More

    ಅರ್ಥ ವ್ಯವಸ್ಥೆ ಬಗ್ಗೆ ಪ್ರಧಾನಿ ಮೋದಿಗೆ ಸರಿಯಾದ ಜ್ಞಾನವಿಲ್ಲ: ರಾಹುಲ್​ ಗಾಂಧಿ

    ಜೈಪುರ: ಅರ್ಥ ವ್ಯವಸ್ಥೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಯಾದ ಜ್ಞಾನವಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ರಾಜಸ್ಥಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಹಳೆಯ ಮಾನದಂಡಗಳನ್ನು ಉಪಯೋಗಿಸುತ್ತಿರುವುದರಿಂದ ಭಾರತದ ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ) ಶೇ 2.5ರ ಮಂದಗತಿಯ ಬೆಳವಣಿಗೆಯಲ್ಲಿ ಸಾಗುತ್ತಿದೆ. ಈ ಮೂಲಕ ಪ್ರಧಾನಿ ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ಚಿತ್ರಣವನ್ನು ನಾಶ ಮಾಡುತ್ತಿದ್ದಾರೆ ಎಂದು ರಾಹುಲ್​​ ಗಾಂಧಿ ಆರೋಪಿಸಿದ್ದಾರೆ.

    ಯುಪಿಎ ಅವಧಿಯಲ್ಲಿ ಭಾರತದ ಜಿಡಿಪಿ ಶೇ. 9 ರಷ್ಟಿತ್ತು. ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುತ್ತಿತ್ತು ಎಂದಿರುವ ರಾಹುಲ್​, ಬಹುಶಃ ಪ್ರಧಾನಿ ಮೋದಿ ಆರ್ಥಶಾಸ್ತ್ರ ಅಧ್ಯಯನ ಮಾಡದೇ ಇರಬಹುದು ಅಥವಾ ಅರ್ಥ ಮಾಡಿಕೊಳ್ಳದೇ ಇರಬಹುದು, ಇದರಿಂದಲೇ ಆರ್ಥಿಕತೆ ಮಂದಗತಿಯಲ್ಲಿದೆ ಎಂದು ದೂರಿದ್ದಾರೆ.

    ಪ್ರಧಾನಿ ಮೋದಿಗೆ ಜಿಎಸ್​ಟಿ ಅಂದರೆ ಏನು ಎಂಬುದು ಸಹ ತಿಳಿದಿಲ್ಲ. ನೋಟ್​ ಬ್ಯಾನ್ ಮಾಡಿ ಏನು ಪ್ರಯೋಜನ ಪಡೆದರು. ನೋಟ್​ ಬ್ಯಾನ್​ನಿಂದ ಒಳ್ಳೆಯದಕ್ಕಿಂತ ತೊಂದರೆಯೇ ಹೆಚ್ಚಾಯಿತು ಎಂದು 8 ವರ್ಷದ ಬಾಲಕ ಕೂಡ ಹೇಳುತ್ತಾನೆ ಎಂದು ಜರಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts