More

    ಟಿವಿಯಲ್ಲಿ ರಾಮಮಂದಿರ ಶಿಲಾನ್ಯಾಸ ಸಮಾರಂಭ ನೋಡುತ್ತ ಭಾವುಕರಾಗಿ ಕೈ ಮುಗಿದ ಪ್ರಧಾನಿ ತಾಯಿ

    ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಮಂದಿರಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಇಡೀ ದೇಶದ ಜನರು ಉತ್ಸುಕತೆಯಿಂದ, ಸಂತೋಷದಿಂದ ಈ ದೃಶ್ಯವನ್ನು ಟಿವಿ ಮೂಲಕ ಕಣ್ತುಂಬಿಕೊಂಡಿದ್ದಾರೆ.

    ಹಾಗೇ ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್​ ಕೂಡ ತಮ್ಮ ಮನೆಯ ಟಿವಿಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಹೀರಾಬೆನ್​ ಅವರು ತಮ್ಮ ಪ್ರೀತಿಯ ಪುತ್ರ ನರೇಂದ್ರ ಮೋದಿಯವರು ಶಿಲಾನ್ಯಾಸ, ಪೂಜೆ ನೆರವೇರಿಸಿದ್ದನ್ನು, ರಾಮಲಲ್ಲಾ ವಿಗ್ರಹಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ್ದನ್ನೆಲ್ಲ ಟಿವಿಯಲ್ಲಿ ನೋಡಿದ್ದಾರೆ. ಅಷ್ಟೇ ಅಲ್ಲ, ತಾವು ಕುಳಿತ ಜಾಗದಿಂದಲೇ ಅದನ್ನೆಲ್ಲ ನೋಡುತ್ತ, ಭಾವುಕರಾಗಿ ಕೈಮುಗಿದಿದ್ದಾರೆ. ಅವರ ಫೋಟೋ, ವಿಡಿಯೋಗಳೂ ಕೂಡ ವೈರಲ್​ ಆಗಿವೆ. ಇದನ್ನೂ ಓದಿ: VIDEO: ಶ್ರೀರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ…

    ಹೀರಾಬೆನ್​ ಅವರು ಗುಜರಾತ್​​ನ ಗಾಂಧಿನಗರದ ತಮ್ಮ ನಿವಾಸದಲ್ಲಿ ವಾಸವಾಗಿದ್ದಾರೆ. ಕರೊನಾ ವೈರಸ್​ ನಿಯಂತ್ರಣಕ್ಕಾಗಿ ಲಾಕ್​ಡೌನ್ ಜಾರಿ ಮಾಡಿದ್ದ ಸಂದರ್ಭದಲ್ಲಿ ಒಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು, ಎಲ್ಲರೂ ತಮ್ಮ ಮನೆಯಲ್ಲಿ ದೀಪ ಬೆಳಗುವಂತೆ ಮನವಿ ಮಾಡಿದ್ದರು. ಅಂದು ಕೂಡ ಪುತ್ರನ ಮಾತಿನಂತೆ ಹೀರಾಬೆನ್​ ತಮ್ಮ ಮನೆಯಲ್ಲೂ ದೀಪ ಬೆಳಗಿದ್ದರು.
    ಹೀರಾಬೆನ್​ ಅವರು ತಮ್ಮ ಮಗನ ಪ್ರತಿ ಮಹತ್ವದ ನಿರ್ಧಾರವನ್ನೂ ಬೆಂಬಲಿಸುತ್ತಾರೆ. ಮೋದಿಯವರೂ ಸಹ ಮಹತ್ವದ ಸಮಯದಲ್ಲಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಾರೆ. (ಏಜೆನ್ಸೀಸ್​)

    ಅಯೋಧ್ಯೆಗೆ ಸೇರಬೇಕಿದ್ದ ಶ್ರೀರಾಮ, ಸೀತೆ, ಲಕ್ಷ್ಮಣರ ಪಂಚಲೋಹದ ವಿಗ್ರಹಗಳು ಬೆಳ್ತಂಗಡಿಯ ಕಣಿಯೂರಿನಲ್ಲಿ ಪ್ರತಿಷ್ಠಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts