More

    ಅಯೋಧ್ಯೆ ಭೇಟಿಯಿಂದಾಗಿ ಮೂರು ದಾಖಲೆಗಳಿಗೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿ

    ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಭವ್ಯ ಶ್ರೀರಾಮ ಮಂದಿರದ ಭೂಮಿ ಪೂಜೆಗಾಗಿ ಅಯೋಧ್ಯೆಗೆ ಭೇಟಿ ನೀಡಿದ್ದು ಕೆಲ ಅಚ್ಚರಿಯ ದಾಖಲೆಗಳಿಗೂ ಸಾಕ್ಷಿಯಾಗಿದೆ.
    ಮೋದಿ ಅಯೋಧ್ಯೆಗೆ ಕಾಲಿಟ್ಟಿದ್ದು ಬರೋಬ್ಬರಿ 28 ವರ್ಷಗಳ ಬಳಿಕ ಎನ್ನುವುದು ವಿಶೇಷ. ಇದಕ್ಕೂ ಮುನ್ನ ಮೋದಿ 1992ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಅಂದಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ.

    ಈವರೆಗಿನ ಇತಿಹಾಸದಲ್ಲಿಯೇ ಮೋದಿ ರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಿದ ಮೊದಲ ಪ್ರಧಾನಿ ಆಗಿದ್ದಾರೆ. ಇದಲ್ಲದೇ, ಇಲ್ಲಿನ ಹನುಮಾನ್​ ಗಡಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಪ್ರಥಮ ಪ್ರಧಾನಿಯೂ ಹೌದು.

    ಇದನ್ನೂ ಓದಿ; ರಾಮಮಂದಿರಕ್ಕೆ ಭೂಮಿ ಪೂಜೆ ಸಂವಿಧಾನ ವಿರೋಧಿ; ಎಡಪಕ್ಷಗಳ ವಾದವೇನು? 

    ಭಾರತೀಯ ಸಂಸ್ಕೃತಿಯ ಪ್ರತೀಕವಾದ ಹಾಗೂ ಸಾಂಸ್ಕೃತಿಕ ಪರಂಪರೆಯ ಹೆಗ್ಗಳಿಕೆಯ ವಾದ ದೇಗುಲದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಥಮ ಪ್ರಧಾನಿ ಎನಿಸಿಕೊಂಡಿದ್ದಾರೆ.

    ಇದಕ್ಕೂ ಮುನ್ನ 1992ರಲ್ಲಿ ಮೋದಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಆಗ ಮುರಳಿ ಮನೋಹರ್​ ಜೋಶಿ ಅವರೊಂದಿಗೆ ಬೃಹತ್​ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಮುರಳಿ ಮನೋಹರ್​ ಜೋಶಿ ಆಯೋಜಿಸಿದ್ದ ತಿರಂಗಾ ಯಾತ್ರೆಗೆ ಮೋದಿ ಸಂಚಾಲಕರಾಗಿದ್ದರು.

    ಇದನ್ನೂ ಓದಿ; ಹಿಂದಿಗಿಂತಲೂ ಭವ್ಯ, ಎತ್ತರ, ವಿಶಾಲ; ಹೇಗಿದೆ ಗೊತ್ತೆ ರಾಮ ಮಂದಿರದ ನೂತನ ವಿನ್ಯಾಸ..! 

    ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (370ನೇ ವಿಧಿ) ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದ ಈ ಯಾತ್ರೆ 1991ರಲ್ಲಿ ಆರಂಭವಾಗಿ 1992ರ ಜನವರಿ 18 ರಂದು ಅಯೋಧ್ಯೆಗೆ ಆಗಮಿಸಿತ್ತು. ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಬುಧವಾರಕ್ಕೆ ಒಂದು ವರ್ಷ ಸಂದಿದೆ.

    ಈ ಗ್ರಾಮದ ಪ್ರತಿ ಮಗುವಿನ ಕನಸು ಐಎಎಸ್​ ಅಧಿಕಾರಿಯಾಗುವುದು…! 50ಕ್ಕೂ ಹೆಚ್ಚು ಜನರು ಯಶಸ್ವಿ; ಒಂದೇ ಕುಟುಂಬದ 13 ಜನ ಪಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts