಸಚಿವರು, ಕೃವಿವಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು.

    ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ… ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

    ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

    ತುಮಕೂರು ಮಾಜಿ ಕಾರ್ಪೋರೇಟರ್​ನ ಕಾಮದಾಹಕ್ಕೆ ಯುವತಿ ಬಲಿ! ಬೆಚ್ಚಿಬೀಳಿಸುತ್ತೆ ಕೊನೇ ಕ್ಷಣದಲ್ಲಿ ಆಕೆ ಬಾಯ್ಬಿಟ್ಟ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts