More

    ‘ದೀಪ ಬೆಳಗೋಣ..’ ಎಂದು ಕರೆ ನೀಡಿದ ಪ್ರಧಾನಮಂತ್ರಿ ಮೋದಿ: ಇದಕ್ಕೆ ‘ನೀವೇನಂತೀರಿ’ ಎಂದು ಕೇಳಿದ್ದಕ್ಕೆ ‘ನಿದ್ದೆ ಬಂದರೆ ಮಾಡ್ತೀನಿ’ ಎಂದ್ರು ದೀದಿ

    ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿಯವರು ಏ.5ರಂದು ರಾತ್ರಿ 9ಗಂಟೆಗೆ 9 ನಿಮಿಷಗಳ ಕಾಲ ದೀಪ ಹಚ್ಚೋಣ, ಈ ಮೂಲಕ ಕರೊನಾ ವೈರಸ್​ ಎಂಬ ಅಂಧಕಾರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದು ಕರೆ ನೀಡಿದ್ದಾರೆ.

    ಮೋದಿಯವರ ಈ ದೀಪ ಹಚ್ಚುವ ಪರಿಕಲ್ಪನೆ ಸದ್ಯದ ಟೀಕಾ ವಿಷಯವಾಗಿ ಮಾರ್ಪಟ್ಟಿದೆ. ಹಲವು ರಾಜಕೀಯ ಮುಖಂಡರು, ಜನಸಾಮಾನ್ಯರು ತಮ್ಮದೇ ರೀತಿಯಲ್ಲಿ ವ್ಯಂಗ್ಯವಾಡುತ್ತ, ವಿಶ್ಲೇಷಣೆ ಮಾಡುತ್ತಿದ್ದಾರೆ. ಇದರಿಂದೇನು ಪ್ರಯೋಜನೆ ಎಂದು ಪ್ರಶ್ನಿಸುತ್ತಿದ್ದಾರೆ.

    ಈ ಮಧ್ಯೆ ಮೋದಿ ಏನೇ ಮಾಡಿದರೂ ಕ್ಯಾತೆ ತೆಗೆಯುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ದೀದಿ (ಮಮತಾ ಬ್ಯಾನರ್ಜಿ) ಸ್ವಲ್ಪ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಸ್ವಲ್ಪ ಖಾರವಾಗಿಯೇ ಉತ್ತರಿಸಿದ ದೀದಿ, ನಾನ್ಯಾಕೆ ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿ? ಇದರಲ್ಲಿ ರಾಜಕೀಯವನ್ನು ಬೆರೆಸಲು ಯತ್ನಿಸುತ್ತಿದ್ದೀರಾ? ನಾನು ಕರೊನಾ ವೈರಸ್​ ಪರಿಸ್ಥಿತಿಯನ್ನು ನಿಭಾಯಿಸಬೇಕು. ಈ ಸಂದರ್ಭದಲ್ಲಿ ನೀವು ರಾಜಕೀಯ ಯುದ್ಧಕ್ಕೆ ಪ್ರಚೋದನೆ ನೀಡಬೇಡಿ ಎಂದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ದೀಪ ಬೆಳಗಲು ಹೇಳಿದ್ದು ಒಳ್ಳೆಯದು ಎಂದೆನಿಸಿದವರು ಅದನ್ನು ಪಾಲಿಸಲಿ. ಆ ಹೊತ್ತಲ್ಲಿ ನನಗೆ ನಿದ್ದೆ ಮಾಡಬೇಕು ಎನ್ನಿಸಿದರೆ ನಾನು ಅದನ್ನು ಮಾಡುತ್ತಾನೆ ಎಂದು ಹೇಳಿದ್ದಾರೆ.

    ಮೋದಿಯವರು ತಮ್ಮ ಮನಸಲ್ಲಿ ಏನಿದೆಯೋ ಅದನ್ನು ಮಾತನಾಡುತ್ತಾರೆ. ನಾನು ನನಗೇನು ಮಾಡಬೇಕು ಎನ್ನಿಸುತ್ತದೆಯೋ ಅದನ್ನು ಮಾಡುತ್ತೇನೆ. ಇದು ಅವರವರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ.

    ಹಾಗೇ, ಲಾಕ್​ಡೌನ್​ನಿಂದ ಪಶ್ಚಿಮ ಬಂಗಾಳದಲ್ಲಿ ಅದೆಷ್ಟೋ ಸಾವಿರ ಕೋಟಿ ನಷ್ಟವಾಗಿದೆ. ನಾವೂನು ಗಳಿಸುತ್ತಿಲ್ಲ, ಬದಲಿಗೆ ಇದ್ದಿದ್ದೆಲ್ಲ ಖಾಲಿಯಾಗುತ್ತಿದೆ. ಆದರೂ ನಮ್ಮ ರಾಜ್ಯದ ಎಲ್ಲ ಉದ್ಯೋಗಿಗಳಿಗೆ ತಿಂಗಳ ಮೊದಲ ದಿನವೇ ಸಂಬಳ ನೀಡಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts