More

    ನಲವತ್ತು ವರ್ಷದಿಂದ ಚರ್ಚೆಯಲ್ಲಿದ್ದ ಯೋಜನೆಗಳು 40 ತಿಂಗಳಲ್ಲಿ ಪೂರ್ಣ,ಈಗ ಭಾರತೀಯ ರೈಲ್ವೇ ಹಿಂದಿನಂತಿಲ್ಲ: ಪ್ರಧಾನಿ ಮೋದಿ

    ಬೆಂಗಳೂರು: ಬೆಂಗಳೂರು ನಗರ ಯುವಕರ ಕನಸಾಗಿದೆ, ಜನರ ಕನಸುಗಳು ಸಾಕಾರಗೊಳ್ಳಲು ಇಂತಹ ಯೋಜನೆಗಳು ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾವೇಶ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದ ಯೋಜನೆಗಳು ನೆನಗುದಿಗೆ ಬಿದ್ದಿತು. 40 ವರ್ಷದಿಂದ ಚರ್ಚೆಯಲ್ಲಿದ್ದ ಯೋಜನೆಗಳನ್ನು 40 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಇದೇ ಬದ್ಧತೆ ನಮಗೆ ಈ ಯೋಜನೆಗಳನ್ನು ಮಾಡಿಸುತ್ತಿದೆ ಎಂದರು.

    ಭಾರತೀಯ ರೈಲ್ವೆಯಲ್ಲಿ ಈಗ ವಿಮಾನ ರೀತಿಯ ಸೌಲಭ್ಯವಿದೆ. ಈಗ ಸ್ವಚ್ಛ, ಸುರಕ್ಷಿತ ಆಧುನಿಕತೆಯಿಂದ ರೈಲುಗಳು ಮಾರ್ಪಾಡಾಗಿವೆ. ಬೆಂಗಳೂರು ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ್ದೇವೆ. ಶೀಘ್ರದಲ್ಲೇ ಬೆಂಗಳೂರಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಜನರ ಕನಸು ನನಸಾಗಲಿದೆ ಎಂದು ಹೇಳಿದರು.

    ನನ್ನನ್ನು ನಂಬಿ ನೀವು ನನಗೆ ಜವಾಬ್ದಾರಿ ಕೊಟ್ಟಿದ್ದೀರಿ, ನಾನು ಸಮಯ ವ್ಯರ್ಥ ಮಾಡುವುದಿಲ್ಲ, ಪ್ರತಿ ಕ್ಷಣವನ್ನು ನಿಮ್ಮ ಸೇವೆಗೆ ಮೀಸಲಿಟ್ಟಿದ್ದೇವೆ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸದಾ ಬದ್ಧರಿದ್ದೇವೆ ಎಂದರು.

    ನಿಮ್ಮ ಸೇವೆಗೆ ನಾವು ಸದಾ ಸಿದ್ಧ, ನೀಡಿದ್ದ ಭರವಸೆಗೆ ಇಂದು ಸಾಕ್ಷಿಯಾಗಿದ್ದೇವೆ: ಪ್ರಧಾನಿ ಮೋದಿ

    ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ: ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು… ಬೆಂಗ್ಳೂರಿನ ಮಹಾ ಜನತೆಗೆ ಧನ್ಯವಾದಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts