More

    ಆಧುನಿಕ ಶ್ರೀ ಕೃಷ್ಣ ಪ್ರಧಾನಿ ಮೋದಿ, ನವಭಾರತ ನಿರ್ಮಾಣಕ್ಕಾಗಿ ನಿರಂತರ ಶ್ರಮ: ಸಚಿವ ಶ್ರೀರಾಮುಲು

    ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನವ ಭಾರತ ನಿರ್ಮಾಣಕ್ಕಾಗಿ ಶ್ರೀಕೃಷ್ಣನಂತೆ ಕೆಲಸ ಮಾಡುತ್ತಿದ್ದಾರೆ.‌ಅವರ ಜನಪ್ರಿಯತೆ ಸಹಿಸದವರು ಸುಖಾಸುಮ್ಮನೇ ಟೀಕಿಸುತ್ತಾರೆಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಮುನಿರಾಬಾದ್ ನಲ್ಲಿ ಮಂಗಳವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಮಹಾಭಾರತದಲ್ಲಿ ಶ್ರೀಕೃಷ್ಣನಂತೆ ಭಾರತದ ಅಭಿವೃದ್ಧಿಯಲ್ಲಿ ಮೋದಿ ಪಾತ್ರವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1.29 ಲಕ್ಷ‌ ಕೋಟಿ ಅನುದಾನ ನೀಡಿದೆ.

    ಮೊದಲು ಮೋದಿ ರಾಜ್ಯಕ್ಕೆ ಬರಲಿ ಅಂದರು. ಬಂದರೆ ಏನೇನೋ ನೆಪ ಹೇಳಿ ವಿಪಕ್ಷ ನಾಯಕ‌ ಸಿದ್ದರಾಮಯ್ಯ ಮೂರ್ಖತನದ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯಕ್ಕೆ ಮೋದಿ ಕೊಡುಗೆ ಏನೆಂಬುದು ರಾಜ್ಯದ ಜನರಿಗೆ ತಿಳಿದಿದೆ. ಯುಪಿಎ ಸರ್ಕಾರ‌ ಇದ್ದಾಗ ಪ್ರಧಾನಿಗಳು ಎಷ್ಟು ಬಾರಿ ರಾಜಕ್ಕೆ ಬಂದು ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದರು.

    ಪ್ರತಿಯೊಬ್ಬ ಭಾರತೀಯ ಯುವಕರಿಗೆ ಅಗ್ನಿಪಥ್ ಯೋಜನೆ ಉಪಯುಕ್ತವಾಗಿದೆ. ಬೇರೆ ಬೇರೆ ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಆದರಡ ಕಾಂಗ್ರೆಸದ ಷಡ್ಯಂತ್ರ ನಡೆಸಿ ಅಪಪ್ರಚಾರ ಮಾಡುತ್ತಿದೆ. ದೇಶ ಸೇವೆ ಮಾಡುವುದರಿಂದ ಯುವಕರಲ್ಲಿ ದೇಶಾಭಿಮಾನ, ಗೌರವ, ವಿಶ್ವಾಸ ಹೆಚ್ಚಲಿದೆ. ಸೈನಿಕನ ಗುಣಗಳು ಬರುತ್ತವೆ. ನಾಲ್ಕು ವರ್ಷದ ನಂತರ ಬೇರೆ ಕೆಲಸಗಳನ್ನು ಮಾಡಬಹುದು. ಅದಕ್ಕೆ ಆದ್ಯತೆ ಮೇಲೆ ಅವಕಾಶಗಳಿವೆ ಎಂದು ಯೋಜನೆ ಸಮರ್ಥಿಸಿಕೊಂಡರು.

    ಮೋದಿ ಗುಜರಾತ್ ಸಿಎಂ ಇದ್ದಾಗಿನಿಂದಲೂ ಪರಿಚಿತರು. ಸಂಸದನಾಗಿ ಅವರೊಟ್ಟಿಗೆ ಕೆಲಸ ಮಾಡಿರುವೆ. ಆ ಆತ್ಮೀಯತೆ ಉಳಿಸಿಕೊಂಡಿದ್ದೇವೆ. ದೆಹಲಿಗೆ ಬಂದಿಲ್ಲವಾ ಎಂದು ವಿಚಾರಿಸಿದರು ಎಂದು ಸ್ಪಷ್ಟನೆ ನೀಡಿದರು.

    ಸುಚೇಂದ್ರ ಪ್ರಸಾದ್​ ಜತೆಗೆ ಬಿರುಕು, ಮತ್ತೊಂದು ಮದುವೆಯಾಗಿದ್ದಾರಾ ಪವಿತ್ರಾ ಲೋಕೇಶ್​?

    ಪ್ರವಾಸಿಗರಿಗೆ ವಿಶ್ವ ಯೋಗ ದಿನದ ಗಿಫ್ಟ್​: ಇಂದು ತಾಜ್​​ ಮಹಲ್​ ವೀಕ್ಷಣೆಗಿಲ್ಲ ಪ್ರವೇಶ ಶುಲ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts