More

    ಇದೇ ಮೊದಲ ಬಾರಿಗೆ ನ್ಯಾಷನಲ್​ ಕ್ರಿಯೇಟರ್ಸ್‌ ಅವಾರ್ಡ್ ಪ್ರದಾನ: ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ…

    ನವದೆಹಲಿ: ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವತಿಯಿಂದ ಸೋಶಿಯಲ್​ ಮೀಡಿಯಾ ಕಂಟೆಂಟ್​ ಕ್ರಿಯೇಟರ್​ಗಳಿಗೆ “ನ್ಯಾಷನಲ್​ ಕ್ರಿಯಟರ್ಸ್​ ಅವಾರ್ಡ್” ಪ್ರದಾನ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ದೆಹಲಿಯ ಭಾರತ ಮಂಟಪಂನಲ್ಲಿ ಪ್ರಶಸ್ತಿಗಳನ್ನು ವಿತರಿಸಿ, ಅಭಿನಂದಿಸಿದರು.

    ಉತ್ತಮ ಕಥೆಗಾರ, ದಿ ಡಿಸ್ರುಪ್ಟರ್​, ಸೆಲೆಬ್ರಿಟಿ ಕ್ರಿಯೇಟರ್, ಗ್ರೀನ್​ ಚಾಂಪಿಯನ್​, ಸಾಮಾಜಿಕ ಬದಲಾವಣೆಗೆ ಅತ್ಯುತ್ತಮ ಕ್ರಿಯೇಟರ್​, ಅತ್ಯಂತ ಪ್ರಭಾವಶಾಲಿ ಕೃಷಿ ಕ್ರಿಯೇಟರ್​, ಸಾಂಸ್ಕೃತಿಕ ರಾಯಭಾರಿ, ಬೆಸ್ಟ್​ ಟ್ರಾವೆಲ್​ ಕ್ರಿಯೇಟರ್​, ಸ್ವಚ್ಛತಾ ರಾಯಭಾರಿ, ನ್ಯೂ ಇಂಡಿಯನ್​ ಚಾಂಪಿಯನ್​, ಟೆಕ್​ ಕ್ರಿಯೇಟರ್​, ಹೆರಿಟೇಜ್​ ಫ್ಯಾಶನ್​, ಮೋಸ್ಟ್​ ಕ್ರಿಯೇಟಿವ್​​ ಕ್ರಿಯೇಟರ್​ (ಪುರುಷ ಮತ್ತು ಮಹಿಳೆ), ದಿ ಬೆಸ್ಟ್​ ಕ್ರಿಯೇಟರ್​ ಇನ್​ ಫುಡ್​ ಕೆಟಗರಿ, ದಿ ಬೆಸ್ಟ್​ ಕ್ರಿಯೇಟರ್​ ಇನ್​ ಎಜುಕೇಶನ್​ ಮತ್ತು ಇಂಟರ್ನ್ಯಾಷನಲ್​ ಕ್ರಿಯೇಟರ್​ ಅವಾರ್ಡ್​ ಸೇರಿದಂತೆ ಒಟ್ಟು 20 ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.

    ಕತೆ ಹೇಳುವಿಕೆ, ಸಾಮಾಜಿಕ ಬದಲಾವಣೆಯ ಸಮರ್ಥನೆ, ಪರಿಸರ ಸುಸ್ಥಿರತೆ, ಶಿಕ್ಷಣ ಮತ್ತು ಗೇಮಿಂಗ್ ಸೇರಿದಂತೆ ವಿವಿಧ ಡೊಮೇನ್‌ಗಳಲ್ಲಿ ಶ್ರೇಷ್ಠತೆ ಮತ್ತು ಪ್ರಭಾವವನ್ನು ಗುರುತಿಸುವ ಪ್ರಯತ್ನವಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಪ್ರಶಸ್ತಿ ವಿಜೇತರ ಪಟ್ಟಿ
    ಇಂದು ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಪ್ರೇರಕ ಭಾಷಣಕಾರ ಜಯ ಕಿಶೋರಿ, ಅಮೇರಿಕನ್ ಯೂಟ್ಯೂಬರ್ ಡ್ರೂ ಹಿಕ್ಸ್ ಸೇರಿದಂತೆ ಹಲವಾರು ಸೋಶಿಯಲ್​ ಮೀಡಿಯಾ ಇನ್ಫ್ಯುಯೆನ್ಸರ್​ಗಳಿಗೆ ಪ್ರಶಸ್ತಿಗಳನ್ನು ನೀಡಿದರು.

    * ಜಯ ಕಿಶೋರಿಗೆ ಸಾಮಾಜಿಕ ಬದಲಾವಣೆಗಾಗಿ ಅತ್ಯುತ್ತಮ ಕ್ರಿಯೇಟರ್​ ಅವಾರ್ಡ್​ ನೀಡಲಾಯಿತು
    * ಕಬಿತಾ ಸಿಂಗ್​ (Kabita’s Kitchen) ಅವರಿಗೆ ಆಹಾರ ವಿಭಾಗದಲ್ಲಿ ಉತ್ತಮ ಕ್ರಿಯೇಟರ್ ಪ್ರಶಸ್ತಿ
    * ಡ್ರೂ ಹಿಕ್ಸ್ ಅವರಿಗೆ ಅತ್ಯುತ್ತಮ ಇಂಟರ್ನ್ಯಾಷನಲ್​ ಕ್ರಿಯೇಟರ್​ ಅವಾರ್ಡ್​
    * ಕಾಮಿಯಾ ಜೈನ್​ ಅವರಿಗೆ ಅತ್ಯುತ್ತಮ ಟ್ರಾವೆಲ್​ ಕ್ರಿಯೇಟರ್​ ಅವಾರ್ಡ್​
    * ರಣವೀರ್​ ಅಲ್ಲಾಬಾಡಿಯಾ (ಬೀರ್​ ಬೈಸಿಪ್ಸ್​) ಅವರಿಗೆ ಡಿಸ್ರುಪ್ಟರ್​ ಆಫ್​ ದಿ ಇಯರ್​ ಅವಾರ್ಡ್​
    * ಆರ್​ಜೆ ರೌನಾಕ್​ (Bauaa) ಅವರಿಗೆ ಮೋಸ್ಟ್​ ಕ್ರಿಯೆಟಿವ್​ ಕ್ರಿಯೆಟರ್ (ಪುರುಷ)​ ಅವಾರ್ಡ್​
    * ಕರ್ನಾಟಕದ ಶ್ರದ್ಧಾ ಜೈನ್​ ಅವರಿಗೆ ಮೋಸ್ಟ್​ ಕ್ರಿಯೇಟಿವ್​ ಕ್ರಿಯೇಟರ್ (ಮಹಿಳೆ)​ ಅವಾರ್ಡ್​
    * ಅರಿದಮ್ಯಾನ್​ ಅವರಿಗೆ ಬೆಸ್ಟ್​ ಮೈಕ್ರೋ ಕ್ರಿಯೇಟರ್​ ಅವಾರ್ಡ್​
    * ನಿಶ್ಚಯ್​ ಅವರಿಗೆ ಬೆಸ್ಟ್​ ಕ್ರಿಯೇಟರ್ ಇನ್​ ಗೇಮಿಂಗ್​ ಕೆಟಗರಿ ಅವಾರ್ಡ್​
    * ಅಂಕಿತ್​ ಬೈಯನಪುರಿಯಾಗೆ ಬೆಸ್ಟ್​ ಹೆಲ್ತ್​ ಆ್ಯಂಡ್​ ಫಿಟ್​ನೆಸ್​ ಕ್ರಿಯೇಟರ್​ ಅವಾರ್ಡ್​
    * ನಮನ್​ ದೇಶ್​ಮುಖ್​ಗೆ ಬೆಸ್ಟ್​ ಕ್ರಿಯೇಟರ್ಇನ್​ ಎಜುಕೇಶನ್​ ಕೆಟಗರಿ ಅವಾರ್ಟ್​
    * ಜಾನ್ಹವಿ ಸಿಂಗ್​ಗೆ ಹೆರಿಟೇಜ್​ ಫ್ಯಾಶನ್​ ಐಕಾನ್​ ಅವಾರ್ಡ್​
    * ಮಲ್ಹಾರ್​ ಕಲಂಬೆ ಅವರಿಗೆ ಸ್ವಚ್ಛತಾ ರಾಯಭಾರಿ ಪ್ರಶಸ್ತಿ
    * ಗೌರವ್​ ಚೌಧರಿಗೆ ಬೆಸ್ಟ್​ ಕ್ರಿಯೇಟರ್ ಇನ್​ ಟೆಕ್​ ಕೆಟಗರಿ ಅವಾರ್ಡ್​
    * ಮೈಥಿಲಿ ಠಾಕೂರ್​ಗೆ ವರ್ಷದ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ
    * ಪಂಕ್ತಿ ಪಾಂಡೆಗೆ ಫೇವರಿಟ್​ ಗ್ರೀನ್​ ಚಾಂಪಿಯನ್​ ಅವಾರ್ಡ್​
    * ಕೀರ್ತಿಕಾ ಗೋವಿಂದಸ್ವಾಮಿಗೆ ಅತ್ಯುತ್ತಮ ಕತೆಗಾರ ಪ್ರಶಸ್ತಿ
    * ಅಮನ್​ ಗುಪ್ತಗೆ ಸೆಲೆಬ್ರಿಟಿ ಕ್ರಿಯೇಟರ್​ ಅವಾರ್ಡ್​

    PHOTOS| ಗುಲಾಬಿ ಬಣ್ಣದ ಸೀರೆಯಲ್ಲಿ ಮಾದಕ ನೋಟ ಬೀರಿದ ದಿಯಾ ಖ್ಯಾತಿಯ ಖುಷಿ ರವಿ!

    ನಮ್ಮ ಬಸವ ಸಿನಿಮಾದ ಗೌರಿ ಈಗ ಹೇಗಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts