More

    ‘ನಮಸ್ತೆ’ ಎಂದರೆ ಕೇವಲ ವ್ಯಕ್ತಿಗೆ ಗೌರವ ಸೂಚಿಸುವುದಲ್ಲ…ಅವನೊಳಗಿನ ದೈವತ್ವಕ್ಕೂ ನಮಿಸುವ ಅರ್ಥವನ್ನೊಳಗೊಂಡ ಪದ: ಮೊಟೆರಾದಲ್ಲಿ ಮೋದಿ ಭಾಷಣ

    ಅಹಮದಾಬಾದ್​: ಮೊಟೆರಾ ಕ್ರೀಡಾಂಗಣ ತಲುಪಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಮೆಲಾನಿಯಾ ಟ್ರಂಪ್ ಅವರನ್ನು ಗೃಹ ಸಚಿವ ಅಮಿತ್​ ಷಾ, ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ ಮತ್ತಿತರ ಗಣ್ಯರು ಬರಮಾಡಿಕೊಂಡರು.

    ವೇದಿಕೆಗೆ ಆಗಮಿಸಿದ ಡೊನಾಲ್ಡ್ ಟ್ರಂಪ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ನೆರೆದಿದ್ದ ಲಕ್ಷಾಂತರ ಜನರ ಎದುರು ಕೈಬೀಸಿದರು. ಇಬ್ಬರೂ ಕೈ ಹಿಡಿದುಕೊಂಡು ಮೇಲೆತ್ತಿ, ತಮ್ಮಿಬ್ಬರ ನಡುವಿನ ಸ್ನೇಹವನ್ನು ತೋರಿಸಿದರು. ನಂತರ ರಾಷ್ಟ್ರಗೀತೆ ಹಾಡುವ ವೇಳೆ ಎಲ್ಲರೂ ಎದ್ದುನಿಂತು ಗೌರವ ಸೂಚಿಸಿದರು.

    ನಂತರ ಮೊದಲು ಭಾಷಣ ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಕಳೆದ ಐದು ತಿಂಗಳ ಹಿಂದೆ ಅಮೆರಿಕದಲ್ಲಿ ನಡೆದ ‘ಹೌಡಿ ಮೋದಿ’ ಸಮಾರಂಭವನ್ನು ನೆನಪಿಸಿಕೊಂಡರು.
    ಕಳೆದ ಐದು ತಿಂಗಳ ಹಿಂದೆ ನಾನು ಹೌಡಿ ಮೋದಿಗಾಗಿ ಯುಎಸ್​ಗೆ ಹೋಗಿದ್ದೆ. ಇವತ್ತು ನನ್ನ ಸ್ನೇಹಿತ ಡೊನಾಲ್ಡ್​

    ಟ್ರಂಪ್​ ‘ನಮಸ್ತೆ ಟ್ರಂಪ್​’ಗಾಗಿ ಭಾರತಕ್ಕೆ ಬಂದಿದ್ದಾರೆ. ಹೌಡಿ ಮೋದಿ ಒಂದು ಐತಿಹಾಸಿಕ ಕ್ಷಣವಾಗಿತ್ತು. ಇವತ್ತು ಆ ಇತಿಹಾಸ ಮರುಕಳಿಸಿದೆ ಎಂದು ಹೇಳಿದರು.

    ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಟ್ರಂಪ್​ ಅವರಿಗೆ ಹಾರ್ದಿಕ ಸ್ವಾಗತ. ನೀವು ಗುಜರಾತ್​ಗೆ ಆಗಮಿಸಿರಬಹುದು. ಆದರೆ ಇಡೀ ದೇಶವೇ ನಿಮ್ಮನ್ನು ಅತ್ಯುತ್ಸಾಹದಿಂದ ಸ್ವಾಗತಿಸುತ್ತಿದೆ.

    ‘ನಮಸ್ತೆ ಟ್ರಂಪ್’​ ನಲ್ಲಿ ನಮಸ್ತೆ ಎಂಬ ಪದಕ್ಕೆ ಆಳವಾದ ಅರ್ಥವಿದೆ. ಜಗತ್ತಿನ ಅತ್ಯಂತ ಹಳೇ ಭಾಷೆಯಾದ ಸಂಸ್ಕೃತ ಈ ಶಬ್ದದ ಮೂಲ. ನಮಸ್ತೆ ಎಂದರೆ ಕೇವಲ ವ್ಯಕ್ತಿಗೆ ಗೌರವ ಸೂಚಿಸುವುದಲ್ಲ. ಆ ವ್ಯಕ್ತಿಯೊಳಗೆ ಅಡಕವಾಗಿರುವ ದೈವತ್ವದ ಅಂಶಕ್ಕೂ ನಮಸ್ಕರಿಸುತ್ತಿದ್ದೇವೆ ಎಂಬ ಆಳ ಅರ್ಥವನ್ನು ಹೊಂದಿರುವ ಪದ ಎಂದು ಮೋದಿ ವಿವರಿಸಿದರು.

    ನರೇಂದ್ರ ಮೋದಿಯವರ ಭಾಷಣ ಮುಗಿಯುತ್ತಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎದ್ದು ನಿಂತು ಮೋದಿಯವರನ್ನು ಅಪ್ಪಿಕೊಂಡರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts