More

    ಅನ್​ಲಾಕ್ 2.0 ಮಧ್ಯೆ ಸ್ವಯಂ ರಕ್ಷಣೆ ಅತ್ಯಗತ್ಯ: ಪ್ರಧಾನಿ ಮೋದಿ

    ನವದೆಹಲಿ: ಕರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆಯೇ ಜುಲೈ 1 ರಿಂದ ಅನ್ಲಾಕ್ 2.0 ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 4 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.
    ಹವಾಮಾನ ಪರಿಸ್ಥಿತಿ, ಮಳೆಗಾಲವನ್ನು ಉಲ್ಲೇಖಿಸಿ ಮಾತನಾಡಿದ ಅವರು ಈ ಪರಿಸ್ಥಿತಿಯಲ್ಲಿ ಕೆಮ್ಮು ಮತ್ತು ರೋಗಗಳ ಹರಡುವಿಕೆ ಇನ್ನೂ ಹೆಚ್ಚಾಗಬಹುದು. ಕರೊನಾವೈರಸ್ ಮತ್ತು ಈ ಎಲ್ಲ ಪರಿಸ್ಥಿತಿಗಳಿಂದ ಸ್ವಯಂ ರಕ್ಷಿಸಿಕೊಳ್ಳಬೇಕೆಂದು ರಾಷ್ಟ್ರದ ಜನತೆಗೆ ವಿನಂತಿಸಿದರು. ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ COVID-19 ನಿಂದ ಸಂಭವಿಸಿದ ಸಾವಿನ ಪ್ರಮಾಣ ಕಡಿಮೆಯೇ. ಸಮಯಕ್ಕೆ ಸರಿಯಾಗಿ ಜಾರಿಗೊಳಿಸಲಾದ ಲಾಕ್​ಡೌನ್ ಮತ್ತು ತೆಗೆದುಕೊಂಡ ಕ್ರಮಗಳು ಅನೇಕ ಜೀವಗಳನ್ನು ಉಳಿಸಲು ಸಹಾಯವಾಗಿವೆ ಎಂದು ಹೇಳಿದರು.

    ಇದನ್ನೂ ಓದಿ: ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಲು ನೆರವಾಗುತ್ತವೆ ಈ ಆ್ಯಪ್​ಗಳು

    ಅನ್ಲಾಕ್ 1.0ರ ಸಮಯದಲ್ಲಿ ಜನರು ತೋರಿಸಿರುವ ಅಸಡ್ಡೆ ಬಗ್ಗೆ ಮಾತನಾಡಿದ ಅವರು, ಕೈ ತೊಳೆಯುವುದು, ಸುರಕ್ಷಿತ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಇತ್ಯಾದಿ ಮುನ್ನೆಚ್ಚರಿಕೆಗಳನ್ನು ಸಾರ್ವಜನಿಕರಿಗೆ ನೆನಪಿಸಿದರು. ಇಂತಹ ಅಸಡ್ಡೆಯಿಂದಾಗಿ ದೇಶದಲ್ಲಿ ಕೋವಿಡ್ ನಿರಂತರ ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
    ಅನ್ಲಾಕ್ 2.0 ನಲ್ಲಿದ್ದಾಗಲೂ ಪ್ರತಿಯೊಬ್ಬರು ಕೋವಿಡ್ ವಿರುದ್ಧ ಹೋರಾಡುವಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದರು.

    ಇದನ್ನೂ ಓದಿ: ಟಿಕ್‌ಟಾಕ್‌ ಬ್ಯಾನ್‌ ಬೆನ್ನಲ್ಲೇ ಚಿಗುರಿತು ‘ಚಿಂಗಾರಿ’: ಲಕ್ಷ ಲಕ್ಷ ಡೌನ್‌ಲೋಡ್‌ 

    * ಮನೆಯಲ್ಲೇ ಇರಿ, ಅತಿ ಮುಖ್ಯವಾದಾಗ ಮಾತ್ರ ಹೊರಗೆ ಹೋಗಿ.
    * ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ – ಪರಸ್ಪರ 6 ಅಡಿ ದೂರ ಇರಿ.
    * ಯಾವಾಗಲೂ ಫೇಸ್ ಮಾಸ್ಕ್ ಧರಿಸಿ, ಅದು ನಿಮ್ಮ ಮೂಗು ಮತ್ತು ಬಾಯಿಯನ್ನು ಆವರಿಸುವಂತಿರಲಿ.
    * ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಆಗಾಗ ತೊಳೆಯಿರಿ.
    * ಸರಿಯಾದ ಉಸಿರಾಟದ ನೈರ್ಮಲ್ಯವನ್ನು ಕಾಪಾಡಿ.
    ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 18,522 ಹೊಸ COVID-19 ಪ್ರಕರಣಗಳನ್ನು ವರದಿಯಾಗಿದ್ದು, ಭಾರತದ ಕರೊನಾವೈರಸ್ ಪ್ರಕರಣಗಳ ಸಂಖ್ಯೆ ಮಂಗಳವಾರ 5,66,840 ಕ್ಕೆ ಏರಿದೆ.

    ರಾಯರ ಭಕ್ತರಿಗೆ ನಿರಾಸೆ: ಮಂತ್ರಾಲಯದ ಬಾಗಿಲು ಸದ್ಯಕ್ಕೆ ತೆರೆಯಲ್ಲ ಎಂದ ಆಡಳಿತ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts