More

    ಭ್ರಷ್ಟಾಚಾರ ಪ್ರಕರಣ; ಉದ್ಯಮಿಯನ್ನು ಬೆದರಿಸಿ ನನ್ನ ವಿರುದ್ಧ ದೂರು ಕೊಡಿಸಲಾಗಿದೆ: ಸಂಸದೆ ಮಹುವಾ ಮೊಯಿತ್ರಾ

    ನವದೆಹಲಿ: ಲೋಕಸಭೆ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮಯಿತ್ರಾ ಕೇಂದ್ರ ಸರ್ಕಾರದ ವಿರುದ್ಧ ಹೊಸ ಆರೋಪ ಒಂದನ್ನು ಮಾಡಿದ್ದು, ಉದ್ಯಮಿಯನ್ನು ಬೆದರಿಸಿ ನನ್ನ ವಿರುದ್ಧ ದೂರು ಕೊಡಿಸಲಾಗಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಎರಡು ಪುಟಗಳ ಪ್ರಕಟಣೆಯನ್ನು ಪೋಸ್ಟ್​ ಮಾಡಿರುವ ಮೊಯಿತ್ರಾ, ಖಾಲಿ ಹಾಳೆಯ ಮೇಲೆ ಬೆದರಿಸಿ ಸಹಿ ಹಾಕಿಸಿ ಈ ರೀತಿಯ ಕೃತ್ಯ ಎಸಗಲಾಗಿದೆ ಎಂದು ಕಿಡಿಕಾರಿದ್ದಾರೆ.

    ಉದ್ಯಮಿ ಸದನಕ್ಕೆ ಸಲ್ಲಿಸಿಸರುವ ಅಫಿಡೆವಿಟ್​ನಲ್ಲಿ ಅಧಿಕೃತ ಲೆಟರ್​ಹೆಡ್​ ಅಥವಾ ಯಾವುದೇ ನೋಟಿರಯಾಗಿರುವುದಿಲ್ಲ. ಇದು ಒಬ್ಬ ಗೌರವಾನ್ವಿತ, ವಿದ್ಯಾವಂತ ಉದ್ಯಮಿಯೊಬ್ಬರು ಈ ರೀತಿ ಕೊಡುತ್ತಾರಾ. ಅವರನ್ನು ಬೆದರಿಸಿ ಹಾಳೆ ಮೇಲೆ ಸಹಿ ಮಾಡಿಸಲಾಗಿದ್ದು, ಉದ್ಯಮಿಯ ಕಡೆಯಿಂದ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿಸಲಾಗಿದೆ.

    ಇದನ್ನೂ ಓದಿ: VIDEO| ಸಾರ್ವಜನಿಕರ ಎದುರಲ್ಲೇ ನ್ಯಾಯಾಧೀಶರನ್ನು ನಿಂದಿಸಿ ಹಲ್ಲೆ ಮಾಡಿದ ಪುಂಡರು

    ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ದರ್ಶನ್​ ಹಿರಾನಂದಿನಿಗೆ ಸಿಬಿಐ, ನೈತಿಕ ಸಮಿತಿ ಅಥವಾ ಯಾವುದೇ ತನಿಖಾ ಸಂಸ್ಥೆ ಇನ್ನೂ ಸಹ ನೋಟಿಸ್ ನೀಡಿಲ್ಲ. ಹಾಗಾದರೆ ಅವರು ಈ ಅಫಿಡವಿಟ್​ಅನ್ನು ಯಾರಿಗೆ ನೀಡಿದ್ದಾರೆ. ಪತ್ರದಲ್ಲಿ ಉಲ್ಲೇಖಿಸಿರುವ ವಿಚಾರಗಳು ಬಿಜೆಪಿಯ ಐಟಿ ಸೆಲ್‌ ಹಾಗೂ ಪ್ರಧಾನಿ ಕಚೇರಿಯಲ್ಲಿರುವವರು ಇದನ್ನು ರಚಿಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ.

    ದೇಶದಲ್ಲಿ ಅತಿದೊಡ್ಡ ಉದ್ಯಮವನ್ನು ಹೊಂದಿರುವ ಹಿರಾನಂದಿನಿ ಸಮೂಹದ ಯೋಜನೆಗಳನ್ನು ಇತ್ತೀಚಿಗೆ ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್​ನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದಲ್ಲದೆ ದರ್ಶನ್​ ಪ್ರಧಾನಿ ಮೋದಿ ಜೊತೆಗೆ ವಿದೇಶ ಪ್ರವಾಸಕ್ಕೆ ಸಹ ಹೋಗಿದ್ದಾರೆ. ಪ್ರಧಾನಿ ಮತ್ತು ಅವರ ಮಂತ್ರಿಮಂಡಲದೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯು ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಲು ನನ್ನಗ್ಯಾಕೆ ಲಂಚ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಉದ್ಯಮಿ ಹಿರಾನಂದಿನಿ ಪತ್ರವನ್ನು ಅಧಿಕೃತವಾಗಿ ಬಿಡುಗಡೆ ಮಾಡದೆ ಏಕೆ ಈ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಈ ಮೂಲಕ ಸ್ಪಷ್ಟವಾಗಿರುವುದು ಏನೆಂದರೆ ಈ ಪತ್ರವನ್ನು ಉದ್ಯಮಿಯ ಹೆಸರಿನಲ್ಲಿ ಪ್ರಧಾನಿ ಕಚೇರಿ ಹಾಗೂ ಬಿಜೆಪಿಯ ಐಟಿ ಸೆಲ್​ ಸಿದ್ದಪಡಿಸಿ ನನ್ನ ವಿರುದ್ಧ ಆರೋಪಗಳನ್ನು ಮಾಡಲಾಗಿದೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ದಳಿದ್ದೇನೆ ಎಂದು ಸಂಸದೆ ಮಹುವಾ ಮೊಯಿತ್ರಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts