More

    ಕೆಂಪುಕೋಟೆಯಲ್ಲಿ 10ನೇ ಬಾರಿ ಧ್ವಜಾರೋಹಣ ನೆರವೇರಿಸಿ ದಾಖಲೆ ಬರೆದ ಪ್ರಧಾನಿ ಮೋದಿ

    ನವದೆಹಲಿ: ಎಪ್ಪತ್ತೇಳನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪು ಕೋಟೆಯಲ್ಲಿ ಇಂದು (ಆ.15) ಬೆಳಗ್ಗೆ 7.30ಕ್ಕೆ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ದಾಖಲೆ ನಿರ್ವಿುಸಲಿದ್ದಾರೆ.

    ಸತತ 10 ಬಾರಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ದಾಖಲೆ ಸರಿಗಟ್ಟಿದ್ದಾರೆ. ಅತಿ ಹೆಚ್ಚು ಬಾರಿ ಧ್ವಜಾರೋಹಣ ನೆರವೇರಿಸಿದ ಮೂರನೆಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

    ಧ್ವಜಾರೋಹಣಕ್ಕೂ ಮುನ್ನ ರಾಜ್​ಘಾಟ್​ನಲ್ಲಿರುವ ಗಾಂಧಿ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಶಿರಬಾಗಿ ಗಾಂಧಿ ಸ್ಮಾರಕಕ್ಕೆ ನಮಿಸಿದ ಪ್ರಧಾನಿ ಮೋದಿ, ಸ್ಮಾರಕದ ಸುತ್ತ ಪ್ರದಕ್ಷಿಣೆ ಹಾಕಿದರು. ಬಳಿಕ ಅಲ್ಲಿಂದ ಕೆಂಪುಕೋಟೆಯತ್ತ ಪ್ರಧಾನಿ ಮೋದಿ ತೆರಳಿದರು.

    ಇದಕ್ಕೂ ಮುನ್ನ ತಮ್ಮ ಎಕ್ಷ್​ (ಟ್ವಿಟರ್​) ಖಾತೆಯಿಂದ ಟ್ವೀಟ್​ ಮಾಡಿರುವ ಪ್ರಧಾನಿ, ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸೋಣ ಮತ್ತು ಅವರ ವಿಷನ್​ ಅನ್ನು ನೆರವೇರಿಸುವ ಬದ್ಧತೆಯನ್ನು ನಾವು ಪುನರ್​ದೃಢೀಕರಿಸೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

    ಇಲ್ಲಿಯವರೆಗೆ, ಭಾರತ 15 ಪ್ರಧಾನಿಗಳನ್ನು ಕಂಡಿದೆ. ಈ 15 ಪ್ರಧಾನಿಗಳ ಪೈಕಿ 13 ಮಂದಿ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ. ಗುಲ್ಜಾರಿಲಾಲ್ ನಂದಾ ಮತ್ತು ಚಂದ್ರಶೇಖರ್ ಅವರಿಗೆ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸುವ ಅವಕಾಶ ಸಿಗಲಿಲ್ಲ. ಗರಿಷ್ಠ ಬಾರಿ ಧ್ವಜ ಹಾರಿಸಿದ ದಾಖಲೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿದೆ. ಆಗಸ್ಟ್ 15, 1947ರಂದು ಅವರು ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.

    ನೆಹರು ನಿಧನರಾಗುವ ಮುನ್ನ ಮೇ 27, 1964ರಲ್ಲಿ ಧ್ವಜ ಹಾರಿಸಿದರು. ಈ ಅವಧಿಯಲ್ಲಿ ಅವರು ಸತತ 17 ಬಾರಿ ರಾಷ್ಟ್ರಧ್ವಜವನ್ನು ಹಾರಿಸಿದರು. ನೆಹರು ಅವರ ಪುತ್ರಿ ಇಂದಿರಾ ಗಾಂಧಿ ಅವರು ರಾಷ್ಟ್ರಧ್ವಜವನ್ನು ಅತಿ ಹೆಚ್ಚು ಬಾರಿ ಹಾರಿಸಿದ ಎರಡನೇ ದಾಖಲೆಯನ್ನು ಹೊಂದಿದ್ದಾರೆ. ಅವರು 16 ಬಾರಿ ಧ್ವಜಾರೋಹಣ ಮಾಡಿದ್ಧಾರೆ. ಆದರೆ, ನೆಹರು ರೀತಿಯಲ್ಲಿ ಇಂದಿರಾ ಅವರು ನಿರಂತರವಾಗಿ ಧ್ವಜಾರೋಹಣ ಮಾಡಲಿಲ್ಲ. ಅಂದಾಜು ನಾಲ್ಕು ವರ್ಷಗಳ ಅಂತರ ಇತ್ತು. ಪ್ರಧಾನಿಯಾಗಿ ತಮ್ಮ ಮೊದಲ ಅವಧಿಯಲ್ಲಿ ಇಂದಿರಾ ಅವರು ಜನವರಿ 24, 1966 ರಿಂದ ಮಾರ್ಚ್ 24, 1977ರವರೆಗೆ ಸತತ 11 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದರು. ನಂತರ ಜನವರಿ 14, 1980 ಮತ್ತು ಅಕ್ಟೋಬರ್ 31, 1984ರ ನಡುವಿನ ಅವಧಿಯಲ್ಲಿ ಸತತ ಐದು ಬಾರಿ ಧ್ವಜಾರೋಹಣ ಮಾಡಿದರು.

    ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸೋಣ: 77ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಶುಭ ಕೋರಿದ ಪ್ರಧಾನಿ

    77ನೇ ಸ್ವಾತಂತ್ರ್ಯೋತ್ಸವ: ರಾಜ್​ಘಾಟ್​ನಲ್ಲಿರುವ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts