More

    ರಾಹುಲ್ ಗಾಂಧಿ ‘ಒಂದೇ ಏಟಿಗೆ ಬಡತನ ನಿವಾರಣೆ’ ಹೇಳಿಕೆ ವಿರುದ್ಧ ಪ್ರಧಾನಿ ಕಿಡಿ; ಅಜ್ಜಿ ಆಯಿತು, ಈಗ ಮೊಮ್ಮಗನ ಸರದಿ ಎಂದ ಮೋದಿ!

    ಭೋಪಾಲ್​: ಒಂದೇ ಏಟಿಗೆ ಬಡತನವನ್ನು ನಿವಾರಿಸುತ್ತೇನೆ ಎಂದಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯನ್ನು ಪ್ರಧಾನಿ ಮೋದಿ ಅವರು ಮಹಾ ಮಾಂತ್ರಿಕ ಎಂದು ಲೇವಡಿ ಮಾಡಿದ್ದಾರೆ.

    ಇದನ್ನೂ ಓದಿ: ಕೆನಡಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು: 24 ವರ್ಷದ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ

    ಮಧ್ಯಪ್ರದೇಶದ ಹೋಶಂಗಾಬಾದ್ ಲೋಕಸಭಾ ಕ್ಷೇತ್ರದ ಪಿಪಾರಿಯಾ ಪಟ್ಟಣದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಒಂದೇ ಏಟಿಗೆ ದೇಶದ ಬಡತನವನ್ನು ನಿವಾರಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದು ಬಡವರನ್ನು ಅವಮಾನ ಮಾಡಿದಂತೆ. ಅಂದಹಾಗೆ ದೇಶದ ಜನರು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ತಿರುಗೇಟು ನೀಡಿದರು.

    2024ಕ್ಕೆ ಮುಂಚೆ 10 ವರ್ಷಗಳ ಕಾಲ ಹೊರಗಿನಿಂದ ಸರ್ಕಾರವನ್ನು ನಿಯಂತ್ರಿಸುತ್ತಿದ್ದರು. ಈಗ ಬಡತನ ನಿವಾರಿಸುವ ಮಂತ್ರ ಸಿಕ್ಕಿದೆ ಎನ್ನುತ್ತಿದ್ದಾರೆ. ಎಲ್ಲಿಂದ ಸಿಕ್ಕಿತು ಈ ಮಂತ್ರ ಇವರಿಗೆ? ಈ ರಾಜ ಮಾಂತ್ರಿಕ ಇಷ್ಟು ವರ್ಷಗಳ ಕಾಲ ಎಲ್ಲಿ ಅಡಗಿಕೊಂಡಿದ್ದರು. ದೇಶದಿಂದ ಬಡತನವನ್ನು ತೊಡೆದುಹಾಕುವುದಾಗಿ ಅವರ ಅಜ್ಜಿ ಘೋಷಿಸಿ 50 ವರ್ಷಗಳು ಕಳೆದಿವೆ ಎಂದು ಗಾಂಧಿ ಕುಟುಂಬದ ಪ್ರಚಾರ ಸಭೆಯಲ್ಲಿ ಗುಡುಗಿದರು.

    ಕಳೆದ ವಾರ, ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, “ಬಡತನವನ್ನು ಒಂದೇ ಏಟಿನಲ್ಲಿ ಅಳಿಸಿಹಾಕಲಾಗುವುದು ಎಂದು ಹೇಳಿದ್ದರು.

    ನೀವು ಬಡತನ ರೇಖೆಯಿಂದ ಕೆಳಗಿದ್ದರೆ ಆಗ ಒಂದು ಲಕ್ಷ ರೂ ಹಣ ನಿಮ್ಮ ಖಾತೆ ಬಂದು ಬೀಳುತ್ತಿರುತ್ತದೆ. ಈ ಒಂದೇ ಹೊಡೆತದಿಂದ ಹಿಂದೂಸ್ತಾನದಿಂದ ಬಡತನವನ್ನು ತೊಲಗಿಸುತ್ತೇವೆ,’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ತಿಳಿಸಿದ್ದರು.

    ಇದು ಬರೀ ಟ್ರೈಲರ್ ಅಷ್ಟೇ..; ನಟ ಸಲ್ಮಾನ್ ಮನೆ ಮೇಲೆ ದಾಳಿ ಹೊಣೆ ಹೊತ್ತ ಬಿಷ್ಣೋಯಿ ಗ್ಯಾಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts