More

    ‘ಆ ಕರಾಳ ಸಂದರ್ಭಕ್ಕೆ 45 ವರ್ಷಗಳು…’ಕಾಂಗ್ರೆಸ್​ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

    ನವದೆಹಲಿ: ಕಾಂಗ್ರೆಸ್​ನ ಇಂದಿರಾ ಗಾಂಧಿ ಪ್ರಧಾನಮಂತ್ರಿಯಾಗಿದ್ದಾಗ ಏಕಾಏಕಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಸಂದರ್ಭ, ಭಾರತದ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಕರಾಳವಾದ ದಿನಗಳು ಎಂದು ಪರಿಗಣಿಸಲ್ಪಟ್ಟಿದೆ.

    ಇಂದಿರಾ ಗಾಂಧಿಯವರು ಸ್ವ ಹಿತಕ್ಕಾಗಿ, ಒಮ್ಮೆಲೇ ದೇಶದಲ್ಲಿ ಎಮರ್ಜನ್ಸಿ ಘೋಷಿಸಿದ್ದರು. ಅದೆಷ್ಟೋ ಜನರ ಬದುಕು ಇದರಿಂದ ಅಲ್ಲೋಲಕಲ್ಲೋಲ ಆಗಿತ್ತು. ಹೀಗೆ ಹೇರಲಾದ ತುರ್ತು ಪರಿಸ್ಥಿತಿಯ ವಿರುದ್ಧ ಅಂದಿನ ವಿಪಕ್ಷಗಳ ನಾಯಕರು ಉಗ್ರ ಹೋರಾಟವನ್ನೇ ನಡೆಸಿದ್ದರು.

    ಯಾವುದೇ ನೈಸರ್ಗಿಕ ವಿಕೋಪ ಇಲ್ಲದೆ, ಯುದ್ಧ ಸನ್ನಿವೇಶ ಇಲ್ಲದೆ ಇದ್ದರೂ ಇಂದಿರಾ ಗಾಂಧಿಯವರು 1975ರ ಜೂನ್​25ರಂದು ರೇಡಿಯೋ ಮೂಲಕ ಒಮ್ಮೆಲೇ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಇಂದಿರಾಗಾಂಧಿಯವರ ಲೋಕಸಭೆಯ ಸಿಂಧುತ್ವ ಪ್ರಶ್ನಿಸಿ, ಅವರ ಪ್ರತಿಸ್ಪರ್ಧಿ ಅಲಹಾಬಾದ್​ನಲ್ಲಿ ಮೊಕದ್ದಮೆ ಹೂಡಿದ್ದರು. ಅದರ ತೀರ್ಪು ಇಂದಿರಾ ಗಾಂಧಿ ವಿರುದ್ಧವಾಗಿ ಹೊರಬಿದ್ದಿತ್ತು.

    ಕೋರ್ಟ್​ ತೀರ್ಪಿನ ಬೆನ್ನಲ್ಲೇ ಇಂದಿರಾ ಗಾಂಧಿಯವರು ರಾಜೀನಾಮೆ ಕೊಡಬೇಕು ಎಂಬ ಆಗ್ರಹ ಹೆಚ್ಚಾಯಿತು. ಇದರಿಂದಾಗಿ ಅವರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದರು ಅದರ ಜತೆಗೆ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದರು.

    ಇದೊಂದು ಅಸಂಬದ್ಧ ಎಮರ್ಜನ್ಸಿ ಎಂದು ಆರೋಪಿಸಿದ ವಿಪಕ್ಷಗಳ ಮುಖಂಡರು ಹೋರಾಟ ಪ್ರಾರಂಭಿಸಿದರು. ಅಂದಿನ ಜನತಾ ಪಕ್ಷದ ನಾಯಕ ಜಯಪ್ರಕಾಶ್​ ನಾರಾಯಣ್​ ಅವರ ನೇತೃತ್ವದಲ್ಲಿ ಚಳವಳಿ ತೀವ್ರಗೊಂಡಿತ್ತು. ಈ ತುರ್ತು ಪರಿಸ್ಥಿತಿ 1975ರ ಜೂನ್​ 25ರಿಂದ 1977ರ ಮಾರ್ಚ್​ವರೆಗೂ ಜಾರಿಯಲ್ಲಿತ್ತು. ಇದನ್ನೂ ಓದಿ: ತಲೆನೋವೇ ಈಕೆಗೆ ಅದೃಷ್ಟವಾಯ್ತು! ರಾತ್ರೋರಾತ್ರಿ ಆದ್ಳು ಕೋಟ್ಯಧಿಪತಿ…

    ಇಂದಿಗೆ ತುರ್ತು ಪರಿಸ್ಥಿತಿಗೆ 45ವರ್ಷವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿ, ಬಿಜೆಪಿಯ ಹಲವು ನಾಯಕರು ಮತ್ತೊಮ್ಮೆ ಆ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಅಂದು ಪ್ರಜಾಪ್ರಭುತ್ವದ ಉಳಿವಿಗಾಗಿ ತಮ್ಮ ಜೀವ, ಜೀವನವನ್ನೇ ಪಣಕ್ಕಿಟ್ಟು ಹೋರಾಡಿದವರನ್ನೆಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದನ್ನೂ ಓದಿ: 12 ಯೋಧರಲ್ಲಿ ಕರೊನಾ ದೃಢ; ಒಬ್ಬರಿಗೂ ಲಕ್ಷಣಗಳಿಲ್ಲ

    ಹಿಂದಿಯಲ್ಲಿ ಟ್ವೀಟ್​ ಮಾಡಿರುವ ಅವರು, 45 ವರ್ಷಗಳ ಹಿಂದೆ ಇದೇ ದಿನ ನಮ್ಮ ಭಾರತಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಆ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಿದವರು ಹಲವು ರೀತಿಯ ಹಿಂಸೆಯನ್ನು ಅನುಭವಿಸುವಂತಾಯಿತು. ಎಮರ್ಜಿನ್ಸಿ ಸಂದರ್ಭದಲ್ಲಿ ಹೋರಾಡಿದವರಿಗೆ ನಾನು ನನ್ನ ಹೃದಯಪೂರ್ವಕ ಗೌರವ ಸಲ್ಲಿಸುತ್ತೇನೆ. ಭಾರತ ಎಂದಿಗೂ ಅವರ ತ್ಯಾಗವನ್ನು ಮರೆಯುವುದಿಲ್ಲ ಎಂದು ಹೇಳಿದ್ದಾರೆ.

    ಗೃಹ ಸಚಿವ ಅಮಿತ್​ ಷಾ ಅವರು ಕೂಡ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಂಡು, ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 45 ವರ್ಷಗಳ ಹಿಂದೆ ಕುಟುಂಬವೊಂದು ಅಧಿಕಾರದ ದುರಾಸೆಯಿಂದ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿತು. ರಾತ್ರೋರಾತ್ರಿ ಇಡೀ ದೇಶವನ್ನು ಜೈಲಾಗಿ ಬದಲಿಸಿತು ಎಂದು ಸರಣಿ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಾಗೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರೂ ಕೂಡ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರದ ಹಸಿವನ್ನು ನೀಗಿಸಿಕೊಳ್ಳಲು ಅಂದಿನ ಪ್ರಧಾನಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದರು. ಈ ಮೂಲಕ ಪ್ರಜಾಭುತ್ವದ ನಿಯಮಗಳನ್ನೇ ಗಾಳಿಗೆ ತೂರಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ದುರಂತ ಅಂತ್ಯಕಂಡ ವಿದ್ಯಾರ್ಥಿನಿ

    ಹೀಗೆ ಬಿಜೆಪಿಯ ಹಲವು ಪ್ರಮುಖ ನಾಯಕರು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್​)

    ಬೆಂಗಳೂರು ಮತ್ತೆ ಲಾಕ್​ಡೌನ್​ ಆಗಲಿದೆಯಾ?: ಸಿಎಂ ಯಡಿಯೂರಪ್ಪನವರ ಆಶಯ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts