More

    ಆಗಸ್ಟ್​ 14 ಇನ್ಮುಂದೆ ವಿಭಜನಾ ವಿಭಿಶಿಕಾ ಸ್ಮೃತಿ ದಿವಸ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

    ನವದೆಹಲಿ: ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲಾಗದು, ಆಗಸ್ಟ್​ 14 ಇನ್ಮುಂದೆ “ವಿಭಜನಾ ವಿಭಿಶಿಕಾ ಸ್ಮೃತಿ ದಿವಸ” ಅಥವಾ “ವಿಭಜನಾ ಘೋರಾಪರಾಧ ಸ್ಮರಣೆ”ಯ ದಿನವಾಗಿ ನೆನಪಿನಲ್ಲಿ ಉಳಿಯಲಿದೆ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದರು.

    ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ವಿಭಜನೆಯ ನೋವನ್ನು ದೇಶವು ಎಂದಿಗೂ ಮರೆಯುವುದಿಲ್ಲ. ದ್ವೇಷ ಮತ್ತು ಹಿಂಸೆಯಿಂದಾಗಿ, ನಮ್ಮ ಲಕ್ಷಾಂತರ ಸಹೋದರ-ಸಹೋದರಿಯರು ಸ್ಥಳಾಂತರಗೊಂಡರು ಮತ್ತು ತಮ್ಮ ಜೀವಗಳನ್ನು ಸಹ ಕಳೆದುಕೊಂಡರು. ಆ ಜನರ ಹೋರಾಟ ಮತ್ತು ತ್ಯಾಗದ ಸ್ಮರಣೆಯಾಗಿ ಆಗಸ್ಟ್​ 14 ಅನ್ನು ವಿಭಿಶಿಕಾ ಮೆಮೊರಿಯಲ್​ ಡೇ ಎಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

    ವಿಭಜನಾ ಘೋರಾಪರಾಧ ಸ್ಮರಣಾ ದಿನವು ತಾರತಮ್ಯ, ವೈರತ್ವ ಮತ್ತು ದುರಾಸೆಯ ವಿಷವನ್ನು ತೊಡೆದುಹಾಕಲು ನಮಗೆ ಸ್ಫೂರ್ತಿ ನೀಡುವುದಲ್ಲದೆ, ಇದು ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಂವೇದನೆಗಳನ್ನು ಬಲಪಡಿಸುತ್ತದೆ “ಎಂದು ಪ್ರಧಾನಿ ಹೇಳಿದರು.

    ಅಂದಹಾಗೆ 1947, ಆಗಸ್ಟ್​ 14ರಂದು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಯಿತು. ಪಾಕಿಸ್ತಾನವು ಆಗಸ್ಟ್​ 14 ಅನ್ನು ಸ್ವಾತಂತ್ರ್ಯೋತ್ಸವ ದಿನವನ್ನಾಗಿ ಆಚರಿಸುತ್ತದೆ. (ಏಜೆನ್ಸೀಸ್​)

    ಅಫ್ಘಾನಿಸ್ತಾನದಲ್ಲಿನ ವಾಸ್ತವಾಂಶ ಬಿಚ್ಚಿಟ್ಟು ತಾಲಿಬಾನ್​ಗೆ ಎಚ್ಚರಿಕೆ ಸಂದೇಶ ರವಾನಿಸಿದ ವಿಶ್ವಸಂಸ್ಥೆ​

    ಕಿಡಿಗೇಡಿಗಳು ಮಾಡಿದ ಆ ಒಂದು ಕೃತ್ಯಕ್ಕೆ ನೋವಿನಲ್ಲಿ ದಿನ ದೂಡುತ್ತಿರುವ ಮಹಿಳೆಯ ಕಣ್ಣೀರ ಕತೆಯಿದು..!

    ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ: ಆ ಎರಡು ಸುಳಿವಿನಿಂದ ಸಿಕ್ಕಿಬಿದ್ದ ಆರೋಪಿಗಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts