More

    ಮೊಯಿನುದ್ದೀನ್ ಚಿಶ್ತಿ ಪುಣ್ಯಸ್ಮರಣೆ; ಅಜ್ಮೇರ್​ ದರ್ಗಾಕ್ಕೆ ಪವಿತ್ರ ಚಾದರ ಅರ್ಪಿಸಿದ ಪ್ರಧಾನಿ ಮೋದಿ

    ನವದೆಹಲಿ:  ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅಜ್ಮೇರ್​ ದರ್ಗಾಗೆ ಪವಿತ್ರ ಚಾದರ ಅನ್ನು ಅರ್ಪಿಸಿ ನಮನ ಸಲ್ಲಿಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಮುಸ್ಲಿಂ ಸಮುದಾಯದ ನಿಯೋಗವನ್ನು ಭೇಟಿಯಾದೆ. ನಮ್ಮ ಸಂವಾದದ ಸಮಯದಲ್ಲಿ, ನಾನು ಪವಿತ್ರ ಚಾದರ್ ಅನ್ನು ನೀಡಿದ್ದು ಇದನ್ನು ಗೌರವಾನ್ವಿತ ಅಜ್ಮೇರ್​ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರೂಸ್ ಸಮಯದಲ್ಲಿ ಇರಿಸಲಾಗುವುದು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಶ್ರೀರಾಮಚಂದ್ರ BJP ಅವರ ಅಪ್ಪನ ಮನೆ ಆಸ್ತಿ ಅಲ್ಲ: ಪ್ರದೀಪ್​ ಈಶ್ವರ್

    ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ 812 ನೇ ವಾರ್ಷಿಕ ಉರೂಸ್ ಜನವರಿ 8 ರಂದು ಪ್ರಾರಂಭವಾಯಿತು. ಭಿಲ್ವಾರಾದ ಗೋರಿ ಕುಟುಂಬವು ಜನವರಿ 7 ರಂದು ಧ್ವಜಾರೋಹಣ ಮಾಡಿದೆ ಎಂದು ವರದಿಯಾಗಿದೆ. ಅಜ್ಮೀರ್ ದರ್ಗಾದ ಖಾದಿಮ್‌ಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಜನವರಿ 13 ರಿಂದ 21 ರವರೆಗೆ ದೇಗುಲದಲ್ಲಿ ಉರೂಸ್ ಪಾಲ್ಗೊಳ್ಳುವ ವ್ಯಕ್ತಿಗಳ ಸುರಕ್ಷತೆ ಖಾತರಿಪಡಿಸಲು ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

    ಸಂವಾದದ ವೇಳೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts