More

  ಕೋಲ್ಕತ್ತ ಪೋರ್ಟ್​ ಟ್ರಸ್ಟ್​ಗೆ ಡಾ. ಶ್ಯಾಮ್​ ಪ್ರಸಾದ್ ಮುಖರ್ಜಿ ಪೋರ್ಟ್​ ಎಂದು ಮರುನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ; ಸಮಾರಂಭದಿಂದ ದೂರವೇ ಉಳಿದ ದೀದಿ

  ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿಯವರು ಕೋಲ್ಕತ್ತ ಪೋರ್ಟ್​ ಟ್ರಸ್ಟ್​​ಗೆ ಡಾ.ಶ್ಯಾಮ್​ ಪ್ರಸಾದ್​ ಮುಖರ್ಜಿ ಪೋರ್ಟ್​ ಎಂದು ಮರುನಾಮಕರಣ ಮಾಡುವುದಾಗಿ ಇಂದು ಘೋಷಿಸಿದರು.

  ಭಾರತೀಯ ಜನತಾ ಸಂಘದ (ಈಗಿನ ಭಾರತೀಯ ಜನತಾ ಪಾರ್ಟಿ ಬಿಜೆಪಿ)) ಸಂಸ್ಥಾಪಕರಾಗಿರುವ ಡಾ. ಶ್ಯಾಮ ಪ್ರಸಾದ್​ ಮುಖರ್ಜಿ ಅವರು ಮೂಲತಃ ಕೋಲ್ಕತ್ತದವರೇ ಆಗಿದ್ದಾರೆ. ಇಂದು ಕೋಲ್ಕತ್ತ ಪೋರ್ಟ್​ ಟ್ರಸ್ಟ್​ನ 150ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಮಹತ್ವದ ನಿರ್ಧಾರವನ್ನು ಘೋಷಿಸಿದ್ದಾರೆ.

  ಕೋಲ್ಕತ್ತ ಪೋರ್ಟ್​ ಟ್ರಸ್ಟ್​ನ 150ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಬಂಗಾಳದ ಜನತೆಗೆ ಇಂದು ಮಹತ್ವದ ದಿನ. ಇದೊಂದು ಐತಿಹಾಸಿಕ ಬಂದರು. ಅಂದು ಭಾರತಕ್ಕೆ ಬಂದ ಸ್ವಾತಂತ್ರ್ವನ್ನೂ ನೋಡಿದರುವ ಈ ಬಂದರು, ಇಂದು ದೇಶದ ಅಭಿವೃದ್ಧಿಗೂ ಸಾಕ್ಷಿಯಾಗುತ್ತಿದೆ. ಇನ್ನು ಮುಂದೆ ಕೋಲ್ಕತ್ತ ಪೋರ್ಟ್​ ಟ್ರಸ್ಟ್​ನ್ನು ಡಾ. ಶ್ಯಾಮ್​ ಪ್ರಸಾದ್​ ಮುಖರ್ಜಿ ಬಂದರು ಎಂದು ಹೆಸರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

  ಕೈಗಾರಿಕೆ, ಆಧ್ಯಾತ್ಮಿಕ ಮತ್ತು ಸ್ವಾವಲಂಬನೆಯನ್ನು ಪ್ರತಿನಿಧಿಸುವ ಈ ಬಂದರು 150ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾವದನ್ನು ಇನ್ನಷ್ಟು ವಿಶೇಷವಾಗಿಸಬೇಕು. ನವ ಭಾರತದ ಒಂದು ಶಕ್ತಿಶಾಲಿ ಸಂಕೇತವನ್ನಾಗಿ ಮಾಡಬೇಕು ಎಂದು ತಿಳಿಸಿದರು.

  ಕೋಲ್ಕತ್ತ ಪೋರ್ಟ್​ ಟ್ರಸ್ಟ್​ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಳ್ಳಲಿಲ್ಲ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಮತ್ತೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts