More

    12 ಯೋಧರಲ್ಲಿ ಕರೊನಾ ದೃಢ; ಒಬ್ಬರಿಗೂ ಲಕ್ಷಣಗಳಿಲ್ಲ

    ಕೊಹಿಮಾ: ದೇಶ ಕಾಯುವ ಯೋಧರನ್ನೂ ಕರೊನಾ ಮಹಾಮಾರಿ ಎಡೆಬಿಡದೆ ಕಾಡುತ್ತಿದೆ. ನಾಗಾಲ್ಯಾಂಡ್​ನ ಕೊಹಿಮಾ ಜಿಲ್ಲೆಯಲ್ಲಿ 12 ಸೇನಾ ಸಿಬ್ಬಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

    ಜಖಮಾ ಸೇನಾ ಕ್ಯಾಂಪ್​​ನ್ನು ಕ್ವಾರಂಟೈನ್​ ಸೆಂಟರ್​ ಆಗಿ ಪರಿವರ್ತಿಸಲಾಗಿದ್ದು, ಅದರಲ್ಲಿದ್ದ 12 ಯೋಧರಿಗೆ ಕರೊನಾ ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
    ಕಳೆದ ವಾರ ಹಲವು ಯೋಧರು ವಿವಿಧ ಭಾಗಗಳಿಂದ ಜಖಮಾ ಗ್ಯಾರಿಸನ್​ಗೆ ಆಗಮಿಸಿದ್ದರು. ಅವರನ್ನೆಲ್ಲ ಸೇನಾ ಶಿಬಿರದಲ್ಲಿಯೇ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು.

    ಈ ಶಿಬಿರದಲ್ಲಿದ್ದವರಲ್ಲಿ ಜೂ.19ರಂದು ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಜೂ.23ರಂದು ಇಬ್ಬರಲ್ಲಿ ಕರೊನಾ ಇರುವುದು ದೃಢಪಟ್ಟಿತ್ತು. ಇಂದು 12 ಮಂದಿಯಲ್ಲಿ ಸೋಂಕು ಇರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಒಟ್ಟು 15 ಯೋಧರನ್ನೂ ಆರ್ಮಿ ಆಸ್ಪತ್ರೆಗೆ ಅಡ್ಮಿಟ್​ ಮಾಡಲಾಗಿದೆ. ಇವರೆಲ್ಲರಿಗೂ ಕರೊನಾದ ಒಂದೂ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

    ನಾಗಾಲ್ಯಾಂಡ್​ನ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 347ಕ್ಕೆ ಏರಿದೆ. (ಏಜೆನ್ಸೀಸ್​)

    ಉದ್ಯೋಗ ಸೃಷ್ಟಿಗೆ ಇಸ್ರೋದಿಂದ ಮಹತ್ವದ ಘೋಷಣೆ: ಖಾಸಗಿಯವರಿಗೂ ತೆರೆದ ಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts